ವಿಭಿನ್ನ ಸಾಮರ್ಥ್ಯದ ದಿವ್ಯಾಂಗ ಸಮುದಾಯವನ್ನು ಸಬಲೀಕರಣಗೊಳಿಸುವ ಪ್ರಯತ್ನವಾಗಿ, ಮೀರತ್ನಲ್ಲಿ ರೆಸ್ಟೋರೆಂಟ್ವೊಂದನ್ನು ತೆರೆಯಲಾಗಿದೆ, ಇದರಲ್ಲಿ ಅಡುಗೆ ಪ್ರಕ್ರಿಯೆಯಿಂದ ಹಿಡಿದು ಗ್ರಾಹಕರ ಕೈಗೆ ಆಹಾರ ತಲುಪಿಸುವವರೆಗೆ ಎಲ್ಲಾ ಕಾರ್ಯವನ್ನೂ ದಿವ್ಯಾಂಗರೇ ನೋಡಿಕೊಳ್ಳುತ್ತಾರೆ.
ರೆಸ್ಟೋರೆಂಟ್ ಹೆಸರು ಪಂಡಿತ್ ಜಿʼಸ್ ಕಿಚನ್ ಆಂಡ್ ಡೆಲಿವರಿ ಪಾಯಿಂಟ್ನ ಸಂಸ್ಥಾಪಕರಲ್ಲಿ ಒಬ್ಬರಾದ ಅಮಿತ್ ಕುಮಾರ್ ಶರ್ಮಾ ಅವರು, ತಮ್ಮ ಪ್ರದೇಶದ ವಿಭಿನ್ನ ಸಾಮರ್ಥ್ಯದ ಸಮುದಾಯವನ್ನು ಸಬಲೀಕರಣಗೊಳಿಸುವುದು ಮತ್ತು ಅವರಿಗೆ ಜೀವನೋಪಾಯವನ್ನು ಗಳಿಸುವ ಅವಕಾಶವನ್ನು ನೀಡುವುದು ಈ ಉಪಕ್ರಮದ ಉದ್ದೇಶವಾಗಿದೆ ಎಂದು ಹೇಳುತ್ತಾರೆ.
“ಸಾಂಕ್ರಾಮಿಕ ರೋಗ ಬಂದ ಮೇಲೆ ನಾವು ನಿರುದ್ಯೋಗಿಗಳಾದೆವು, ಆದ್ದರಿಂದ ನಾವು ಈ ರೆಸ್ಟೋರೆಂಟ್ ಅನ್ನು ತೆರೆಯಲು ನಿರ್ಧರಿಸಿದೆವು. ಸಬಲೀಕರಣಗೊಳಿಸುವ ಉದ್ದೇಶದಿಂದ ನಾವು ವಿಭಿನ್ನ ಸಾಮರ್ಥ್ಯದ ಜನರನ್ನು ನೇಮಿಸಿಕೊಳ್ಳಬೇಕು ಎಂದು ನಾನು ಅಂದುಕೊಂಡೆವು. ಇಬ್ಬರು ವಿಭಿನ್ನ ಸಾಮರ್ಥ್ಯದ ಮಹಿಳೆಯರು ಆಹಾರವನ್ನು ಬೇಯಿಸುತ್ತಾರೆ ಮತ್ತು ಐದು ವಿಭಿನ್ನ ಸಾಮರ್ಥ್ಯದ ಪುರುಷರು ಸ್ಕೂಟರ್ ಮೂಲಕ ಆಹಾರ ಡೆಲಿವರಿ ಮಾಡುತ್ತಾರೆ. ಕಾರ್ಯದಲ್ಲಿ ಇದುವರೆಗೆ ನಾವು ಯಾವುದೇ ತೊಂದರೆಗಳನ್ನು ಎದುರಿಸಲಿಲ್ಲ”ಎಂದು ಶರ್ಮಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ರೆಸ್ಟೋರೆಂಟ್ನ ಮತ್ತೊಬ್ಬ ಸಂಸ್ಥಾಪಕ ಗೌತಮ್ ಅವರು ಮಾತನಾಡಿ, ನಾವು ರೆಸ್ಟೋರೆಂಟ್ ತೆರೆದ ಉದ್ದೇಶಕ್ಕೆ ಫುಡ್ ಡೆಲಿವರಿ ಅಪ್ಲಿಕೇಶನ್ಗಳು ಯಾವುದೇ ರೀತಿಯಲ್ಲೂ ಬೆಂಬಲ ನೀಡಲು ಬಯಸುವುದಿಲ್ಲವಾದ್ದರಿಂದ ನಾವು ಆಹಾರ ವಿತರಣಾ ಅಪ್ಲಿಕೇಶನ್ಗಳನ್ನು ಬಳಸುತ್ತಿಲ್ಲ ಎಂದು ಹೇಳಿದ್ದಾರೆ.
“ನಾವು ಇನ್ನೂ ವ್ಯವಹಾರದ ಆರಂಭಿಕ ಹಂತದಲ್ಲಿದ್ದೇವೆ ಮತ್ತು ರೆಸ್ಟೋರೆಂಟ್ ಅನ್ನು ಬಲಿಷ್ಠವಾಗಿ ಸ್ಥಾಪಿಸುತ್ತಿದ್ದೇವೆ. ಈ ಹೊಸ ಸಾಹಸಕ್ಕೆ ಹೋಗುವ ನಮ್ಮ ಮುಖ್ಯ ಗುರಿ ವಿಭಿನ್ನ ಸಾಮರ್ಥ್ಯವುಳ್ಳವರಿಗೆ ಒಂದು ವೇದಿಕೆಯನ್ನು ಒದಗಿಸುವುದರೊಂದಿಗೆ ಅವರು ಸ್ವಾವಲಂಬಿಯಾಗಲು ಮತ್ತು ಸಬಲರಾಗಲು ಅವಕಾಶ ಮಾಡಿಕೊಡುವುದು. ಆಹಾರ ವಿತರಣಾ ಅಪ್ಲಿಕೇಶನ್ಗಳೊಂದಿಗೆ ಹೊಂದಾಣಿಕೆ ಮಾಡಲು ನಾವು ಬಯಸುವುದಿಲ್ಲ ಏಕೆಂದರೆ ಅದು ನಮ್ಮ ಮುಖ್ಯ ಮಿಷನ್ನಿಂದ ನಮ್ಮನ್ನು ದೂರವಿರಿಸುತ್ತದೆ, ”ಎಂದು ಅವರು ಹೇಳಿದ್ದಾರೆ.
ಈ ಹೊಸ ಸಾಹಸದಿಂದ ನೌಕರರು ಸಹ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ. ಸಾಂಕ್ರಾಮಿಕ ಕಿತ್ತುಕೊಂಡ ಅವರ ಬದುಕು ಮತ್ತೆ ಹಳಿಗೆ ಮರಳುತ್ತಿದೆ.
“ಜನರು ನಮ್ಮನ್ನು ಕರುಣೆಯಿಂದ ನೋಡುವುದರಿಂದ ನಾವು ಬೇಸತ್ತಿದ್ದೇವೆ. ಈ ರೆಸ್ಟೋರೆಂಟ್ ನಮಗೆ ಸ್ವಾವಲಂಬಿಯಾಗಲು ಸಹಾಯ ಮಾಡಿದೆ, ಮತ್ತು ಈಗ ನಾವು ನಮ್ಮ ಮೇಲೆ ಮಾತ್ರ ಅವಲಂಬಿತರಾಗಿದ್ದೇವೆ. ನಾವು ಏನಾದರೂ ಮಾಡಲು ಬಯಸುತ್ತೇವೆ. ಅಂತಹ ಅವಕಾಶವನ್ನು ಪಡೆದಿದ್ದಕ್ಕಾಗಿ ನಾನು ಆಭಾರಿಯಾಗಿದ್ದೇನೆ ”ಎಂದು ಉದ್ಯೋಗಿಯೊಬ್ಬರು ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.