ವಾಷಿಂಗ್ಟನ್: ಭಾರತೀಯ ಅಮೆರಿಕನ್ ತಜ್ಞ ವೈದ್ಯ ವಿವೇಕ್ ಮೂರ್ತಿ ಅವರನ್ನು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್ ಅವರ ಸರ್ಜನ್ ಜನರಲ್ ಹುದ್ದಗೆ ಸೆನೆಟ್ ಅನುಮೋದನೆ ನೀಡಿದೆ.
ಡಾ. ವಿವೇಕ್ ಮೂರ್ತಿ ಅವರ ನಾಮನಿರ್ದೇಶನವನ್ನು ಸೆನೆಟ್ 57-43 ಮತಗಳ ಮೂಲಕ ಅನುಮೋದಿಸಿತು. ರಿಪಬ್ಲಿಕನ್ ಪಕ್ಷದ ಏಳು ಸೆನೆಟರ್ಗಳು ಸಹ ಡಾ. ಮೂರ್ತಿ ಅವರಿಗೆ ಬೆಂಬಲ ಸೂಚಿಸಿದರು.ಈ ಮೊದಲು ಬರಾಕ್ ಒಬಾಮ ಆಡಳಿತದಲ್ಲಿ ಸರ್ಜನ್ ಜನರಲ್ ಹುದ್ದೆ ಅಲಂಕರಿಸಿದ ಕಿರಿಯ ವಯಸ್ಸಿನ ವೈದ್ಯ ಎನ್ನುವ ಹಿರಿಮೆಗೂ ವಿವೇಕ್ ಪಾತ್ರರಾಗಿದ್ದರು. ಟ್ರಂಪ್ ಅವಧಿಯಲ್ಲಿ ಈ ಹುದ್ದೆಯನ್ನು ತೊರೆದಿದ್ದರು.
ಅಮೆರಿಕಾದಲ್ಲೂ ವೈರಸ್ ಭೀತಿ ಹೆಚ್ಚಿರುವುದರಿಂದ ಬೈಡೆನ್ ಸರ್ಕಾರಕ್ಕೆ ವಿವೇಕ್ ಅವರು ನಿಯಂತ್ರಣ ಹೇಗೆ ಎಂಬುದಕ್ಕೆ ಸಂಬಂಧಿಸಿದಂತೆ ಸೂಚನೆ ನೀಡಲಿದ್ದಾರೆ. ಕೊರೋನಾ ಸೋಂಕು ನಿರ್ವಹಿಸುವುದು ಮೊದಲ ಆದ್ಯತೆಯಾಗಿದೆ ಎಂಬುದಾಗಿಯೂ ಅವರು ಹೇಳಿದ್ದಾರೆ.
ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಡಾ. ವಿವೇಕ್ ಮೂರ್ತಿ ಅವರು ಮೂಲತಃ ಕರ್ನಾಟಕದ ಮಂಡ್ಯ ಜಿಲ್ಲೆಯ ಹಲ್ಲೆಗೆರೆಯವರಾಗಿದ್ದು, ಅಮೆರಿಕಾದ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.