ನವದೆಹಲಿ: ಕೃಷಿ ಸುಧಾರಣೆಗಳ ಬಗ್ಗೆ ಹಠಾತ್ ‘ಯು-ಟರ್ನ್’ ಹೊಡೆದಿರುವ ವಿರೋಧ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದಾರೆ. ಹೊಸ ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಕೊನೆಗೊಳಿಸುವಂತೆ ಅವರು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದಾರೆ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆ ನಡೆಸಬೇಕು ಎಂದು ಕೇಳಿಕೊಂಡಿದ್ದಾರೆ.
ಎಂಎಸ್ಪಿ ಮುಂದುವರಿಯುತ್ತದೆ ಮತ್ತು 80 ಕೋಟಿ ಜನರಿಗೆ ಮಾಸಿಕ ಪಡಿತರ ಯೋಜನೆ ಸಹ ಇರುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
“ಎಂಎಸ್ಪಿ ಇತ್ತು, ಎಂಎಸ್ಪಿ ಇದೆ, ಎಂಎಸ್ಪಿ ಮುಂದೆಯೂ ಇರುತ್ತದೆ. ಬಡವರಿಗೆ ಕೈಗೆಟುಕುವ ಪಡಿತರ ಮುಂದುವರಿಯುತ್ತದೆ. ಮಂಡಿಗಳನ್ನು ಆಧುನೀಕರಿಸಲಾಗುತ್ತದೆ” ಎಂದು ಮೋದಿ ಹೇಳಿದ್ದಾರೆ.
“ಒಂದು ಹೆಕ್ಟೇರ್ಗಿಂತ ಕಡಿಮೆ ಭೂಮಿ ಇರುವ ರೈತರ ಸಂಖ್ಯೆ ಶೇಕಡಾ 68 ರಷ್ಟು ಏರಿಕೆಯಾಗಿದೆ ಮತ್ತು ಬೆಳೆ ವಿಮಾ ಯೋಜನೆಯಡಿ 90,000 ಕೋಟಿ ರೂ ವಿತರಿಸಲಾಗಿದೆ ಮತ್ತು ಕಿಸಾನ್ ಸಮ್ಮಾನ್ ನಿಧಿ ಮೂಲಕ 1.15 ಲಕ್ಷ ಕೋಟಿ ರೂ.ವಿತರಿಸಲಾಗಿದೆ. ಒಂದು ದೊಡ್ಡ ಸಾಮಾನ್ಯ ಮಾರುಕಟ್ಟೆಯಾಗುವ ತನ್ನ ಅಪಾರ ಸಾಮರ್ಥ್ಯವನ್ನು ಅರಿತುಕೊಳ್ಳುವ ಭಾರತದ ಹಾದಿಯಲ್ಲಿ ಬರುವ ಎಲ್ಲ ನ್ಯೂನ್ಯತೆಗಳನ್ನು ತೆಗೆದುಹಾಕುವುದು ನಮ್ಮ ಉದ್ದೇಶ” ಎಂದು ಪ್ರಧಾನಿ ಹೇಳಿದ್ದಾರೆ.
“ಸಿಖ್ಖರ ಕೊಡುಗೆಯ ಬಗ್ಗೆ ಭಾರತವು ತುಂಬಾ ಹೆಮ್ಮೆಪಡುತ್ತದೆ ಕೆಲವರು ಸಿಖ್ಖರನ್ನು ದೂಷಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಆರೋಪಿಸಿದರು.
“ಹೊಸ ಎಫ್ಡಿಐ-(foreign destructive ideology -ವಿದೇಶಿ ವಿಧ್ವಂಸಕ ಶಕ್ತಿ)ಗಳ ಬಗ್ಗೆ ಜಾಗರೂಕವಾಗಿ ಇರುವಂತೆ ಅವರು ದೇಶದ ಜನರಿಗೆ ಕರೆ ನೀಡಿದರು.
“ಪ್ರತಿ ಕಾನೂನು ಕೆಲವು ಸಮಯದ ನಂತರ ಉತ್ತಮ ಸಲಹೆಗಳೊಂದಿಗೆ ಬದಲಾಗುತ್ತದೆ. ಹೀಗಾಗಿ ಉತ್ತಮವಾದುದನ್ನು ಮಾಡಲು ನಾವಕ ಉತ್ತಮ ಸಲಹೆಗಳೊಂದಿಗೆ, ಉತ್ತಮ ಸುಧಾರಣೆಗಳ ತಯಾರಿಯೊಂದಿಗೆ ಮುಂದುವರಿಯಬೇಕಾಗಿದೆ. ದೇಶವನ್ನು ಮುನ್ನಡೆಸಲು, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ನಾವು ಪ್ರತಿಭಟನಾಕಾರರಿಗೆ ಅರ್ಥ ಮಾಡಿಸಿ ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಇದಕ್ಕಾಗಿ ನಾನು ಎಲ್ಲರನ್ನೂ ಆಹ್ವಾನಿಸುತ್ತೇನೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.