ಕೋವಿಡ್ ಸೋಂಕು ಬರಿ ದೇಹಕ್ಕೆ ಮಾತ್ರವಲ್ಲ, ಬದಲಾಗಿ ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅದು ಶಿಕ್ಷಣ ಕ್ಷೇತ್ರ, ಕ್ರೀಡೆ ,ಸಿನಿಮಾ ,ರಾಜಕೀಯ ಹಾಗೂ ಎಲ್ಲಾ ಇತರ ಕ್ಷೇತ್ರದ ಮೇಲೆ ಅಪಾರ ಪರಿಣಾಮ ಬೀರಿದೆ.
ಜನರನ್ನೆಲ್ಲ ಪಂಜರದ ಗಿಳಿಯಂತಿರುವ ಪರಿಸ್ಥಿತಿಯಲ್ಲಿ ಕೊರೋನ ವೈರಸ್ ಮಾಡಿದೆ. ಮಾನವನ ಅತಿರೇಕದ ಕಾರಣದಿಂದಲೂ ಈ ಸ್ಥಿತಿ ಬಂದಿರಬಹುದು ಎಂದರೆ ತಪ್ಪಾಗಲಾರದು. ಜೊತೆಗೆ ಹೊಸ ಬದಲಾವಣೆಗೂ ಈ ಸಮಯ ಕಾರಣವಾಗಿದೆ ಎನ್ನಬಹುದು.
ಕಳೆದ ಎರಡು ದಶಕಗಳ ಅವಧಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಆಗಿರುವ ಬಹುದೊಡ್ಡ ಸಕಾರಾತ್ಮಕ ಬದಲಾವಣೆಯೊಂದರ ಮೂಲಕ ಈ ಫಲಿತಾಂಶಗಳನ್ನು ಅರ್ಥಮಾಡಿಕೊಳ್ಳಬೇಕು. ಎರಡು ಮೂರು ದಶಕಗಳ ಹಿಂದೆ ಶಾಲೆಗೆ ಸೇರುತ್ತಿದ್ದ ಮಕ್ಕಳ ಪ್ರಮಾಣವೆಷ್ಟು, ಈಗಿನ ಪ್ರಮಾಣವೆಷ್ಟು ಎಂಬುದನ್ನು ಹೋಲಿಸಿ ನೋಡಿದರೆ ಇದು ಅರ್ಥವಾಗುತ್ತದೆ. ಮಾಹಿತಿ ಸಂವಹನ ತಂತ್ರಜ್ಞಾನದ ಬಳಕೆಯ ಸಮಯದಲ್ಲಿ ಪಾಠದ ಯೋಜನೆ ನಿರ್ಣಾಯಕ ಮಾಹಿತಿ ಸಂವಹನ ತಂತ್ರಜ್ಞಾನಗಳ ಬಳಕೆ ಸಮಯದಲ್ಲಿ ಶಿಕ್ಷಕನ ಪಾಠ ಯೋಜನೆ ಬಹು ಮುಖ್ಯ. ಹಿಂದೆಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದು ಬಹುದೊಡ್ಡ ಸಾಧನೆ.
ಕೋವಿಡ್ ವೈರಸ್ ಇಂದಾಗಿ ವಿದ್ಯಾರ್ಥಿಗಳೆಲ್ಲ ಆನ್ಲೈನ್ ಶಿಕ್ಷಣ ಪಡೆಯುವಂತಾಯಿತು. ಓದುವವ ಎಲ್ಲೇ ಇದ್ದರೂ ಓದುತ್ತಾನೆ ಎಂಬ ಮಾತಿದೆ. ಆದರೆ ಅದಕ್ಕೆ ಸರಿಯಾದ ತಾಂತ್ರಿಕ ವ್ಯವಸ್ಥೆ ಇಲ್ಲದಿದ್ದರೆ ಓದಲು ಬಹಳ ಕಷ್ಟ. ಒಂದು ಕಡೆ ಕೋವಿಡ ವೈರಸ್ ಆರ್ಭಟ, ಮತ್ತೊಂದು ಕಡೆ ಆನ್ಲೈನ್ ಶಿಕ್ಷಣದ ತೊಂದರೆ. ಪೋಷಕರ ಸಮಸ್ಯೆ ತಮ್ಮ ಮಕ್ಕಳು ತಮ್ಮ ಮನೆಯಲ್ಲೇ ಇರುತ್ತಿಲ್ಲ, ಆನ್ಲೈನ್ ಕ್ಲಾಸ್ ಎಂದು ಹೇಳಿ ಗುಡ್ಡಬೆಟ್ಟಗಳನ್ನು ಅಲೆಯುವ ಪರಿಸ್ಥಿತಿಯಾಗಿದೆ ಎಂಬುದು.
ಅತಿ ಸೂಕ್ತ ಸಂಪನ್ಮೂಲವನ್ನು ಆರಿಸಲು ಕೇವಲ ಒಂದು ತರಬೇತಿ ಸಾಲದು. ಅರ್ಹತೆ ನಿರ್ಧರಿಸಲು ಶಿಕ್ಷಕರಿಗೆ ಮಾಹಿತಿ ಸಂವಹನ ತಂತ್ರಜ್ಞಾನಗಳ ವ್ಯಾಪಕ ಮತ್ತು ನಿರಂತರ ಮಾಹಿತಿ ಬೇಕಾಗುತ್ತದೆ. ಕಲಿಕೆಯ ಗುಣಮಟ್ಟ ಕಡಿಮೆಯಾಗಿದೆ ಎಂದಾಕ್ಷಣ ನಾವೆಲ್ಲರೂ ಬೋಧಕರನ್ನು ಟೀಕಿಸಲು ಆರಂಭಿಸುತ್ತೇವೆ. ಅವರು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುತ್ತೇವೆ. ಇದರ ಬದಲಿಗೆ ನಿಜವಾದ ಸಮಸ್ಯೆ ಏನು ಎಂಬುದರತ್ತ ನಾವು ಗಮನಹರಿಸಬೇಕು.
ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಮಾಜದ ಮುಖ್ಯವಾದ ಪ್ರಕ್ರಿಯೆಯೊಂದನ್ನು ಶಿಕ್ಷಕ ನಡೆಸುತ್ತಿದ್ದಾನೆ ಎಂಬುದನ್ನೇ ನಾವು ಮರೆತಿರುತ್ತೇವೆ.
ಯಾವ ವಿದ್ಯಾರ್ಥಿಗಳಿಗೂ ಈ ಆನ್ಲೈನ್ ಶಿಕ್ಷಣ ಸ್ವಲ್ಪವೂ ಇಷ್ಟವಾಗುತ್ತಿಲ್ಲ. ಇಷ್ಟ-ಕಷ್ಟಗಳ ಪ್ರಶ್ನೆ ಅಲ್ಲ ಬದಲಾಗಿ ಯಾವ ಮಟ್ಟಿನ ಶಿಕ್ಷಣ ದೊರೆಯುತ್ತಿದೆ , ಎಲ್ಲಾ ಸೇರಿ ಕ್ಷೇತ್ರದ ಹಾಗೆ ಶಿಕ್ಷಣ ಕ್ಷೇತ್ರವು ವ್ಯಾಪಾರವಾಗಿದೆ. ಮಾಹಿತಿ ಸಂವಹನ ತಂತ್ರಜ್ಞಾನಗಳ ಮೂಲಕ ಹೊಸ / ಹೆಚ್ಚುವರಿ ಮಾಹಿತಿಗೆ ಅನಾವರಣ ವಾದರೆ ಸಾಲದು ಹೊಸ ಮತ್ತು ಹೆಚ್ಚಿನ ಮಾಹಿತಿಗೆ ಅನಾವರಣಗೊಳಿಸುವ ಬದಲು ವಿದ್ಯಾರ್ಥಿಗಳಿಗೆ ಯೋಚನೆ ಮಾಡಿ ತಮ್ಮ ಗ್ರಹಿಕೆಗಳನ್ನು ಕುರಿತು ಪ್ರಶ್ನೆ ಮಾಡಲು ಸವಾಲು ಒಡ್ಡಿದಾಗ ಮಾತ್ರ ಸಾಧನೆಯ ಪರಿಣಾಮಕಾರಿ ಮತ್ತು ಅತ್ಯುನ್ನತವಾಗುವುದು.
ಈಗಾಗಲೇ ವೃತ್ತಿನಿರತರಾಗಿರುವ ಶಿಕ್ಷಕರಿಗೆ ನೀಡುವ ತರಬೇತಿಗಳ ಮಾದರಿಯಲ್ಲೂ ಸಾಕಷ್ಟು ಬದಲಾವಣೆಗಳಾಗಬೇಕಾಗಿವೆ. ಅದಕ್ಕೆ ಸಾಕಷ್ಟು ಪ್ರಮಾಣದ ಹೂಡಿಕೆಯ ಅಗತ್ಯವೂ ಇದೆ. ಈಗ ನಾವು ಮಾದರಿ ಶೈಕ್ಷಣಿಕ ವ್ಯವಸ್ಥೆ ಎಂದು ಗುರುತಿಸುವ ಫಿನ್ಲೆಂಡ್ನಂಥ ದೇಶ ಕೂಡ ನಾವು ಎದುರಿಸಿದಂಥದ್ದೇ ಸವಾಲುಗಳನ್ನು ಎದುರಿಸಿತ್ತು ಎಂಬುದು ನಮಗೆ ನೆನಪಿರಬೇಕು.
ಆಕರ್ಷ ಆರಿಗ
ಎಸ್ ಡಿ ಎಮ್ ಸ್ನಾತಕೋತ್ತರ ಕಾಲೇಜು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.