ನವದೆಹಲಿ: ದೇಶದ ಭದ್ರತೆಯ ದೃಷ್ಟಿಯಿಂದ ಫ್ರಾನ್ಸ್ನಿಂದ ಖರೀದಿ ಮಾಡಲಾಗುತ್ತಿರುವ ರಫೇಲ್ ಯುದ್ಧ ವಿಮಾನಗಳಲ್ಲಿ 11 ವಿಮಾನಗಳು ಈ ಹಿಂದೆಯೇ ಅಂಬಾಲ ವಾಯುನೆಲೆಯನ್ನು ತಲುಪಿದ್ದು, ಮಾ.31 ರಂದು ಮತ್ತೆ ಮೂರು ವಿಮಾನಗಳು ವಾಯುನೆಲೆಗೆ ಬಂದಿಳಿಯಲಿವೆ ಎಂದು ಮೂಲಗಳು ತಿಳಿಸಿವ.
ಈ ಹಿಂದೆಯೇ ಫ್ರಾನ್ಸ್ನಿಂದ ದೇಶಕ್ಕೆ 11 ರಫೇಲ್ ಯುದ್ಧ ವಿಮಾನಗಳು ಬಂದಿಳಿದಿವೆ. ಇದರ ಮುಂದುವರಿದ ಭಾಗ ಎಂಬಂತೆ ನಾಳೆ ಮತ್ತೆ ಮೂರು ರಫೇಲ್ ಫೈಟರ್ ಜೆಟ್ಗಳು ಭಾರತದ ಅಂಬಾಲ ವಾಯುನೆಲೆಗೆ ಬಂದಿಳಿಯಲಿವೆ. ಆ ಮೂಲಕ ಒಟ್ಟು 14 ರಫೇಲ್ ಯುದ್ಧ ವಿಮಾನಗಳು ಅಂಬಾಲ ವಾಯು ನೆಲೆಯಲ್ಲಿ ನಿಯುಕ್ತಿಗೊಂಡಂತಾಗಿವೆ.
ಭಾರತೀಯ ವಾಯು ಸೇನೆಯ ಮೂವರು ಪೈಲಟ್ಗಳು ರಫೇಲ್ಗಳನ್ನು ಭಾರತಕ್ಕೆ ತರುವ ನಿಟ್ಟಿನಲ್ಲಿ ಫ್ರಾನ್ಸ್ ತಲುಪಿದ್ದು, ಅಲ್ಲಿಂದ ನಾಳೆ ಮುಂಜಾನೆ 7 ಗಂಟೆಗೆ ಈ ವಿಮಾನಗಳು ಭಾರತದತ್ತ ಯಾನ ಆರಂಭಿಸಲಿವೆ. ರಾತ್ರಿ 7 ಗಂಟೆಯ ಸುಮಾರಿಗೆ ಭಾರತಕ್ಕೆ ಈ ವಿಮಾನಗಳು ಪ್ರವೇಶಿಸಿ, ಅಂಬಾಲದಲ್ಲಿ ಬಂದಿಳಿಯಲಿವೆ ಎಂಬುದಾಗಿ ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.