ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಯೋಜನೆ ಆರಂಭಗೊಂಡು ಇದೀಗ ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ರೈತರನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಯೋಜನೆಯ ಮುಖ್ಯ ಉದ್ದೇಶ. 2016 ರ ಜನವರಿ 13ರಂದು ಆರಂಭಗೊಂಡ ಈ ಯೋಜನೆಯಡಿ ಇದುವರೆಗೆ 90 ಸಾವಿರ ಕೋಟಿ ರೂಪಾಯಿಗಳನ್ನು ರೈತರಿಗೆ ಹಂಚಿಕೆ ಮಾಡಲಾಗಿದೆ.
ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಹಾಗೂ ಅಪಾಯ ಸಂಭಾವ್ಯತೆಯನ್ನು ಕಡಿಮೆ ಮಾಡಿ ರೈತರಿಗೆ ಕಡಿಮೆ ಬೆಲೆಗೆ ಬೆಳೆ ವಿಮೆ ಒದಗಿಸುವುದೇ ಈ ಯೋಜನೆಯ ಉದ್ದೇಶ.”ನಮ್ಮ ಕೃಷಿ ವಲಯ, ನಮ್ಮ ರೈತರು, ನಮ್ಮ ಗ್ರಾಮಗಳು ಆತ್ಮನಿರ್ಭರ ಭಾರತದ ಅಡಿಪಾಯಗಳಾಗಿವೆ. ಇವುಗಳು ಬಲಿಷ್ಠವಾದರೆ ಸ್ವಾವಲಂಬಿ ಭಾರತದ ಅಡಿಪಾಯ ಬಲಿಷ್ಟವಾಗುತ್ತದೆ” ಎಂದು ಮೋದಿ ಹೇಳಿದ್ದರು. ಅವರ ಆಶಯಕ್ಕೆ ಪೂರಕವಾಗಿ ಈ ಯೋಜನೆ ಕಾರ್ಯನಿರ್ವಹಿಸುತ್ತದೆ.
ರೈತರಿಗೆ ಬೆಳೆಗಳ ರಿಸ್ಕ್ ಕವರೇಜ್ ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರ ಇಟ್ಟ ಐತಿಹಾಸಿಕ ಹೆಜ್ಜೆ ಇದಾಗಿದೆ. ದೇಶಾದ್ಯಂತ ರೈತರಿಗೆ ಕಡಿಮೆ ಏಕರೂಪದ ಪ್ರೀಮಿಯಂನಲ್ಲಿ ಸಮಗ್ರ ಅಪಾಯ ಪರಿಹಾರವನ್ನು ಒದಗಿಸುವ ಮೈಲಿಗಲ್ಲು ಉಪಕ್ರಮವಾಗಿ ಈ ಯೋಜನೆಯನ್ನು ರೂಪಿಸಲಾಯಿತು. ಯೋಜನೆಯಲ್ಲಿ, ರೈತ ಪಾಲುಗಿಂತ ಹೆಚ್ಚಿನ ಪ್ರೀಮಿಯಂ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳು ಸಮಾನವಾಗಿ ಸಬ್ಸಿಡಿಯಾಗಿ ನೀಡುತ್ತವೆ.
ಈ ಯೋಜನೆ ರೈತರಿಗೆ ಅನಿರೀಕ್ಷಿತ ಬೆಳೆ ಹಾನಿಯಿಂದ ಸುರಕ್ಷತೆ ನೀಡುತ್ತದೆ. ಈ ಯೋಜನೆಯು ಬಿತ್ತನೆಯಿಂದ ಹಿಡಿದು ಕೊಯ್ಲಿನ ನಂತರದವರೆಗಿನ ಸಂಪೂರ್ಣ ಬೆಳೆ ಚಕ್ರಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಉಂಟಾಗಬಹುದಾದ ಬೆಳೆ ನಷ್ಟದಿಂದ ರಕ್ಷಣೆ ನೀಡುತ್ತದೆ. ಬರ, ಪ್ರವಾಹ, ಭೂಕುಸಿತ, ಪ್ರತಿಕೂಲ ವಾತಾವರಣ, ಆಲಿಕಲ್ಲು ಮಳೆ ಮುಂತಾದ ವಿಪತ್ತುಗಳು, ಬೆಳೆಗಳ ನಷ್ಟಕ್ಕೆ ಕಾರಣವಾಗುವ ಕೀಟ ಸೋಂಕುಗಳು, ಅಕಾಲಿಕ ಮಳೆಯಿಂದಾಗಿ, ಚಂಡಮಾರುತದಿಂದಾಗಿ ಬೆಳೆಗಳ ಕೊಯ್ಲಿನಿಂದ ಉಂಟಾಗುವ ನಷ್ಟ ಹೀಗೆ ಇವೆಲ್ಲವುದರಿಂದ ರೈತರಿಗೆ ಆಗುವ ನಷ್ಟವನ್ನು ಯೋಜನೆ ದೂರ ಮಾಡುತ್ತದೆ.
ನಿರಂತರವಾಗಿ ಸುಧಾರಣೆಗಳನ್ನು ತರುವ ಉದ್ದೇಶದಿಂದ, ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಎಲ್ಲಾ ರೈತರಿಗೆ ಸ್ವಯಂಪ್ರೇರಿತವನ್ನಾಗಿ ಮಾಡಲಾಗಿದೆ. ಅಲ್ಲದೆ, ವಿಮೆ ಮಾಡಿಸಿದ ಮೊತ್ತವನ್ನು ತರ್ಕಬದ್ಧಗೊಳಿಸಲು ರಾಜ್ಯಗಳಿಗೆ ಅವಕಾಶ ಒದಗಿಸಲಾಗಿದೆ ಇದರಿಂದ ಸಾಕಷ್ಟು ಪ್ರಯೋಜನವನ್ನು ರೈತರು ಪಡೆಯಬಹುದು. ಈ ಯೋಜನೆಯು 5.5 ಕೋಟಿ ರೈತರ ಅರ್ಜಿಗಳನ್ನು ಒಳಗೊಂಡಿದೆ ಮತ್ತು ಈವರೆಗೆ 90 ಸಾವಿರ ಕೋಟಿ ರೂಪಾಯಿ ಮೌಲ್ಯದ ಕ್ಲೇಮ್ಗಳನ್ನು ಯೋಜನೆಯಡಿ ಪಾವತಿಸಲಾಗಿದೆ. ಕೋವಿಡ್-19 ಲಾಕ್ ಡೌನ್ ಅವಧಿಯಲ್ಲಿ ಸಹ ಸುಮಾರು 70 ಲಕ್ಷ ರೈತರು ಪ್ರಯೋಜನ ಪಡೆದರು ಮತ್ತು 8 ಸಾವಿರ 741 ಕೋಟಿ ರೂಪಾಯಿಗಳ ಮೌಲ್ಯದ ಕ್ಲೇಮ್ ಅನ್ನು ಫಲಾನುಭವಿಗಳಿಗೆ ವರ್ಗಾಯಿಸಲಾಯಿತು.
2020ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವತ್ತ ಗುರಿ ಇಟ್ಟಿದೆ ಕೇಂದ್ರ ಸರ್ಕಾರ. ಗುರಿಯನ್ನು ತಲುಪುವ ನಿಟ್ಟಿನಲ್ಲಿ ಹಲವು ನೀತಿಯನ್ನು ರೂಪಿಸಲಾಗಿದೆ. ಇನ್ಪುಟ್ ವೆಚ್ಚ ಕಡಿತಗೊಳಿಸುವುದು, ಉತ್ಪನ್ನಗಳಿಗೆ ನ್ಯಾಯಯುತ ಮೌಲ್ಯವನ್ನು ನಿಗದಿಪಡಿಸುವುದು, ಸುಗ್ಗಿ ಅಥವಾ ಕಟಾವಿನ ಬಳಿಕ ನಷ್ಟವನ್ನು ಕಡಿಮೆ ಮಾಡುವುದನ್ನು ಖಚಿತಪಡಿಸುವುದು, ಆದಾಯ ವೃದ್ಧಿಸಲು ವಿಭಿನ್ನ ಯೋಜನೆ ರೂಪಿಸುವುದು, ಗದ್ದೆಯಿಂದ ಹಿಡಿದು ಮಾರುಕಟ್ಟೆಯ ವರೆಗೆ ರೈತರಿಗೆ ಪ್ರತಿ ಹಂತದಲ್ಲೂ ಸಹಾಯ ಮಾಡುವ ನಿಟ್ಟಿನಲ್ಲಿ ಇನ್ನಿಲ್ಲದ ಪರಿಶ್ರಮಪಡುತ್ತಿದೆ ಮೋದಿ ಸರ್ಕಾರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.