ನವದೆಹಲಿ: ಕೊರೋನಾ ಪರಿಸ್ಥಿತಿ ನಿರ್ವಹಿಸುವ ಮಾರ್ಗಗಳು, ಇಂಡೋ – ಪೆಸಿಫಿಕ್ ಪ್ರದೇಶದಲ್ಲಿನ ಪರಿಸ್ಥಿತಿಯಲ್ಲಿ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಸಹಕಾರ ನೀಡುವುದಕ್ಕೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರೊಂದಿಗೆ ಚರ್ಚೆ ನಡೆಸಿದರು.
ಬ್ರಿಟನ್ಗೆ ನಾಲ್ಕು ದಿನಗಳ ಭೇಟಿಗಾಗಿ ತೆರಳಿರುವ ಅವರು, ಜಿ-7 ದೇಶಗಳ ವಿದೇಶಾಂಗ ಸಚಿವರ ಜೊತೆಗೆ ಸಭೆಯಲ್ಲಿ ಭಾಗವಹಿಸಿದರು. ಈ ಸಭೆಯಲ್ಲಿ ಬ್ಲಿಂಕೆನ್ ಅವರೊಂದಿಗೆ ಭಾರತಕ್ಕೆ ಕೊರೋನಾ ಸವಾಲು ಎದುರಿಸಲು ಬೆಂಬಲ, ಆಕ್ಸಿಜನ್, ರೆಮ್ಡೆಸಿವಿರ್ ಪೂರೈಕೆಗೆ ಸಂಬಂಧಿಸಿದಂತೆಯೂ ಹಲವು ಚರ್ಚೆಗಳನ್ನು ನಡೆಸಲಾಗಿದೆ.
ಇದೇ ವೇಳೆ ಕೊರೋನಾ ಹೋರಾಟದಲ್ಲಿ ಭಾರತದ ಜೊತೆಗೆ ಕೈ ಜೋಡಿಸಿರುವ ಅಮೆರಿಕಾಗೆ ಧನ್ಯವಾದ ಸಮರ್ಪಿಸಿದರು. ಈ ಸಭೆಯಲ್ಲಿ ಇಂಡೋ ಪೆಸಿಫಿಕ್ ಪ್ರದೇಶ, ಹವಾಮಾನ ಬದಲಾವಣೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಮಯನ್ಮಾರ್ಗೆ ಸಂಬಂಧಿಸಿದಂತೆಯೂ ಅಗತ್ಯ ಮಾತುಕತೆ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.