ಹೊಸ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಪ್ರತಿಭಟನೆ ಈಗಾಗಲೇ ಹೇಳಿ ತಪ್ಪಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ರೈತರ ಸಂಖ್ಯೆ ಎಷ್ಟಿದೆ ಎಂಬುದು ಗೊತ್ತಿಲ್ಲ, ಆದರೆ ಎಡಪಂಥೀಯರ, ಮತ್ತು ಖಲಿಸ್ತಾನಿ ಬೆಂಬಲಿಗರ ಸಂಖ್ಯೆಯಂತೂ ರೈತರಿಗಿಂತ ಹೆಚ್ಚಿದೆ ಎಂಬುದು ಸ್ಪಷ್ಟವಾಗುತ್ತಿದೆ. ಇದೀಗ ವಿದೇಶಿ ಸೆಲೆಬ್ರಿಟಿಗಳು, ಹೋರಾಟಗಾರರು ಎಂದು ಕರೆಸಿಕೊಂಡವರು ಈ ಪ್ರತಿಭಟನೆಯೊಳಗೆ ಮೂಗುತೂರಿಸಿ ಪ್ರತಿಭಟನೆಯ ಅಜೆಂಡಾವನ್ನು ಜಗಜ್ಜಾಹಿರುಗೊಳಿಸಿದ್ದಾರೆ. ಅದಲ್ಲೂ ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ಬರ್ಗ್ ಪ್ರತಿಭಟನೆಯನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಮಾಹಿತಿ ಇರುವ ಟೂಲ್ಕಿಟ್ ಅಂದರೆ ದಾಖಲೆಯನ್ನು ಹಂಚಿಕೊಂಡು ಈ ಪ್ರತಿಭಟನೆ ಭಾರತ ವಿರೋಧಿಯೇ ಹೊರತು, ರೈತಪರ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ತನ್ನ ಟ್ವಿಟ್ಟರ್ ಅವರು ಹ್ಯಾಂಡಲ್ನಲ್ಲಿ ಹಂಚಿಕೊಂಡಿರುವ ಡಾಕ್ಯುಮೆಂಟ್, ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಕೆಣಕುವ ಕೆಟ್ಟ ಪಿತೂರಿಯನ್ನು ಬಹಿರಂಗಪಡಿಸಿದೆ. ಮೊದಲು ಹಂಚಿಕೊಂಡ ಡಾಕ್ಯುಮೆಂಟನ್ನು ಅಳಿಸಿ ಆಕೆ ಇದೀಗ ಮತ್ತೊಂದನ್ನು ಟ್ವಿಟ್ ಮಾಡಿದ್ದಾರೆ. ಮೊದಲಿನದು ಔಟ್ಡೇಟೆಡ್ ಆಗಿತ್ತು ಅದಕ್ಕಾಗಿ ಅಳಿಸಿ ಹಾಕಿದ್ದೇನೆ ಎಂದಿದ್ದಾರೆ.
ಪ್ರತಿಭಟನೆಯ ಹೆಸರಿನಲ್ಲಿ ಭಾರತದ ಪ್ರಜಾಪ್ರಭುತ್ವವನ್ನು ಗುರಿಯಾಗಿಸುವ ಆಕೆಯ ಉದ್ದೇಶವನ್ನು ಟ್ವೀಟ್ ಬಹಿರಂಗಪಡಿಸಿದೆ.
ಈ ಡಾಕ್ಯುಮೆಂಟ್ ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಕೋಲಾಹಲವನ್ನು ಮತ್ತಷ್ಪು ಹೆಚ್ಚಿಸಲು ಬೇಕಾರ ವಿವರವಾದ ಯೋಜನೆಯನ್ನು ಹೊಂದಿದೆ.
ವಿಶ್ವದ ಮಾನವ ಇತಿಹಾಸದಲ್ಲಿ ನಡೆಯುವ ಅತಿದೊಡ್ಡ ಪ್ರತಿಭಟನೆಯಲ್ಲಿ ನೀವು ಭಾಗಿಯಾಗುತ್ತಿರಾ ಎಂಬ ಪ್ರಶ್ನೆಯೊಂದಿಗೆ ಈ ಡಾಕ್ಯುಮೆಂಟ್ ಆರಂಭವಾಗುತ್ತದೆ.
ಭಾರತವನ್ನು ಬಿಜೆಪಿ- ಆರ್ಎಸ್ಎಸ್ ಫ್ಯಾಸಿಸ್ಟ್ ಪಕ್ಷ ಆಳುತ್ತಿದೆ ಎಂದು ಹೇಳಿ ಜನವರಿ 21 ರಿಂದ ಫೆಬ್ರವರಿ 26ವರವರೆಗೆ ಎಲ್ಲಿ, ಹೇಗೆ ಪ್ರತಿಭಟನೆ ನಡೆಸಬೇಕು ಎಂಬುದರ ಬಗ್ಗೆ ಸಂಪೂರ್ಣವಾದ ವಿವರಗಳನ್ನು ನೀಡಲಾಗಿತ್ತು.
ಆರಂಭದಲ್ಲಿ ನೀವು ಎಲ್ಲಿದ್ದೀರೋ ಅಲ್ಲಿ ಪ್ರತಿಭಟನೆ ನಡೆಸಬೇಕು ಬಳಿಕ ಜ.23 ರಿಂದ ಟ್ವಿಟ್ಟರ್ನಲ್ಲಿ ಪ್ರತಿಭಟಿಸಬೇಕು. ಟ್ವೀಟ್ ಮಾಡುವಾಗ ಭಾರತದ ಪ್ರಧಾನಿ, ಕೇಂದ್ರ ಕೃಷಿ ಸಚಿವ ನರೇಂದ್ರ ಥೋಮರ್, ವಿಶ್ವ ವ್ಯಾಪಾರ ಸಂಸ್ಥೆ, ವಿಶ್ವ ಹಣಕಾಸು ನಿಧಿ, ವಿಶ್ವ ಬ್ಯಾಂಕ್ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಬೇಕು.
ಜ.26 ರಂದು ಭಾರತದ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಬೇಕು. ಬಳಿಕ ನಿಮ್ಮ ಸರ್ಕಾರದ ಪ್ರತಿನಿಧಿಗಳಿಗೆ ಮೇಲ್ ಮಾಡಿ ಭಾರತದ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ ಕೇಳಬೇಕು. ಭಾರತ ಸರ್ಕಾರ ನಡೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮಾಡಬೇಕು.
ಗ್ರೇಟ ಥನ್ಬರ್ಗ್ ಈ ರಹಸ್ಯ ದಾಖಲೆಗಳ ಮಾಹಿತಿನ್ನು ಟ್ವೀಟ್ ಮಾಡಿದ್ದ ಬಳಿಕ ಡಿಲೀಟ್ ಮಾಡಿದ್ದು ಯಾಕೆ ಎಂಬ ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ #GretaThunbergExposed ಟ್ರೆಂಡಿಗ್ ಆಗಿದೆ.
ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿ ಬಳಿಕ ಅಳಿಸಿದ ಪೂರ್ಣ ದಾಖಲೆಯ ವಿವರ ಇಲ್ಲಿದೆ:
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.