ನವದೆಹಲಿ: ಮನೋವೈದ್ಯಶಾಸ್ತ್ರದ ಹಿರಿಯ ಪ್ರಾಧ್ಯಾಪಕ ಮತ್ತು ಪ್ರಸ್ತುತ ನಿಮ್ಹಾನ್ಸ್ ನಿರ್ದೇಶಕ ಡಾ. ಬಿ.ಎನ್. ಗಂಗಾಧರ್ ಮತ್ತು ಇತರ ಮಾನಸಿಕ ಆರೋಗ್ಯ ತಜ್ಞರು ಬಹಿರಂಗ ಪತ್ರದ ಮೂಲಕ ಕೋವಿಡ್ ಸಂದರ್ಭದಲ್ಲಿ ಭೀತಿ ಉಂಟುಮಾಡುವುದನ್ನು ತಪ್ಪಿಸುವಂತೆ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ. ಶವಸಂಸ್ಕಾರಗಾರಗಳಿಂದ ಕೋವಿಡ್ -19 ಸಾವುಗಳನ್ನು ವರದಿ ಮಾಡುವ ಮಾಧ್ಯಮಗಳ ವರ್ತನೆಯನ್ನು ಅವರು ಖಂಡಿಸಿದ್ದಾರೆ ಮತ್ತು ಇದರಿಂದ ಜನರಲ್ಲಿ ಭೀತಿ ಸೃಷ್ಟಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ದಿನದ 24 ಗಂಟೆಯೂ ನಕಾರಾತ್ಮಕ ಮತ್ತು ನಿರಾಶಾವಾದಿ ವರದಿಗಳನ್ನು ಮಾಧ್ಯಮಗಳು ಪ್ರಕಟಿಸುವುದರಿಂದ ವ್ಯಕ್ತಿಯು ಎದುರಿಸಬಹುದಾದ ವಿವಿಧ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಈ ಪತ್ರದಲ್ಲಿ ತಜ್ಞರು ವಿವರವಾಗಿ ವಿವರಿಸಿದ್ದಾರೆ.
“ಸಮೂಹ ಮಾಧ್ಯಮಗಳಿಗೆ ಒಂದೇ ಸಮಯದಲ್ಲಿ ಲಕ್ಷಾಂತರ ಜನರೊಂದಿಗೆ ಸಂವಹನ ನಡೆಸುವ ಶಕ್ತಿ ಇದೆ. ತಲುಪುವಿಕೆಯು ತುಂಬಾ ದೊಡ್ಡದಾದಾಗ, ಪ್ರತಿ ಪದ, ಪ್ರತಿ ಚಿತ್ರ ಮತ್ತು ಪ್ರತಿಯೊಂದು ಸೂಕ್ಷ್ಮ ವ್ಯತ್ಯಾಸಗಳು ಮುಖ್ಯವಾಗುತ್ತವೆ” ಎಂದು ಪತ್ರ ಹೇಳಿದೆ.
ಕರೋನವೈರಸ್ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳು ಬಹಿರಂಗವಾಗಿ ನಕಾರಾತ್ಮಕ, ಧೈರ್ಯಗೆಡುವ ಮತ್ತು ಅವಕಾಶವಾದಿ ಪ್ರಸಾರವನ್ನು ಮಾಡುತ್ತಿವೆ ಎಂದು ಪತ್ರವು ಟೀಕಿಸಿದೆ.
“ಶವಸಂಸ್ಕಾರದ ಜಾಗದಲ್ಲಿ ದೇಹಗಳು ಉರಿಯುತ್ತಿರುವ ಚಿತ್ರಗಳು, ಸತ್ತವರ ಸಂಬಂಧಿಕರು ಅಸಹನೀಯ ಅಳು, ಭಾವನಾತ್ಮಕ ಆಕ್ರೋಶಗಳು ಮತ್ತು ಉನ್ಮಾದದ ವರದಿಗಾರರು ಜನರ ಮನಸ್ಸನ್ನು ಆಳವಾಗಿ ಪ್ರಭಾವಕ್ಕೆ ಒಳಪಡಿಸುತ್ತಾರೆ” ಎಂದು ಪತ್ರವು ಹೇಳಿದೆ.
“ಯಾರಾದರೂ ಕೋವಿಡ್-19 ಪಾಸಿಟಿವ್ ಬಂದಿದ್ದಾರೆ ಎಂದು ಊಹಿಸಿ. ಶವಸಂಸ್ಕಾರದ ಭೀತಿ ಉಂಟುಮಾಡುವ ವರದಿಯನ್ನು ಅವರು ನೋಡಿದರೆ, ಅದು ಅವರ ಮನಸ್ಸು ಮತ್ತು ಅವರ ಪ್ರೀತಿಪಾತ್ರರನ್ನು ತೀವ್ರವಾಗಿ ಬಾಧಿಸುತ್ತದೆ. ಕೋವಿಡ್ನಿಂದ ಅಪಾರ ಸಂಖ್ಯೆಯ ಜನರು ಚೇತರಿಸಿಕೊಳ್ಳುತ್ತಾರೆ ಎಂಬ ಅಂಶವು ಆಗ ಅವರಿಗೆ ಅಪ್ರಸ್ತುತವಾಗುತ್ತದೆ. ಚಿತ್ರಗಳು ಮತ್ತು ಭಾವನೆಗಳು ಮಾತ್ರ ಅವರಲ್ಲಿ ಉಳಿದು ಬಿಡುತ್ತವೆ” ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಮಾನಸಿಕ ಆರೋಗ್ಯ, ಸಕಾರಾತ್ಮಕ ಮನಸ್ಥಿತಿಯ ಅಗತ್ಯವನ್ನು ಒತ್ತಿಹೇಳಿರುವ ತಜ್ಞರು, ಭಯಪಡಿಸುವ ಮತ್ತು ಪ್ರಚೋದಿಸುವ ಪ್ರಸಾರವನ್ನು ತಪ್ಪಿಸುವಂತೆ ಮಾಧ್ಯಮವನ್ನು ವಿನಂತಿಸಿದ್ದಾರೆ.
“ಸತ್ಯಗಳನ್ನು ವರದಿ ಮಾಡಬಾರದು ಎಂದು ನಾವು ಹೇಳುತ್ತಿಲ್ಲ. ಉನ್ಮಾದ ಮತ್ತು ಭೀತಿ ಉಂಟುಮಾಡುವ ರೀತಿಯ ವರದಿಯನ್ನು ತಪ್ಪಿಸಬೇಕು ಎಂದು ನಾವು ಹೇಳುತ್ತಿದ್ದೇವೆ. ಭೀತಿ ಜನರನ್ನು ದುರ್ಬಲಗೊಳಿಸುತ್ತದೆ” ಎಂದು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
An open letter released by Dr. BN Gangadhar and other mental health professionals pic.twitter.com/C1lGhWbgu8
— ANI (@ANI) April 28, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.