ಬೆಂಗಳೂರು: ಗ್ರಾಹಕ ಸೇವೆಗಳನ್ನು ಅಂಚೆ ಕಚೇರಿಯ ಮೂಲಕ ಆರಂಭ ಮಾಡಿದ ಬಳಿಕ, ಅಂಚೆ ಇಲಾಖೆಯ ವಹಿವಾಟು ಮತ್ತು ಆದಾಯ ಸಂಗ್ರಹದಲ್ಲಿ ಹೆಚ್ಚಳವಾದ ರಾಜ್ಯಗಳ ಪೈಕಿ ದೇಶದಲ್ಲಿಯೇ ಕರ್ನಾಟಕ ಎರಡನೇ ಸ್ಥಾನವನ್ನು ಕಾಯ್ದುಕೊಂಡಿದೆ.
ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಒಪ್ಪಂದ ಮಾಡಿಕೊಂಡು ನಾಗರಿಕ ಸೇವಾ ಕೇಂದ್ರಗಳನ್ನು ಕಳೆದ ವರ್ಷದ ಡಿ. 15 ರ ಬಳಿಕ ರಾಜ್ಯದ 1,701 ಅಂಚೆ ಕಚೇರಿಗಳ ಪೈಕಿ 851 ಅಂಚೆ ಕಚೇರಿಗಳಲ್ಲಿ ಆರಂಭ ಮಾಡಲಾಗಿದೆ. ಇದರ ಮುಖೇನ ಹಲವು ಉದ್ಯಮದಿಂದ ನಾಗರಿಕರವರೆಗೆ, ಸರ್ಕಾರದಿಂದ ನಾಗರಿಕ ಸೇವೆಗಳವರೆಗೆ ಸೇವೆಗಳನ್ನು ಪಡೆಯುವ ಅವಕಾಶವನ್ನು ಒದಗಿಸಲಾಗಿದೆ. ಅಂಚೆ ಕಚೇರಿಗಳಲ್ಲಿಯೇ ಗ್ರಾಹಕರು ಮೊಬೈಲ್ ರಿಚಾರ್ಜ್, ನೀರಿನ ಬಿಲ್ ಪಾವತಿ, ಗ್ಯಾಸ್, ವಿದ್ಯುತ್ ಬಿಲ್ಲುಗಳ ಪಾವತಿ, ವಿಮಾ ನವೀಕರಣ, ಇಎಂಐ ಪಾವತಿ, ವಿಮಾಣ, ರೈಲು, ಬಸ್ ಇತ್ಯಾದಿಗಳ ಟಿಕೆಟ್ ಬುಕ್ಕಿಂಗ್, ಇ ಸ್ಟಾಂಪಿಂಗ್ ಸೇವೆಗಳು, ಜೀವನ್ ಪ್ರಮಾಣ ಪತ್ರ ಮೊದಲಾದ ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಸಿಎಸ್ಸಿಗಳ ಮೂಲಕ ಈವರೆಗೆ 20 ಸಾವಿರಗಳಷ್ಟು ವಹಿವಾಟು ನಡೆಸಲಾಗಿದ್ದು, 61 ಲಕ್ಷಗಳಷ್ಟು ಆದಾಯ ಗಳಿಕೆ ಮಾಡಿರುವುದಾಗಿಯೂ ಅಂಚೆ ಕಚೇರಿಯ ಮೂಲಗಳು ತಿಳಿಸಿವೆ. ಸಾಮಾಜಿಕವಾಗಿ, ಅರ್ಥಿಕವಾಗಿ ಡಿಜಿಟಲ್ನಲ್ಲಿ ಎಲ್ಲರನ್ನು ಒಳಗೊಂಡ ಸಮಾಜವನ್ನು ನಿರ್ಮಿಸಲು ಈ ಸೇವೆಗಳು ಉಪಯುಕ್ತವಾಗಿವೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.