ಬೆಂಗಳೂರು: 50ನೇ ಸ್ವರ್ಣಿಮ್ ವಿಜಯ ವರ್ಷಾಚರಣೆಯ ಅಂಗವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಹಾವೀರ ಚಕ್ರ ಮತ್ತು ವೀರ್ ಚಕ್ರ ಪುರಸ್ಕೃತ ರಿಗೆ ಸನ್ಮಾನ ಮಾಡಿ ಮಾತನಾಡಿದರು.
ಶೌರ್ಯ ಪ್ರಶಸ್ತಿ ಪುರಸ್ಕೃತ ರಾಜ್ಯದ ವೀರ ಯೋಧರಿಗೆ ನೀಡಲಾಗುತ್ತಿರುವ ಗೌರವ ಧನವನ್ನು ಹೆಚ್ಚಿಸಲಾಗುತ್ತದೆ. ಮಹಾವೀರಚಕ್ರ ಪುರಸ್ಕೃತ ಯೋಧರಿಗೆ ನೀಡುವ ಗೌರವ ಧನವನ್ನು 12 ಲಕ್ಷದಿಂದ 50 ಲಕ್ಷ ರೂ. ಗಳಿಗೆ, ವೀರಚಕ್ರ ಪುರಸ್ಕೃತ ಯೋಧರಿಗೆ ನೀಡಲಾಗುವ ಗೌರವ ಧನವನ್ನು 8 ರಿಂದ 25 ಲಕ್ಷಕ್ಕೆ, ಶೌರ್ಯ ಚಕ್ರ ಪುರಸ್ಕೃತರಿಗೆ ನೀಡುವ ಗೌರವಧನವನ್ನು 25 ಲಕ್ಷಕ್ಕೆ, ಕೀರ್ತಿ ಚಕ್ರ ವಿಜೇತರಿಗೆ 12 ರಿಂದ 50 ಲಕ್ಷ ರೂ. ಗಳಿಗೆ ಗೌರವ ಧನವನ್ನು ಹೆಚ್ಚಳ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ವೇಳೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್ ಅಶೋಕ್, ದಕ್ಷಿಣ ಭಾರತದ ಎ. ಅರುಣ್, ಜಿ.ಓ.ಸಿ, ಕರ್ನಾಟಕ ಕೇರಳ ಸಬ್ ಏರಿಯಾ ಜಿ.ವಿ.ಪ್ರಸಾದ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಮೊದಲಾದವರು ಉಪಸ್ಥಿತರಿದ್ದರು.
ಉಪಮುಖ್ಯಮಂತ್ರಿ @LaxmanSavadi, ಗೃಹ ಸಚಿವ @BSBommai, ಕಂದಾಯ ಸಚಿವ @RAshokaBJP, ದಕ್ಷಿಣ ಭಾರತದ ಎ. ಅರುಣ್, ಜಿ.ಓ.ಸಿ, ಕರ್ನಾಟಕ ಕೇರಳ ಸಬ್ ಏರಿಯಾ ಜಿ.ವಿ.ಪ್ರಸಾದ್, ಕ್ಯಾಪ್ಟನ್ @GaneshKarnik, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಗೃಹ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್ ಮೊದಲಾದವರು ಉಪಸ್ಥಿತರಿದ್ದರು. (2/2)
— CM of Karnataka (@CMofKarnataka) March 2, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.