ಸುಬ್ರಹ್ಮಣ್ಯ : ರಕ್ತದಾನವು ಅತ್ಯಂತ ಶ್ರೇಷ್ಟಕಾರ್ಯವಾಗಿದೆ. ಜೀವ ಉಳಿಸಲು ಹಣಕ್ಕಿಂತಲೂ ರಕ್ತವೇ ಕೆಲವೊಮ್ಮೆ ಮುಖ್ಯವಾಗುತ್ತದೆ. ಹೀಗಾಗಿ ಈ ದಾನ ಕಾರ್ಯವು ನಿರಂತರವಾಗಿರಬೇಕು ಎಂದು ತಾಪಂ ಸದಸ್ಯ ಮುಳಿಯ ಕೇಶವ ಭಟ್ ಹೇಳಿದರು.
ಅವರು ಶನಿವಾರ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುಳ್ಳೇರಿಯಾ ಹವ್ಯಕ ಮಂಡಲ , ಗುತ್ತಿಗಾರು ವಲಯ ಹವ್ಯಕ ಪರಿಷತ್ತು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಗುತ್ತಿಗಾರು ಯುವಕ ಮಂಡಲ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಮತ್ತು ವೆನ್ಲಾಕ್ ಬ್ಲಡ್ಬ್ಯಾಂಕ್ ಸಹಯೋಗದೊಂದಿಗೆ ಪುಚ್ಚಪ್ಪಾಡಿಯ ದಿ.ರೂಪಾ ಇವರ ನೆನಪಿಗಾಗಿ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ರಕ್ತವನ್ನು ಯಾವುದೇ ಕಾರಣದಿಂದಲೂ ಉತ್ಪಾದಿಸುವುದಕ್ಕೆ ಸಾಧ್ಯವಿಲ್ಲ, ಹೀಗಾಗಿ ಇದು ದಾನದ ಮೂಲಕವೇ ಲಭ್ಯವಾಗಬೇಕಿದೆ.ಇದಕ್ಕಾಗಿ ಎಲ್ಲರೂ ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವ ಕೆಲಸವಾಗಬೇಕಿದೆ ಎಂದರು.ಈಗ ಸರ್ಕಾರವು ಆರೋಗ ಕಾಳಜಿಗಾಗಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದೆ, ಇದರ ಸದ್ಭಳಕೆಯಾಗಬೇಕಿದೆ ಎಂದರು.
ಮುಖ್ಯಅತಿಥಿಯಾಗಿದ್ದ ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಂದಕುಮಾರ್, ರಕ್ತದಾನವು ಯಾವುದೇ ಒತ್ತಡಕ್ಕೆ ಆಮಿಷಕ್ಕೆ ಒಳಗಾಗಿ ನೀಡುವ ಕಾರ್ಯವಲ್ಲ, ಅದು ಸ್ವಯಂಪ್ರೇರಿತವಾಗಿ ನಡೆಸುವ ಕೆಲಸ.ಈ ಮೂಲಕ ಮನುಷು ವೀವನ್ನು ಉಳಿಸುವ ಕೆಲಸವಾಗುತ್ತದೆಎಂದರು.ಸಭಾಧ್ಯಕ್ಷತೆ ವಹಿಸಿದ್ದ ಗುತ್ತಿಗಾರು ವಲಯ ಹವ್ಯಕ ಪರಿಷತ್ತು ಅಧ್ಯಕ್ಷ ಗಂಗಾಧರ ಭಟ್ ಪುಚ್ಚಪ್ಪಾಡಿ, ಕಳೆದ 3 ವರ್ಷಗಳಿಂದ ಗುತ್ತಿಗಾರಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗುತ್ತಿದೆ,ಈ ಮೂಲಕ ಸಮಾಜದ ಎಲ್ಲಾ ವರ್ಗದ ಜನರನ್ನೂ ಒಂದು ಮಾಡುವ ಕಾರ್ಯವಾಗುತ್ತಿದೆ ಎಂದರು.
ವೇದಿಕೆಯಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಮೆಡಿಕಲ್ ಆಫೀಸರ್ ಡಾ.ರಾಮಚಂದ್ರ ಭಟ್,ರಕ್ತದಾನ ಶಿಬಿರದ ಪ್ರಾಯೋಜಕ ಪಿ.ಕೆ.ಗುರುರಾಜ ಪುಚ್ಚಪ್ಪಾಡಿ, ಯುವಕಮಂಡಲ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಉಪಸ್ಥಿತರಿದ್ದರು. ಗುತ್ತಿಗಾರು ವಲಯ ಹವ್ಯಕ ಪರಿಷತ್ತು ಆರೋಗ್ಯ ವಿಭಾಗ ಪ್ರಮುಖ ರಮೇಶ್ ದೇಲಂಪಾಡಿ ಸ್ವಾಗತಿಸಿ ಯುವಕ ಮಂಡಲ ಕೋಶಾಧಿಕಾರಿ ಲೋಕೇಶ್ವರ ಡಿಆರ್ ವಂದಿಸಿದರು.ಗುತ್ತಿಗಾರು ವಲಯ ಹವ್ಯಕ ಪರಿಷತ್ತು ಕಾರ್ಯದರ್ಶಿ ಶಿವರಾಮ ಕರುವಜೆ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.