ನವದೆಹಲಿ: 26/11ರ ಮುಂಬಯಿ ದಾಳಿಯ ಎಲ್ಲಾ ಯೋಜನೆಗಳು ಪಾಕಿಸ್ಥಾನದಲ್ಲೇ ರೂಪುಗೊಂಡಿದ್ದವು ಮತ್ತು ಅಲ್ಲಿಂದಲೇ ಕಾರ್ಯಗತಗೊಂಡಿದ್ದವು ಎಂಬುದನ್ನು ಆ ದೇಶದ ಮಾಜಿ ತನಿಖಾ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ. ಈ ಮೂಲಕ ಭಾರತದ ವಾದಕ್ಕೆ ಸಮರ್ಥನೆ ದೊರೆತಂತಾಗಿದೆ.
ಪಾಕಿಸ್ಥಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ ಮಾಜಿ ಜನರಲ್ ಡೈರೆಕ್ಟರ್ ತಾರೀಖ್ ಖೋಸ ಅವರು ಡಾನ್ ವೆಬ್ಸೈಟ್ಗೆ ಬರೆದ ‘ಮುಂಬಯಿ ಅಟ್ಯಾಕ್ ಟ್ರಯಲ್’ ಎಂಬ ಲೇಖನದಲ್ಲಿ ಈ ಎಲ್ಲಾ ಅಂಶಘಳನ್ನು ಬಹಿರಂಗಪಡಿಸಿದ್ದಾರೆ.
ಅಜ್ಮಲ್ ಕಸಬ್ ಪಾಕಿಸ್ಥಾನದವ ಮತ್ತು ದಾಳಿ ನಡೆಸಿದ ಎಲ್ಲಾ 10 ಮಂದಿಗೂ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯೇ ಸಿಂಧ್ನ ತಟ್ಟಾ ಶಿಬಿರದಲ್ಲಿ ತರಬೇತಿ ನೀಡಿತ್ತು ಎಂದು ಹೇಳಿಕೊಂಡಿದ್ದಾರೆ.
ಪಾಕಿಸ್ಥಾನ ಇದನ್ನು ಒಪ್ಪಿಕೊಳ್ಲಬೇಕು ಮತ್ತು ಸತ್ಯವನ್ನು ಎದುರಿಸಬೇಕು ಎಂದಿರುವ ಅವರು, ಮುಂಬಯಿ ಸ್ಫೋಟಕ್ಕೆ ಬಳಸಲಾದ ಸ್ಫೋಟಕಗಳು ಲಷ್ಕರ್ ತರಬೇತಿ ಕೇಂದ್ರದಲ್ಲಿ ಪತ್ತೆಯಾಗಿವೆ. ಬಳಿಕ ಭಾರತೀಯರಿಂದ ಹೈಜಾಕ್ ಮಾಡಿ ಉಗ್ರರು ಬಳಸಿದ್ದ ಮೀನುಗಾರಿಕ ದೋಣಿಯನ್ನು ಪಾಕಿಸ್ಥಾನದ ಹಾರ್ಬರ್ಗೆ ತರಲಾಗಿದ್ದು, ಅದಕ್ಕೆ ಬಣ್ಣ ಬಳಿದು, ಆಕಾರವನ್ನು ಬದಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕರಾಚಿಯ ಆಪರೇಶನ್ ರೂಮಿಂದ ಈ ಎಲ್ಲಾ ಯೋಜನೆಗಳನ್ನು ಕಾರ್ಯಗತಗೊಳಿಸಲಾಗಿದೆ. ಈ ರೂಮನ್ನು ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಅವರ ಲೇಖನದಿಂದಾಗಿ ತನಗೂ, ಮುಂಬಯಿ ಸ್ಫೋಟಕ್ಕೂ ಸಂಬಂಧವಿಲ್ಲ ಎನ್ನುತ್ತಿದ್ದ ಪಾಕ್ನ ಅಸಲಿ ಮುಖ ಬಯಲಾಗಿದೆ. ಇನ್ನು ಮೇಲಾದರೂ ಅದು ಮುಂಬಯಿ ದಾಳಿಕೋರರನ್ನು ಭಾರತಕ್ಕೆ ಹಸ್ತಾಂತರಿಸಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.