ನವದೆಹಲಿ: ಇಂದು ಬೆಳಗ್ಗೆ ಭಾರತ – ಪಾಕಿಸ್ಥಾನದ ಗಡಿಯಲ್ಲಿ ಡ್ರೋನ್ ಹಾರಾಟ ಕಂಡು ಬಂದಿದ್ದು, ಭಾರತೀಯ ಯೋಧರು ಇದನ್ನು ಗುಂಡು ಹಾರಿಸಿ ಹಿಮ್ಮೆಟ್ಟಿಸಿದ್ದಾರೆ.
ಮುಂಜಾನೆ ಸುಮಾರು 4.25 ರ ವೇಳೆಗೆ ಆರು ರೆಕ್ಕೆಗಳನ್ನು ಹೊಂದಿದ ಹೆಕ್ಸಾಕಾಪ್ಟರ್ ಪಾಕ್ ಗಡಿಯಿಂದ ಭಾರತದೊಳಕ್ಕೆ ಬರಲು ಯತ್ನಿಸಿದೆ. ಈ ಸಂದರ್ಭದಲ್ಲಿ ಎಚ್ಚೆತ್ತ ಭಾರತೀಯ ಭದ್ರತಾ ಪಡೆಗಳು ಡ್ರೋನ್ನತ್ತ ಕೆಲ ಸುತ್ತುಗಳ ಗುಂಡು ಹಾರಾಟ ನಡೆಸಿದ್ದಾರೆ. ಆ ಬಳಿಕ ಡ್ರೋನ್ ಹಿಂದೆ ತೆರಳಿದೆ ಎಂದು ಬಿಎಸ್ಎಫ್ ಮೂಲಗಳು ಹೇಳಿವೆ.
ಕಳೆದ ಭಾನುವಾರವಷ್ಟೇ ಜಮ್ಮುವಿನ ವಾಯುಪಡೆ ನಿಲ್ದಾಣ ದಾಳಿ ನಡೆದ ಬಳಿಕ ಸಾಲು ಸಾಲಾಗಿ ಡ್ರೋನ್ಗಳು ಪತ್ತೆಯಾಗಿವೆ. ಅಲ್ಲಿಂದ ಈ ವರೆಗೆ ಸುಮಾರು 7 ಡ್ರೋನ್ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.