ನವದೆಹಲಿ: ಭಾರತದಲ್ಲಿ ತಯಾರಿಸಿದ ಕೊರೋನಾವೈರಸ್ ಲಸಿಕೆಗಳ ಮೊದಲ ಸಾಗಣೆ ಬುಧವಾರ ಬೆಳಿಗ್ಗೆ ಟೊರೊಂಟೊಗೆ ತಲುಪಿದೆ. ಅಸ್ಟ್ರಾಜೆನೆಕಾ ಲಸಿಕೆಯ 5 ಲಕ್ಷ ಡೋಸ್ಗಳ ರವಾನೆಯನ್ನು ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಇಲ್ಲಿಗೆ ಕಳುಹಿಸಿದೆ. ಇದನ್ನು ಕೆನಡಾದ ಪಾಲುದಾರ ವೆರಿಟಿ ಫಾರ್ಮಾಸ್ಯುಟಿಕಲ್ಸ್ ಸ್ವೀಕರಿಸಿದೆ.
ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ, “ಇಂದು ಬೆಳಿಗ್ಗೆ, ಸೀರಮ್ ಸಂಸ್ಥೆಯಿಂದ ನಮ್ಮ ಮೊದಲ ಅರ್ಧ ಮಿಲಿಯನ್ ಡೋಸ್ ಅಸ್ಟ್ರಾಜೆನೆಕಾ-ಆಕ್ಸ್ಫರ್ಡ್ ಲಸಿಕೆ ಕೆನಡಾಕ್ಕೆ ಬಂದಿದೆ. ದೇಶಾದ್ಯಂತ ಈ ಲಸಿಕೆಗಳ ಸಾಗಣೆಯನ್ನು ಸಂಘಟಿಸಲು ಕಾರ್ಯೋನ್ಮುಖರಾಗಿದ್ದೇವೆ. ಸಾಧ್ಯವಾದಷ್ಟು ಬೇಗ ಡೋಸ್ ಅನ್ನು ಜನರಿಗೆ ನೀಡುವುದು ನಮ್ಮ ಆದ್ಯತೆಯಾಗಿದೆ” ಎಂದಿದ್ದಾರೆ.
ಈ ಹಿಂದೆ ಜಸ್ಟಿನ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿ ಲಸಿಕೆಯನ್ನು ಕಳುಹಿಸಿಕೊಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಪ್ರಧಾನಿ ಕೂಡ ಸಂತೋಷದಿಂದಲೇ ಒಪ್ಪಿಕೊಂಡಿದ್ದರು. ಅದರಂತೆ ಇಂದು ಕೆನಡಾಗೆ ಲಸಿಕೆ ಪೂರೈಕೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಲಸಿಕೆಗಳು ಪೂರೈಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
The AZ/CoviShield vaccine is now in 🇨🇦. The first tranche of 500k doses arrived this morning from @SerumInstIndia with 1.5 million more doses to follow. Thank you to all whose hard work made this happen. We look forward to future collaboration. 🙏🏽 pic.twitter.com/OL4s0vlcdU
— Anita Anand (@AnitaOakville) March 3, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.