ಮೈಸೂರು: ಮೈಸೂರು ದಸರೆಯ ಆಕರ್ಷಣೆಯಾದ ಅಂಬಾರಿ ಹಾಗೂ ರತ್ನಖಚಿತ ಸಿಂಹಾಸನ ಪಡೆಯಲು ರಾಜವಂಶಸ್ಥರಿಗೆ ಸರ್ಕಾರ ನೀಡುವ ಗೌರವ ಧನವನ್ನು ಪ್ರಶ್ನಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಲಾಗಿದೆ.
ಸರ್ಕಾರದ ಸ್ವಾಧೀನದಲ್ಲಿರುವ ಮೈಸೂರು ಅರಮನೆಯ ವಸ್ತುಗಳ ಪಟ್ಟಿಯಿಂದ ಅಂಬಾರಿ ಮತ್ತು ಸಿಂಹಾಸನದ ಹೆಸರು ಬಿಟ್ಟು ಹೋಗಿವೆ. ಇದು ಯಾರ ಸುಪರ್ದಿಯಲ್ಲಿದೆ ಎಂಬ ಗೊಂದಲ ಮೂಡಿದೆ. ಈ ಬಗ್ಗೆ ಇತಿಹಾಸ ತಜ್ಞ ಪ್ರೋ. ಪಿ.ವಿ.ನಂಜರಾಜನ್ ಅರಸ್ ಅವರ ವಕೀಲ ಎನ್.ಪಿ. ಅಮೃತೇಶ್ ನೋಟಿಸ್ ಜಾರಿಗೊಳಿಸಿದ್ದಾರೆ.
ಅಂಬಾರಿ ಹಾಗೂ ಸಿಂಹಾಸನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 2012ರಲ್ಲಿ 20 ಲಕ್ಷ, 2013ರಲ್ಲಿ 25 ಲಕ್ಷ ಮತ್ತು 2014ರಲ್ಲಿ 30 ಲಕ್ಷ ಗೌರವ ಧನ ನೀಡಿತ್ತು. ಅಲ್ಲದೇ ಸರ್ಕಾರ ಕೂಡ ಈ ರಾಜವಂಶಸ್ಥರಿಗೆ 2012ರಿಂದ 2014ರ ವರೆಗೆ 75 ಲಕ್ಷ ಗೌರವ ಧನ ನೀಡಿದೆ ಎಂದು ಮಾಹಿತಿ ಹಕ್ಕು ಅಡಿ ವರದಿ ಪಡೆಯಲಾಗಿದೆ.
ಮೈಸೂರು ಅರಮನೆ ಕಾಯ್ದೆ 1998ರ ಪ್ರಕಾರ ಅರಮನೆಯ ಎಲ್ಲ ಸ್ಥಿರ, ಚರ ಆಸ್ತಿಗಳು ಸರ್ಕಾರದ್ದಾಗಿದೆ. ಆದರೂ ಸರ್ಕಾರ ಗೌರವ ಧನ ನೀಡುತ್ತಿರುವುದನ್ನು ಪ್ರಶ್ನಿಸಿ ವಿವರಣೆ ನೀಡುವಂತೆ ನೋಟಿಸ್ ಜಾರಿ ಮಾಡಲಾಗಿದೆ. ಒಂದು ವೇಳೆ ವಿವರ ನೀಡದಿದ್ದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಲಾಗುವುದು ಎಂದೂ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.