ನವದೆಹಲಿ: ಸತತ ನಾಲ್ಕನೇ ದಿನ ಬೆಲೆ ಕುಸಿತ ಮುಂದುವರೆದಿದ್ದು, ಚಿನ್ನದ ದರ ರೂ.40 ಕುಸಿದು ಪ್ರತಿ 10 ಗ್ರಂ.ಗೆ ರೂ.25,000ಕ್ಕೆ ಇಳಿದಿದೆ. ಇದು ಕಳೆದ 4 ವರ್ಷಗಳಲ್ಲೇ ಅತ್ಯಂತ ಕುಸಿತ ಕಂಡಿದೆ. ಆಭರಣ ಮಾರಾಟಗಾರರಿಂದ ಉತ್ತಮ ಬೇಡಿಕೆ ಇದ್ದರೂ ಚಿಲ್ಲರೆ ವ್ಯಾಪಾರಸ್ಥರು ಇನ್ನಷ್ಟು ಬೆಲೆ ಇಳಿಕೆಯ ಭರವಸೆಯಿಂದ ತಮ್ಮ ಕೊಳ್ಳುವಿಕೆಯನ್ನು ಮುಂಡೂಡಿದ್ದಾರೆ.
ಬೆಳ್ಳಿ ದರದಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡಿದ್ದು, 100 ರೂ.ಏರಿಕೆಯೊಂದಿಗೆ ಕೆಜಿ.ಗೆ ರೂ.33,800 ತಲುಪಿದೆ.
ರಾಜಧಾನಿ ದೆಹಲಿಯಲ್ಲಿ 99.9 ಹಾಗೂ 99.5 ಶುದ್ಧ ಚಿನ್ನವು ರೂ.40 ಕುಸಿದು ಪ್ರತಿ 10 ಗ್ರಾಂ.ಗೆ ರೂ.24,980 ಹಾಗೂ ರೂ.24,830 ತಲುಪಿದೆ. ಇದು ಆಗಸ್ಟ್, 2011ರ ನಂತರ ಅತ್ಯಂತ ದೊಡ್ಡ ಕುಸಿತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.