ನವದೆಹಲಿ: ಇಂದು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಪ್ರತಿವರ್ಷ ಡಿಸೆಂಬರ್ 7ರಂದು ಈ ದಿನವನ್ನು ಯೋಧರ ಗೌರವಾರ್ಥ ಆಚರಣೆ ಮಾಡುತ್ತಾ ಬರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಮೋದಿ, “ಸಶಸ್ತ್ರ ಪಡೆಗಳ ಧ್ವಜ ದಿನವು ನಮ್ಮ ಸಶಸ್ತ್ರ ಪಡೆಗಳಿಗೆ ಮತ್ತು ಅವರ ಕುಟುಂಬಗಳಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ವೀರರ ಸೇವೆ ಮತ್ತು ನಿಸ್ವಾರ್ಥ ತ್ಯಾಗದ ಬಗ್ಗೆ ಭಾರತ ಸದಾ ಹೆಮ್ಮೆಪಡುತ್ತದೆ” ಎಂದಿದ್ದಾರೆ.
“ನಮ್ಮ ಸಶಸ್ತ್ರ ಪಡೆಗಳ ಕಲ್ಯಾಣಕ್ಕಾಗಿ ಕೊಡುಗೆ ನೀಡಿ. ಈ ಕಾರ್ಯ ನಮ್ಮ ಅನೇಕ ಕೆಚ್ಚೆದೆಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುತ್ತದೆ” ಎಂದಿದ್ದಾರೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೂ ಟ್ವೀಟ್ ಮಾಡಿ, “ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಸಂದರ್ಭದಲ್ಲಿ, ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ಸೇವೆಗೆ ನಾನು ವಂದಿಸುತ್ತೇನೆ. ಮಾಜಿ ಸೈನಿಕರು, ವಿಭಿನ್ನ ಸಾಮರ್ಥ್ಯದ ಸೈನಿಕರು ಮತ್ತು ರಾಷ್ಟ್ರವನ್ನು ರಕ್ಷಿಸುವಲ್ಲಿ ಪ್ರಾಣ ಕಳೆದುಕೊಂಡ ಧೀರರ ಕುಟುಂಬಗಳ ಕಲ್ಯಾಣವನ್ನು ಖಾತರಿಪಡಿಸುವ ನಮ್ಮ ಗಂಭೀರ ಕರ್ತವ್ಯವನ್ನು ಈ ದಿನ ನಮಗೆ ನೆನಪಿಸಿಕೊಡುತ್ತದೆ” ಎಂದಿದ್ದಾರೆ.
Armed Forces Flag Day is a day to express gratitude to our armed forces and their families. India is proud of their heroic service and selfless sacrifice.
Do contribute towards the welfare of our forces. This gesture will help so many of our brave personnel and their families. pic.twitter.com/jqbemkbdRt
— Narendra Modi (@narendramodi) December 7, 2020
India is delighted to host the US Secretary of Defence, Dr. Mark Esper. Our talks today were fruitful, aimed at further deepening defence cooperation in a wide range of areas.
Today’s discussions will add new vigour to India-US defence relations & mutual cooperation. @EsperDoD pic.twitter.com/MMk11GkSZ1
— Rajnath Singh (@rajnathsingh) October 26, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.