ಮನುಷ್ಯನನ್ನು ಇನ್ನಿಲ್ಲದಂತೆ ಸತಾಯಿಸುವ ಹಲವು ಅಂಶಗಳಲ್ಲಿ ರೋಗವೂ ಸಹ ಒಂದು. ರೋಗ ಮಾನಸಿಕವೇ ಇರಲಿ ಅಥವಾ ದೈಹಿಕವೇ ಆಗಿರಲಿ ಮನುಷ್ಯನನ್ನು ಇನ್ನಿಲ್ಲದಂತೆ ಕಾಡಿ ಬಿಡುವ, ಹಿಂಡಿ ಹಿಪ್ಪೆ ಮಾಡುವಂತದ್ದು ರೋಗ. ಇಂತಹ ಕಾಡುವ ರೋಗವನ್ನು ಜಯಿಸುವ ಬಗೆ ತಿಳಿದವರಿಗೆ, ರೋಗ ನಿರೋಧಕ ಪ್ರತಿರೋಧಕತೆಗಳ ಜವಾಬ್ದಾರಿಯುತ ಬಳಕೆ ಬಗ್ಗೆ ತಿಳಿದಿದ್ದರೆ ಯಾವುದೇ ರೋಗಗಳಿಂದ ನಾವು ಮುಕ್ತಿ ಕಾಣುವುದು ಸಾಧ್ಯ. ನೆಮ್ಮದಿ ಗಳಿಸುವುದು ಸಾಧ್ಯ.
ಈ ಹಿನ್ನೆಲೆಯಲ್ಲಿ ಜನರಲ್ಲಿ ರೋಗ ನಿರೋಧಕ ಪ್ರತಿರೋಧಕತೆ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ‘ರೋಗ ನಿರೋಧಕ ಪ್ರತಿರೋಧಕತೆ ಜಾಗೃತಿ ಸಪ್ತಾಹ’ ವನ್ನು ರಾಜ್ಯದಲ್ಲಿ ನ. 18 ರಿಂದ ತೊಡಗಿದಂತೆ ನ.24 ರವರೆಗೆ ನಡೆಸಲು ನಿರ್ಧರಿಸಿದೆ. ಸನ್ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದರಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ, ನಿರೋಗಿಗಳಾಗುವುದು ಹೇಗೆ ಎಂಬುದರ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಸರ್ಕಾರ ಮುಂದಾಗಿದೆ.
ಈ ಸಪ್ತಾಹದಲ್ಲಿ ಜನರಿಗೆ, ರೋಗ ನಿರೋಧಕ ಪ್ರತಿರೋಧಕತೆಗಳ ಬಳಕೆ ಹೇಗೆ? ಎಂಬುದರ ಕುರಿತು ಸರ್ಕಾರ ಜಾಗೃತಿ ಮೂಡಿಸಲಾಗುತ್ತಿದೆ. ನಿಗದಿತ ಪ್ರಮಾಣ ಹಾಗೂ ಸೂಚಿಸಲಾದ ಅವಧಿಯಲ್ಲಿ ಮಾತ್ರವೇ ಆಂಟಿ ಬಯಾಟಿಕ್ಗಳನ್ನು ಬಳಕೆ ಮಾಡುವಂತೆ ಸರ್ಕಾರ ತಿಳಿಸಿದೆ. ಹಾಗೆಯೇ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬಾಧಿಸಿದರೆ ನಾವೇ ಸ್ವತಃ ವೈದ್ಯರಾಗುವುದಲ್ಲ. ಬದಲಾಗಿ, ವೈದ್ಯಕೀಯ ಸಿಬ್ಬಂದಿಗಳ ಸೂಕ್ತ ಸಲಹೆಗಳ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ಪರಿಹಾರ ಕಂಡುಕೊಳ್ಳುವಂತೆಯೂ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಅದರಂತೆಯೇ ಯಾವುದೇ ರೋಗಕ್ಕೂ ಈ ಹಿಂದೆ ತಂದಿರಿಸಿದ್ದ ಔಷಧಗಳ ಬಳಕೆ, ಆ್ಯಂಟಿ ಬಯಾಟಿಕ್ಗಳನ್ನು ಬಳಕೆ ಮಾಡುವುದು ಕೆಲವು ಬಾರಿ ಅಪಾಯಕ್ಕೆ ಎಡೆ ಮಾಡಿ ಕೊಟ್ಟಂತೆ. ಈ ಹಿನ್ನೆಲೆಯಲ್ಲಿ ಹೆಚ್ಚು ಜವಾಬ್ದಾರಿಯುತವಾಗಿ ಆ್ಯಂಟಿ ಬಯಾಟಿಕ್ಗಳನ್ನು ಬಳಕೆ ಮಾಡುವಂತೆ ಸೂಚಿಸಿದೆ. ಹಾಗೆಯೇ, ಆ್ಯಂಟಿ ಬಯಾಟಿಕ್ಗಳನ್ನು ದುರುಪಯೋಗ ಮಾಡಿದರೆ ಅವು ಪರಿಣಾಮ ಬೀರದು. ರೋಗಾಣುಗಳನ್ನು ನಾಶ ಮಾಡುವ ಶಕ್ತಿಯನ್ನೂ ಸಹ ಅವುಗಳು ಹೊಂದಿಲ್ಲ ಎಂದು ತಿಳಿಸಿವೆ. ಜೊತೆಗೆ, ಮೂರು ದಿನಗಳಿಗೂ ಹೆಚ್ಚು ಸಮಯ ಆರೋಗ್ಯ ಸಂಬಂಧಿತ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಸೂಚನೆಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳುವಂತೆಯೂ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿವೆ.
ಸಾಮಾನ್ಯ ರೋಗಗಳಾದ ಶೀತ, ಕೆಮ್ಮು, ಭೇದಿ ಮೊದಲಾದವುಗಳಿಗೆ ಆ್ಯಂಟಿ ಬಯಾಟಿಕ್ಗಳನ್ನು ಸೇವಿಸುವುದು ಸಮರ್ಪಕವಲ್ಲ. ಅದರ ಬದಲಿಗೆ ದ್ರವ ಆಹಾರಗಳ ಸೇವನೆ, ವಿಶ್ರಾಂತಿ ಪಡೆದುಕೊಳ್ಳುವುದು ಮೊದಲಾದವುಗಳನ್ನು ಅನುಸರಿಸಬೇಕು. ಇದರಿಂದ ರೋಗ ಉಪಶಮನ ಸಾಧ್ಯ. ಹಾಗೆಯೇ ಆಂಟಿ ಬಯಾಟಿಕ್ಗಳನ್ನು ತಯಾರಿಸಲು ಸಂಶೋಧಕರು, ಔಷಧ ತಯಾರಿಕಾ ಸಂಸ್ಥೆಗಳಿಗೆ ಅಪಾರವಾದ ಸಮಯಾವಕಾಶದ ಅಗತ್ಯತೆ ಇದೆ. ಅದು ದೀರ್ಘ ಕಾಲದ ಪ್ರಕ್ರಿಯೆ. ಈ ಹಿನ್ನೆಲೆಯಲ್ಲಿ ಮುಂದಿನವರಿಗೆ ರೋಗ ಪ್ರತಿರೋಧಕತೆಗಳನ್ನು ಉಳಿಸುವ ನಿಟ್ಟಿನಲ್ಲಿಯೂ ನಾವು ಹೆಚ್ಚಿನ ಎಚ್ಚರ ವಹಿಸುವಂತೆ ಸರ್ಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚಿಸಿದೆ. ಆ ಮೂಲಕ ಆ್ಯಂಟಿ ಬಯಾಟಿಕ್ಗಳ ಹೆಚ್ಚಿನ ಅವಶ್ಯಕತೆ ಇರುವವರಿಗೆ ಅವುಗಳು ದೊರೆಯುವಂತಾಗುವಲ್ಲಿ ಜನಸಾಮಾನ್ಯರ ಪ್ರಯತ್ನ ಸಹ ಅಗತ್ಯ ಎಂಬುದನ್ನು ಈ ಸಪ್ತಾಹದ ಮೂಲಕ ಜನರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಸರ್ಕಾರ, ಆರೋಗ್ಯ ಇಲಾಖೆ ಕ್ರಾಂತಿಕಾರಿ ಹೆಜ್ಜೆ ಇರಿಸಿದೆ.
ಆರೋಗ್ಯವೇ ಮಹಾಭಾಗ್ಯ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆರೋಗ್ಯ ಮನುಷ್ಯನ ಮಾನಸಿಕ ಮತ್ತು ದೈಹಿಕ ನೆಮ್ಮದಿಗಳನ್ನು ನಿರ್ಧರಿಸುವ ಬಹಳ ಮುಖ್ಯ ಅಂಶವೂ ಹೌದು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬ ಒಂದು ಸಣ್ಣ ಅರಿವು ನಮ್ಮಲ್ಲಿದ್ದರೆ, ನಮ್ಮ ಆರೋಗ್ಯದ ಕಾಳಜಿ ವಹಿಸುವುದು ಸುಲಭ. ಜೊತೆಗೆ ತೀರಾ ಅತ್ಯಗತ್ಯ ಎಂಬವರಿಗೆ ಲಭ್ಯವಿರುವ ಅಗತ್ಯ ಪ್ರತಿರೋಧಕತೆಗಳನ್ನು ಉಳಿಸಿಕೊಡಲು ಸಾಧ್ಯ. ಈ ಜಾಗೃತಿ ನಮ್ಮಲ್ಲಿ ಹುಟ್ಟಿಸಲೆಂದೇ ‘ರೋಗ ನಿರೋಧಕ ಪ್ರತಿರೋಧಕತೆ ಜಾಗೃತಿ ಸಪ್ತಾಹ’ ನಡೆಸಲು ಸರ್ಕಾರ ಮುಂದಾಗಿರುವುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.