ನವದೆಹಲಿ: ಚೀನಾ ಜೊತೆಗಿನ ಸಂಘರ್ಷದ ನಡುವೆ ಭಾರತ ಮತ್ತು ಅಮೆರಿಕಾದ ನಡುವೆ ನಿಕಟತೆಯು ಹೆಚ್ಚುತ್ತಿದೆ. ಇದರ ಸಂಕೇತವಾಗಿ, ಭಾರತೀಯ ನೌಕಾಪಡೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಣ್ಗಾವಲು ನಡೆಸಲು ಅಮೆರಿಕದ ಸಂಸ್ಥೆಯಿಂದ ಎರಡು ಪ್ರಿಡೇಟರ್ ಡ್ರೋನ್ಗಳನ್ನು ಲೀಸ್ಗೆ ಪಡೆದುಕೊಂಡಿದೆ ಮತ್ತು ಅದನ್ನು ಪೂರ್ವ ಲಡಾಖ್ನಲ್ಲಿನ ಎಲ್ಎಸಿಯಲ್ಲಿ ನಿಯೋಜನೆಗೊಳಿಸಲಿದೆ.
ಭಾರತ-ಚೀನಾ ಗಡಿ ಸಂಘರ್ಷವನ್ನು ಗಮನದಲ್ಲಿಟ್ಟುಕೊಂಡು ರಕ್ಷಣಾ ಸಚಿವಾಲಯ ನೀಡಿದ ತುರ್ತು ಖರೀದಿ ಅಧಿಕಾರದಡಿ ಅಮೆರಿಕ ಮೂಲದ ಡ್ರೋನ್ಗಳನ್ನು ನೌಕಾಪಡೆಯು ಸೇರ್ಪಡೆಗೊಳಿಸಿದೆ.
“ನವೆಂಬರ್ ಎರಡನೇ ವಾರದಲ್ಲಿ ಡ್ರೋನ್ಗಳು ಭಾರತಕ್ಕೆ ಬಂದಿವೆ ಮತ್ತು ನವೆಂಬರ್ 21 ರಂದು ಐಎನ್ಎಸ್ ರಾಜಾಲಿಯಲ್ಲಿರುವ ಭಾರತೀಯ ನೌಕಾಪಡೆಯ ನೆಲೆಯಲ್ಲಿ ಹಾರುವ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ” ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ಡ್ರೋನ್ಗಳು ಈಗಾಗಲೇ ಹಾರುವ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ ಮತ್ತು 30 ಗಂಟೆಗಳಿಗಿಂತ ಹೆಚ್ಚು ಕಾಲ ಗಾಳಿಯಲ್ಲಿ ಹಾರುವ ಸಾಮರ್ಥ್ಯದೊಂದಿಗೆ ಅವು ಕಡಲ ಪಡೆಗೆ ದೊಡ್ಡ ಆಸ್ತಿ ಎಂದು ಸಾಬೀತುಪಡಿಸುತ್ತಿವೆ. ಅಮೆರಿಕದ ಸಿಬ್ಬಂದಿಯೂ ಸಹ ದ್ರೋಣ್ ನಿರ್ವಹಿಸಲು ನೌಕಾಪಡೆಗೆ ಸಹಾಯ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಒಂದು ವರ್ಷ ಭಾರತದೊಂದಿಗೆ ಲೀಸ್ ಆಧಾರದಲ್ಲಿ ಇವುಗಳು ಕಾರ್ಯ ನಿರ್ವಹಿಸಲಿವೆ. ಇನ್ನ ಮೂರು ಭಾರತೀಯ ಪಡೆಗಳು ಅಮೆರಿಕದಿಂದ ಇನ್ನೂ 18 ಡ್ರೋನ್ಗಳನ್ನು ಖರೀದಿ ಮಾಡಲು ಸಜ್ಜಾಗಿವೆ ಎಂದು ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.