ಬೆಂಗಳೂರು: ಎಂಬತ್ತಮೂರು ಲಘು ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ- ಎಚ್ ಎ ಎಲ್ ನಡುವೆ ಇಂದು ಒಪ್ಪಂದ ಏರ್ಪಟ್ಟಿದೆ.
ಈ ಒಪ್ಪಂದಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ರಕ್ಷಣಾ ಸಚಿವಾಲಯದ ಪ್ರಧಾನ ನಿರ್ದೇಶಕ (ಖರೀದಿ ವಿಭಾಗ) ವಿ ಎಲ್ ಕಾಂತ ರಾವ್ ಮತ್ತು ಎಚ್ ಎ ಎಲ್ ನ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಆರ್ ಮಾಧವನ್ ಅವರು ಸಹಿ ಹಾಕಿದ್ದಾರೆ.
ಎಚ್ ಎ ಎಲ್ ಸಿದ್ಧಪಡಿಸುವ ಯುದ್ಧ ವಿಮಾನ ತೇಜಸ್ ಏಕ ಎಂಜಿನ್ ಬಹುಪಯೋಗಿಯಾಗಿದೆ. ಸೂಪರ್ ಸಾನಿಕ್ ಫೈಟರ್ ಜೆಟ್ ಇದಾಗಿದೆ. ಈ ಯುದ್ಧ ವಿಮಾನ ಪ್ರತಿಕೂಲ ವಾತಾವರಣದಲ್ಲಿಯೂ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲ ಸಾಮರ್ಥ್ಯ ಹೊಂದಿದೆ. ಕಳೆದ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಸದೀಯ ಸಮಿತಿ 73 ತೇಜಸ್ ಎಂಕೆ-ಐಎ ಆವೃತ್ತಿ ಹಾಗೂ 10 ಎಲ್ ಸಿಎ ತೇಜಸ್ ಎಂಕೆ-ಐ ಯುದ್ಧ ವಿಮಾನಗಳನ್ನು ಬೆಂಗಳೂರಿನ ಎಚ್ ಎ ಎಲ್ ನಿಂದ ಖರೀದಿಸಲು ಒಪ್ಪಿಗೆ ಸೂಚಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.