ನವದೆಹಲಿ : ಪ್ರಧಾನಿ ಮೋದಿ ಅವರು 2021 ರ ಫೆಬ್ರವರಿ 27 ರಂದು ಬೆಳಗ್ಗೆ 11 ಗಂಟೆಗೆ ವಿಡಿಯೋ ಕಾನ್ಪರೆನ್ಸ್ ಮೂಲಕ ಭಾರತೀಯ ಆಟಿಕೆ ಮೇಳ ಉದ್ಘಾಟಿಸಲಿದ್ದಾರೆ.
ಆಟಿಕೆಗಳು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಮಹತ್ವದ ಪಾತ್ರ ವಹಿಸಲಿದ್ದು, ಮನಸ್ಸಿನ ಚಟುವಟಿಕೆಗಳನ್ನು ಸುಧಾರಿಸುತ್ತದೆ ಮತ್ತು ಮಕ್ಕಳಲ್ಲಿ ಅರಿವಿನ ಕೌಶಲವನ್ನು ವೃದ್ಧಿಸುತ್ತವೆ. 2020ರ ಆಗಸ್ಟ್ನಲ್ಲಿ ಮನ್ ಕಿ ಬಾತ್ನಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಆಟಿಕೆಗಳು ಚಟುವಟಿಕೆಗಳು ಮತ್ತು ನಿರೀಕ್ಷೆಗಳ ಸಾಕಾರದ ಹೋರಾಟವನ್ನು ವೃದ್ಧಿಸುತ್ತದೆ. ಮಗುವಿನ ಸರ್ವಾಂಗೀಣ ಬೆಳವಣೆಗೆಯಲ್ಲಿ ಆಟಿಕೆಗಳ ಮಹತ್ವವನ್ನು ಮನಗಂಡಿರುವ ಪ್ರಧಾನಮಂತ್ರಿ ಅವರು, ಭಾರತದಲ್ಲಿ ಆಟಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ಪುಷ್ಟಿ ನೀಡಿದ್ಧಾರೆ. ಪ್ರಧಾನಮಂತ್ರಿ ಅವರ ಈ ದೃಷ್ಟಿಕೋನದ ಅನ್ವಯ 2021 ರ ಭಾರತೀಯ ಆಟಿಕೆ ಮೇಳ ಆಯೋಜಿಸಲಾಗಿದೆ.
ಮೇಳದ ಕುರಿತು
2021 ರ ಫೆಬ್ರವರಿ 27 ರಿಂದ ಮಾರ್ಚ್ 2 ರವರೆಗೆ ಈ ಮೇಳ ನಡೆಯಲಿದೆ. ಆಟಿಕೆಗಳ ಖರೀದಿದಾರರು, ಮಾರಾಟಗಾರರು, ವಿದ್ಯಾರ್ಥಿಗಳು, ಶಿಕ್ಷಕರು, ವಿನ್ಯಾಸಗಾರರು ಸೇರಿದಂತೆ ಎಲ್ಲಾ ಪಾಲುದಾರರನ್ನು ಒಂದೆಡೆ ಸೇರಿಸುವುದು ಈ ಮೇಳದ ಉದ್ದೇಶವಾಗಿದೆ. ದೇಶದಲ್ಲಿ ಉದ್ಯಮದ ಒಟ್ಟಾರೆ ಅಭಿವೃದ್ಧಿಗೆ ಸುಸ್ಥಿರ ಸಂಪರ್ಕಗಳನ್ನು ದೊರಕಿಸಿಕೊಡಲು ಮತ್ತು ಸಂವಾದವನ್ನು ಪ್ರೋತ್ಸಾಹಿಸಲು ಈ ವೇದಿಕೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಈ ವೇದಿಕೆಯ ಮೂಲಕ ಈ ವಲಯದಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಮತ್ತು ರಫ್ತು ಉತ್ತೇಜಿಸುವ ಮೂಲಕ ಅಟಿಕೆಗಳನ್ನು ತಯಾರಿಸುವ, ಸಂಗ್ರಹಣೆ ವಲಯದಲ್ಲಿ ಭಾರತವನ್ನು ಮುಂದಿನ ಜಾಗತಿಕ ಕೇಂದ್ರವನ್ನಾಗಿ ಮಾಡುವ ಕುರಿತ ಚರ್ಚೆಗಾಗಿ ಸರ್ಕಾರ ಮತ್ತು ಕೈಗಾರಿಕೆಗಳನ್ನು ಒಂದೆಡೆ ತರುತ್ತಿದೆ.
30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1000 ಕ್ಕೂ ಹೆಚ್ಚು ಪ್ರದರ್ಶಕರು ತಮ್ಮ ಉತ್ಪನ್ನಗಳನ್ನು ಇ-ಕಾಮರ್ಸ್ನ ವಲಯದ ಮೂಲಕ ಪ್ರದರ್ಶಿಸಲಿದ್ದಾರೆ. ಇದು ಭಾರತೀಯ ಸಾಂಪ್ರದಾಯಿಕ ಅಟಿಕೆಗಳು, ಎಲೆಕ್ಟ್ರಾನಿಕ್ ಅಟಿಕೆಗಳು, ಬೆಲೆ ಬಾಳುವ, ಒಗಟು, ಆಟಗಳನ್ನೊಳಗೊಂಡ ಆಧುನಿಕ ಆಟಿಕೆಗಳನ್ನು ಪ್ರದರ್ಶಿಸಲಾಗುತ್ತಿದೆ. ಆಟಿಕೆಗಳ ವಿನ್ಯಾಸ, ಉತ್ಪಾದನೆಯಲ್ಲಿ ನಿರೂಪಿತವಾಗಿರುವ ಸಾಮರ್ಥ್ಯ, ಭಾರತೀಯ ಮತ್ತು ಅಂತಾರಾಷ್ಟ್ರೀಯ ಪರಿಣತರೊಂದಿಗೆ ಹಲವಾರು ವೆಬಿನಾರ್ಗಳು, ತಜ್ಞರ ಜತೆ ಚರ್ಚಾಗೋಷ್ಠಿಗಳನ್ನು ಸಹ ಆಯೋಜಿಸಲಾಗಿದೆ. ಇದು ಚಟುವಟಿಕೆಯ ಸಮೃದ್ಧ ವೇದಿಕೆಯಾಗಿದ್ದು, ಆಟಿಕೆ ತಯಾರಿಕೆ, ವಸ್ತು ಸಂಗ್ರಹಾಲಯ, ಕಾರ್ಖಾನೆಗಳಿಗೆ ಭೇಟಿ, ಕರಕುಶಲ ಪ್ರದರ್ಶನ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.