ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ ಕೂಡ ಒಂದು. ಸ್ವ-ಉದ್ಯೋಗ ಮಾಡುವ, ಉದ್ಯಮವನ್ನು ವಿಸ್ತರಣೆ ಮಾಡುವ ಅದಮ್ಯ ಆಸೆ ಮತ್ತು ಆಸಕ್ತಿ ಹೊಂದಿರುವವರಿಗೆಗೆ ಸಾಲ ಒದಗಿಸುವ ಮೂಲಕ ಅವರ ಕನಸನ್ನು ಈಡೇರಿಸುತ್ತದೆ ಈ ಯೋಜನೆ.
2015 ರ ಏಪ್ರಿಲ್ 8 ರಂದು ಕಾರ್ಪೊರೇಟ್-ಅಲ್ಲದ, ಕೃಷಿಯೇತರ ಸಣ್ಣ / ಸೂಕ್ಷ್ಮ ಉದ್ಯಮಗಳಿಗೆ 10 ಲಕ್ಷದವರೆಗೆ ಸಾಲವನ್ನು ಒದಗಿಸಲು ಮೋದಿ ಸರ್ಕಾರ ಪ್ರಾರಂಭಿಸಿದ ಯೋಜನೆ ಇಂದು ಲಕ್ಷಾಂತರ ಜನರ ಆಶೋತ್ತರಗಳನ್ನು ಈಡೇರಿಸುತ್ತಿದೆ. ಈ ಯೋಜನೆ ಇಂದಿಗೆ ಯಶಸ್ವಿ 6 ವರ್ಷಗಳನ್ನು ಪೂರೈಸಿದೆ.
ಈ ಯೋಜನೆಯಡಿ ದೇಶದ ಪ್ರತಿಯೊಂದು ವಾಣಿಜ್ಯ ಬ್ಯಾಂಕ್ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮೂಲಕ ಸಣ್ಣ ಉದ್ಯಮದಾರರಿಗೆ ಸರ್ಕಾರ ಸಾಲವನ್ನು ನೀಡುತ್ತಿದೆ. ಎಲ್ಲಾ ಸಾರ್ವಜನಿಕವಲಯದ ಬ್ಯಾಂಕ್, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ , ರಾಜ್ಯ ಸಹಕಾರಿ ಬ್ಯಾಂಕ್ , ನಗರ ಸಹಕಾರಿ ಬ್ಯಾಂಕುಗಳೂ ಕೂಡ ಮುದ್ರಾದ ಅಡಿಯಲ್ಲಿ ಬರುತ್ತವೆ. ಈ ಸಾಲ ನೀಡುವ ಯೋಜನೆಯನ್ನು ಮೊತ್ತದ ಆಧಾರದ ಮೇಲೆ ಮೂರು ವಿಧಗಳಾಗಿ ವಿಂಗಡಿಸಿದ್ದಾರೆ.
1. ಶಿಶು ಸಾಲ : 50,000 ರೂವರೆಗಿನ ಸಾಲ
2. ಕಿಶೋರ ಸಾಲ : 50,000 ರೂಪಾಯಿಗಳಿಗಿಂತ ಮೇಲ್ಪಟ್ಟು 5ಲಕ್ಷ ರೂಪಾಯಿಗಳವರೆಗಿನ ಸಾಲ
3. ತರುಣ್ ಸಾಲ : 5ಲಕ್ಷ ದಿಂದ 10 ಲಕ್ಷದವರೆಗಿನ ಸಾಲ
ಯಾವುದೇ ಭಾರತೀಯ ನಾಗರಿಕ ಕೃಷಿಯೇತರ ಆದಾಯದ ಚಟುವಟಿಕೆಗೆ ಉದಾಹಣೆಗೆ ಉತ್ಪಾದನೆ, ಪರಿಷ್ಕರಣೆ, ವ್ಯಾಪಾರ ಅಥವಾ ಸೇವಾವಲಯ ಇವುಗಳಲ್ಲಿ ತೊಡಗಲು ಇಚ್ಛಿಸಿ ರೂ 10 ಲಕ್ಷದ ವರೆಗೆ ಸಾಲಪಡೆಯಲು ಬಯಸಿದಲ್ಲಿ ಬ್ಯಾಂಕ್, MFI, ಅಥವಾ NBFC ಸಂಪರ್ಕಿಸಿ ಮೈಕ್ರೋ ಯೂನಿಟ್ ಡೆವಲಪ್ಮೆಂಟ್ & ರಿಫೈನೆನ್ಸ್ ಏಜೆನ್ಸಿ ಲಿಮಿಟೆಡ್ (ಮುದ್ರಾ) ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಸಾಲ ಪಡೆಯಬಹುದು.
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಆರಂಭವಾದ ಬಳಿಕ ಇದುವರೆಗೆ ಅದರ ಅಡಿಯಲ್ಲಿ ರೂ 14.96 ಲಕ್ಷ ಕೋಟಿ ಮೌಲ್ಯದ ಸುಮಾರು 28.68 ಕೋಟಿ ಸಾಲ ಮಂಜೂರು ಮಾಡಲಾಗಿದೆ. ರೂ 2.66 ಲಕ್ಷ ಮೌಲ್ಯದ 4.20 ಕೋಟಿ ಸಾಲಗಳನ್ನು ವಿತ್ತ ವರ್ಷ 2020-21ರಲ್ಲಿ ಮಂಜೂರು ಮಾಡಲಾಗಿದೆ. ಬಹುತೇಕ 24% ಸಾಲಗಳನ್ನು ಹೊಸ ಉದ್ಯಮಿಗಳಿಗೆ ನೀಡಲಾಗಿದೆ.
2015ರಿಂದ 2018ರವರೆಗೆ ಈ ಯೋಜನೆ 1.12 ಕೋಟಿ ತಲಾ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಿದೆ, ಇದರಲ್ಲಿ 69 ಲಕ್ಷ ಮಹಿಳೆಯರು (62%) ಉದ್ಯೋಗವಕಾಶ ಪಡೆದಿದ್ದಾರೆ ಎಂಬುದು ವಿಶೇಷ. ಮಹಿಳಾ ಉದ್ಯಮಿಗಳಿಗೆ ಸುಮಾರು 68% ಸಾಲಗಳನ್ನು ನೀಡಲಾಗಿದೆ. ಸುಮಾರು 51% ಸಾಲಗಳನ್ನು ಎಸ್ಸಿ/ಎಸ್ಟಿ/ಒಬಿಸಿಯವರಿಗೆ ನೀಡಲಾಗಿದೆ.
ಸಾಲ ಪಡೆದವರ ಪೈಕಿ 22.53% ಎಸ್ಸಿ/ಎಸ್ಟಿಗಳು, 28.42% ಒಬಿಸಿಯವರು, ಸುಮಾರು 11% ಸಾಲಗಳನ್ನು ಅಲ್ಪಸಂಖ್ಯಾತ ಸಮುದಾಯದವರಿಗೆ ನೀಡಲಾಗಿದೆ ಎಂದು ಸರ್ಕಾರದ ಅಧಿಕೃತ ಮಾಹಿತಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.