ನವದೆಹಲಿ: ಪ್ರಧಾನಿ ಮೋದಿ ಅವರು ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆ 2021 ನ್ನು ಫೆ.10 ರಂದು ಸಂಜೆ 6. 30 ರ ವೇಳೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಸಭೆಯ 20 ನೇ ಆವೃತ್ತಿ ಫೆಬ್ರವರಿ 10 ರಿಂದ 12 ರವರೆಗೆ ಆನ್ಲೈನ್ನಲ್ಲಿ ನಡೆಯಲಿದೆ. ‘Redefining Our Common Future: Safe and Secure Environment for All’ ಎಂಬ ಧ್ಯೇಯದ ಜೊತೆಗೆ ಈ ಬಾರಿಯ ಶೃಂಗಸಭೆಯನ್ನು ನಡೆಸಲಾಗುತ್ತಿದೆ. ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟದಲ್ಲಿ ಸರ್ಕಾರಗಳು, ಉದ್ಯಮಿಗಳು, ಶಿಕ್ಷಣ ತಜ್ಞರು, ಹವಾಮಾನ ತಜ್ಞರು, ಯುವಕರು ಮತ್ತು ನಾಗರಿಕ ಸಮಾಜವನ್ನು ಈ ಶೃಂಗಸಭೆಯು ಒಟ್ಟುಗೂಡಿಸಲಿದೆ. ಶಕ್ತಿ ಮತ್ತು ಕೈಗಾರಿಕಾ ಪರಿವರ್ತನೆ, ಹೊಂದಾಣಿಕೆ ಮತ್ತು ಸ್ಥಿತಿ ಸ್ಥಾಪಕತ್ವ, ಪ್ರಕೃತಿ ಆಧಾರಿತ ಪರಿಹಾರಗಳು, ಶುದ್ಧ ಸಾಗರಗಳು ಮತ್ತು ವಾಯುಮಾಲಿನ್ಯ ಮುಂತಾದ ವಿಷಯಗಳು ಶೃಂಗಸಭೆಯಲ್ಲಿ ಈ ಬಾರಿ ಚರ್ಚಿತವಾಗುವ ವಿಷಯಗಳಾಗಿವೆ.
ಶೃಂಗಸಭೆಯಲ್ಲಿ ಗಯಾನಾ ಅಧ್ಯಕ್ಷ ಡಾ. ಮೊಹಮ್ಮದ್ ಇರ್ಫಾನ್ ಅಲಿ, ಪಪುವಾ ನ್ಯೂಗಿನಿಯಾದ ಪ್ರಧಾನಮಂತ್ರಿ ಜೇಮ್ಸ್ ಮರಪೆ, ಮಾಲ್ಡೀವ್ಸ್ ಪೀಪಲ್ಸ್ ಮಜ್ಲಿಸ್ ಸ್ಪೀಕರ್ ಮೊಹಮ್ಮದ್ ನಶೀದ್, ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಅಮಿನಾ ಜೆ. ಮೊಹಮ್ಮದ್ ಮತ್ತು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಮೊದಲಾದವರು ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.