ಬೆಂಗಳೂರು: ಮಂಗಳೂರು-ಬೆಂಗಳೂರು ನಡುವೆ ರೈಲಿನ ಮೂಲಕ ಪ್ರಯಾಣಿಸುವ ಜನರಿಗೆ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಅನುಕೂಲವಾಗುವಂತೆ ರೈಲಿಗೆ ಗಾಜಿನ ಛಾವಣಿಗಳನ್ನು ಅಳವಡಿಸಲಾಗುತ್ತಿದೆ.
ಮಂಗಳೂರು – ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಶೀಘ್ರದಲ್ಲೇ ವಿಸ್ಟಾಡೋಮ್ (ಗಾಜಿನ ಛಾವಣಿ) ಅಳವಡಿಸುವ ಸಂಬಂಧ ಯೋಜನೆ ರೂಪಿಸಲಾಗಿದೆ. ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ರೈಲು ಸೇವೆಗಳು ನಿಧಾನವಾಗಿ ಪುನರಾರಂಭವಾಗುತ್ತಿವೆ. ಮುಂದಿನ ಎಪ್ರಿಲ್ ವೇಳೆಗೆ ಪೂರ್ಣ ಪ್ರಮಾಣದಲ್ಲಿ ರೈಲು ಸೇವೆಗಳು ಆರಂಭವಾಗುವ ಎಲ್ಲಾ ಸಾಧ್ಯತೆಗಳೂ ಇವೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಪ್ರಕೃತಿ ಸೌಂದರ್ಯ ಸವಿಯಲು ಪೂರಕವಾಗುವಂತೆ ವಿಸ್ಟಾಡೋಮ್ ಅಳವಡಿಸಲಾಗುತ್ತದೆ. ಈ ಯೋಜನೆ ಸಮರ್ಪಕವಾಗಿ ಜಾರಿಯಾದಲ್ಲಿ ರೈಲು ಪ್ರಯಾಣಿಕರಿಗೆ ಸಕಲೇಶಪುರ -ಸುಬ್ರಹ್ಮಣ್ಯ ನಡುವಿನ ನೈಸರ್ಗಿಕ ಸಂಪತ್ತು ಸವಿಯಲು ಸಾಧ್ಯವಾಗಲಿದೆ.
ರೈಲ್ವೆ ಇಲಾಖೆಯಿಂದ ನೈಋತ್ಯ ರೈಲ್ವೆಗೆ ಈಗಾಗಲೇ ಗಾಜಿನ ಛಾವಣಿಗಳನ್ನು ಹಸ್ತಾಂತರ ಮಾಡಲಾಗಿದೆ. ಇದನ್ನು ಬೆಂಗಳೂರು – ಮಂಗಳೂರು ನಡುವೆ ಸಂಚರಿಸುವ ರೈಲುಗಳಿಗೆ ಅಳವಡಿಸಲಾಗುತ್ತದೆ. ಈಗಾಗಲೇ ಇರುವ ಎಂಜಿನ್ಗೆ ಈ ವಿಸ್ಟಾಡೋಮ್ಗಳನ್ನು ಅಳವಡಿಸಲಾಗುವುದು. ಒಂದು ಭೋಗಿಯಲ್ಲಿ 360 ಡಿಗ್ರಿ ತಿರುಗುವ ಸಾಮರ್ಥ್ಯದ 40 ಆಸನಗಳಿರಲಿದ್ದು, ಎಸಿ, ಜಿಪಿಎಸ್ ಆಧರಿತ ಮಾಹಿತಿ ವ್ಯವಸ್ಥೆ, ಮೈಕ್ರೋ ಒವೆನ್, ಸಣ್ಣ ರೆಫ್ರಿಜರೇಟರ್ ವ್ಯವಸ್ಥೆಯೂ ಇರಲಿದೆ.
🚂 Rail passengers travelling between #Bengaluru — #Mangaluru can soon get a panoramic view of the ghats section
🚂 Vistadome AC coach has been allocated to @SWRRLY
🚂 Vistadome coaches will have 40 reclining chairs that can rotate 360°
🚂 LED lights and GPS-based info system pic.twitter.com/5YMUDoCmqS
— P C Mohan (@PCMohanMP) February 11, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.