ನವದೆಹಲಿ: ಫ್ರಾನ್ಸ್ನ ಮಿಲಿಟರಿ ಏರ್ಬೇಸ್ನಿಂದ ಐದನೇ ಬ್ಯಾಚ್ನ ರಫೆಲ್ ಫೈಟರ್ ಜೆಟ್ಗಳು ನಿನ್ನೆ ಭಾರತವನ್ನು ತಲುಪಿವೆ. ಐದು ದಿನಗಳ ಅಧಿಕೃತ ಫ್ರಾನ್ಸ್ ಭೇಟಿಯಲ್ಲಿರುವ ವಾಯುಸೇನಾ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಅವರು, ಮೆರಿಗ್ನಾಕ್ ಏರ್ ಬೇಸ್ನಲ್ಲಿ ಈ ರಫೆಲ್ಗಳ ಹಾರಾಟಕ್ಕೆ ಹಸಿರು ನಿಶಾನೆ ತೋರಿಸಿದರು.
ಫೈಟರ್ ಜೆಟ್ಗಳು ಫ್ರಾನ್ಸ್ ಮತ್ತು ಯುಎಇ ವಾಯುಸೇನೆಯ ಗಾಳಿಯಿಂದ ಗಾಳಿಗೆ ಇಂಧನ ತುಂಬುವಿಕೆಯ ಬೆಂಬಲದೊಂದಿಗೆ ಸುಮಾರು 8,000 ಕಿ.ಮೀ ದೂರ ನಾನ್ ಸ್ಟಾಪ್ ಕ್ರಮಿಸಿ ಭಾರತಕ್ಕೆ ಬಂದು ತಲುಪಿವೆ.
“ಫ್ರಾನ್ಸ್ನ ಮೆರಿಗ್ನಾಕ್ ಏರ್ಬೇಸ್ನಿಂದ ಹಾರಾಟ ಆರಂಭಿಸಿ ಏಪ್ರಿಲ್ 21 ರಂದು 5 ನೇ ಬ್ಯಾಚ್ ರಫೇಲ್ಸ್ ಭಾರತಕ್ಕೆ ಆಗಮಿಸಿವೆ. ಇವು ಸುಮಾರು 8,000 ಕಿಲೋಮೀಟರ್ ದೂರವನ್ನು ಫ್ರಾನ್ಸ್ ಮತ್ತು ಯುಎಇ ವಾಯುಸೇನೆಯ ಗಾಳಿಯಿಂದ ಗಾಳಿಗೆ ಇಂಧನ ತುಂಬುವಿಕೆಯ ಬೆಂಬಲದೊಂದಿಗೆ ನಾನ್ ಸ್ಟಾಪ್ ಆಗಿ ಕ್ರಮಿಸಿದವು. ಐಎಎಫ್ ಎರಡೂ ವಾಯುಪಡೆಗಳಿಗೆ ಸಹಕಾರಕ್ಕಾಗಿ ಧನ್ಯವಾದ ಸಲ್ಲಿಸುತ್ತದೆ “ಎಂದು ಭಾರತೀಯ ವಾಯುಪಡೆ ಟ್ವೀಟ್ ಮಾಡಿದೆ.
After a direct ferry from #MerignacAirBase, France, the 5th batch of Rafales arrived in India on 21 Apr. The fighters flew a distance of almost 8,000Kms with air-to-air refuelling support by @Armee_de_lair and UAE AF. IAF thanks both the Air Forces for their co-operation. pic.twitter.com/jp81vODCp2
— Indian Air Force (@IAF_MCC) April 21, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.