ಬಂಟ್ವಾಳ : ಅಂತರಾಷ್ಟ್ರೀಯ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಎ. 5 ರಂದು ಸಮಗ್ರ ಅಭಿವೃದ್ದಿಗಾಗಿ ಕಾವಳಮೂಡೂರು ಗ್ರಾಮ ದತ್ತು ಸ್ವೀಕಾರ, ಬೃಹತ್ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮ ಕಾವಳಕಟ್ಟೆ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷ ಗೋವರ್ಧನ್ ಶೆಟ್ಟಿ ತಿಳಿಸಿದ್ದಾರೆ.ಅವರು ಬಿ.ಸಿ.ರೋಡ್ ಪ್ರೆಸ್ಕ್ಲಬ್ನಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಿವರ ನೀಡಿದರು.
ಇಲ್ಲಿನ ಕಾವಳಕಟ್ಟೆ ರಾಜೀವಗಾಂಧಿ ಸೇವಾ ಕೇಂದ್ರದಲ್ಲಿ 4 ಸಾರ್ವಜನಿಕ ಶೌಚಾಲಯ, ಇಲ್ಲಿನ ಶಾಲಾ ರಸ್ತೆಗೆ ಸಂಪರ್ಕ ಕಲ್ಪಿಸುವ ಮೋರಿಗೆ ಸ್ಲಾಬ್ ನಿರ್ಮಾಣ, ಕಾವಳ ಮೂಡೂರು ಪಂಚಾಯತ್ ಕಛೇರಿ ಎದುರು ಪ್ರಯಾಣಿಕರ ತಂಗುದಾಣ ಉದ್ಘಾಟನೆ ನಡೆಯಲಿದೆ ಎಂದಿದ್ದಾರೆ.
ಜ| ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವು ನಡೆಯಲಿದೆ ಎಂದ ಅವರು ಆರೋಗ್ಯ ಶಿಬಿರವು ಬೆಳಿಗ್ಗೆ ೯ಗಂಟೆಯಿಂದ ಮಧ್ಯಾಹ್ನ 1ಗಂಟೆ ತನಕ ನಡೆಯುವುದು. ಸಾಮಾನ್ಯ ಪರೀಕ್ಷೆ, ಬಿಪಿ, ಮಧುಮೇಹ, ಇಸಿಜಿ ಸಹಿತ ಇತರ ಖಾಯಿಲೆಗಳ ತಪಾಸಣೆ, ಮಕ್ಕಳ, ಸ್ತ್ರೀಯರ ರೋಗ ತಜ್ಞ ವೈದ್ಯರು, ಚರ್ಮರೋಗ. ಮೂಳೆ, ನೇತ್ರ, ದಂತ, ಕೀಲು, ಕಿವಿ,ಮೂಗು, ಗಂಟಲು ಸಹಿತ ವಿವಿಧ ರೋಗಗಳ ತಪಾಸಣೆಯು ನಡೆಯಲಿದೆ ಎಂದು ತಿಳಿಸಿದರು.
ಸುಮಾರು 40ಲಕ್ಷ ವೆಚ್ಚದ ಸೇವಾ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮವು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅಧ್ಯಕ್ಷತೆಯಲ್ಲಿ ಉದ್ಘಾಟನೆ ನೆರವೇರಲಿದೆ ಇದೇ ವೇಳೆ ಸ್ಥಳೀಯ ಸರಕಾರಿ ಶಾಲೆಗೆ 4 ಕಂಪ್ಯೂಟರ್ನ ಕೊಡುಗೆಯನ್ನು ನೀಡಲಾಗುವುದೆಂದವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ. ಸದಸ್ಯ ಬಿ.ಪದ್ಮಶೇಖರ ಜೈನ್, ಲಯನ್ಸ್ ಕಾರ್ಯದರ್ಶಿ ಮನೋಹರ ಶೆಟ್ಟಿ, ಬಾಲಕೃಷ್ಣ ಅಂಚನ್ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.