ಹಲವು ದಶಕಗಳ ಹೋರಾಟದ ಬಳಿಕ ಅಯೋಧ್ಯೆಯ ರಾಮ ಜನ್ಮ ಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅದರ ಬಳಿಕ ಇದೀಗ ಕಾಶಿ ವಿಶ್ವನಾಥ ದೇಗುಲದಲ್ಲೂ ಧಾರ್ಮಿಕ ಅತಿಕ್ರಮಣದ ವಿವಾದವನ್ನು ಇತ್ಯರ್ಥಗೊಳಿಸುವ ನಿರೀಕ್ಷೆಯಲ್ಲಿ ಅನೇಕರಿದ್ದಾರೆ. ಕಾಶಿ ಹಿಂದೂಗಳ ಅತಿದೊಡ್ಡ ಪವಿತ್ರ ಯಾತ್ರಾ ಕ್ಷೇತ್ರವಾಗಿದೆ.
ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನ ವಾಪಿ ಮಸೀದಿಯ ನಡುವಿನ ವಿವಾದದ ಇತ್ಯರ್ಥಕ್ಕಾಗಿ ಹಿಂದೂಗಳು ವಾರಣಾಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ 351 ವರ್ಷಗಳ ಹಿಂದಿನ ಸತ್ಯಾಸತ್ಯತೆಗಳ ದಾಖಲೆಯನ್ನೂ ಸಲ್ಲಿಸಿದ್ದಾರೆ. ಔರಂಗಜೇಬನ ಆಸ್ಥಾನದ 1669 ರ ಏಪ್ರಿಲ್ 18 ರಂದು ಪರ್ಷಿಯನ್ ಭಾಷೆಯಲ್ಲಿ ಬರೆಯಲಾದ ಐತಿಹಾಸಿಕ ದಾಖಲೆಯನ್ನೂ ಇದು ಒಳಗೊಂಡಿದೆ ಎಂದು ಹೇಳಲಾಗಿದೆ.
ಕೆಲವು ಹಿಂದೂ ಬ್ರಾಹ್ಮಣರು ಮುಲ್ತಾನ್ ಮತ್ತು ಬನಾರಸ್ಗಳಲ್ಲಿ ಶಿಕ್ಷಣ ನೀಡುತ್ತಿದ್ದಾರೆ ಎಂಬ ಸುದ್ದಿಯನ್ನು ಕೇಳಿದ ಔರಂಗಜೇಬ ಅಲ್ಲಿನ ದೇಗುಲಗಳನ್ನು ನಾಶಪಡಿಸಲು ಆದೇಶ ನೀಡುತ್ತಾನೆ ಎಂಬುದನ್ನು ಈ ದಾಖಲೆ ಉಲ್ಲೇಖಿಸಿದೆ. ಇದುವೇ ಕಾಶಿಯಲ್ಲಿ ದೇಗುಲ ಕೆಡವಿ ಜ್ಞಾನ ವಾಪಿ ಮಸೀದಿ ನಿರ್ಮಾಣಕ್ಕೆ ಕಾರಣವಾಯಿತು ಎಂಬುದು ಹಿಂದೂಗಳ ಪ್ರಬಲ ವಾದವಾಗಿದೆ.
ದಾಖಲೆಗಳ ಪ್ರಕಾರ 1669, ಸೆಪ್ಟೆಂಬರ್ 2ರಂದು ಕಾಶಿ ವಿಶ್ವನಾಥ ದೇಗುಲವನ್ನು ಕೆಡವಲಾಗಿದೆ. ಆತನ ಆದೇಶದ ಅನ್ವಯ ಕಾಶಿ ದೇಗುಲಕ್ಕೆ ಸಾಕಷ್ಟು ಹಾನಿಗಳು ಸಂಭವಿಸಿದೆ. ನ್ಯಾಯಾಲಯ ಪ್ರಸ್ತುತ ಈ ದಾಖಲೆಗಳ ಸತ್ಯಾಸತ್ಯೆಯನ್ನು ಪರಿಶೀಲನೆ ನಡೆಸುತ್ತಿದೆ.
ಕಾಶಿ ವಿಶ್ವನಾಥ ದೇಗುಲಕ್ಕೆ ಸಂಬಂಧಿಸಿದ ಐದು ಅಂಶಗಳು ಇಲ್ಲಿ
1. ಕಾಶಿ ವಿಶ್ವನಾಥ ದೇವಾಲಯವು ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ, ಆದ್ದರಿಂದ ಇದು ಹಿಂದೂ ನಂಬಿಕೆಯ ದೊಡ್ಡ ಕೇಂದ್ರಗಳಲ್ಲಿ ಒಂದಾಗಿದೆ.
2. ಕಾಶಿ ವಿಶ್ವನಾಥ ದೇವಾಲಯದ ಮೇಲೆ ದಾಳಿಗಳು ಭಾರತದಲ್ಲಿ ಮುಸ್ಲಿಂ ಆಕ್ರಮಣಕಾರರ ಆಗಮನದಿಂದ ಪ್ರಾರಂಭವಾಯಿತು. ಮೊದಲ ದಾಳಿಯನ್ನು 11 ನೇ ಶತಮಾನದಲ್ಲಿ ಕುತುಬುದ್ದೀನ್ ಐಬಾಕ್ ಮಾಡಿದ್ದಾನೆೆ. ಈ ಸಂದರ್ಭದಲ್ಲಿ ದೇವಾಲಯದ ಶಿಖರವು ಮುರಿದುಹೋಯಿಗಿದೆ, ಆದರೆ ದಾಳಿಯ ಹೊರತಾಗಿಯೂ ಶಿವನ ಆರಾಧನೆಯು ಮುಂದುವರೆಯಿತು.
3. ಕಾಶಿ ವಿಶ್ವನಾಥ ದೇವಾಲಯವನ್ನು 1585 ರಲ್ಲಿ ರಾಜ ತೋದರ್ಮಲ್ಲ ಪುನರ್ನಿರ್ಮಿಸಿದ.
4. 1669ರಲ್ಲಿ ದೇವಾಲಯವು ಸಂಪೂರ್ಣವಾಗಿ ನಾಶವಾಯಿತು ಮತ್ತು ಔರಂಗಜೇಬನ ಆದೇಶದ ಮೇರೆಗೆ ಮಸೀದಿಯನ್ನು ನಿರ್ಮಿಸಲಾಯಿತು.
5. 1780 ರಲ್ಲಿ, ಮಾಲ್ವಾ ರಾಣಿ ಅಹಲ್ಯಾಬಾಯಿ ಹೊಲ್ಕರ್ ಅವರು ಜ್ಞಾನ ವಾಪಿ ಸಂಕೀರ್ಣದ ಪಕ್ಕದಲ್ಲಿ ಹೊಸ ದೇವಾಲಯವನ್ನು ನಿರ್ಮಿಸಿದರು. ಹೊಸ ಸಂಕೀರ್ಣವನ್ನು ಈಗ ಕಾಶಿ ವಿಶ್ವನಾಥ ದೇವಸ್ಥಾನ ಎಂದು ಕರೆಯಲಾಗುತ್ತದೆ. 1853 ರಲ್ಲಿ ಪಂಜಾಬ್ನ ರಂಜಿತ್ ಸಿಂಗ್ ದೇವಾಲಯದ ಮೇಲ್ಭಾಗದ ಅಲಂಕಾರಕ್ಕಾಗಿ 880 ಕೆಜಿ ಚಿನ್ನವನ್ನು ದಾನ ಮಾಡಿದ್ದರು.
ಮಸೀದಿ ಮತ್ತು ದೇಗುಲದ ನಡುವಿನ ವಿವಾದ ಮುಂದುವರೆದೇ ಇರುವುದರಿಂದ, ಭಾರತೀಯ ಪುರಾತತ್ವ ಇಲಾಖೆ ಜ್ಞಾನ ವಾಪಿ ಮಸೀದಿಯ ಸಂಪೂರ್ಣ ಆವರಣವನ್ನು ಉತ್ಖನನ ಎಂದು ಹಿಂದೂಗಳು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದರು.
ಜ್ಞಾನ ವಾಪಿ ಸಂಕೀರ್ಣದಲ್ಲಿ ಭಗವಾನ್ ವಿಶ್ವನಾಥ ಸ್ವಯಂಭು ಜ್ಯೋತಿರ್ಲಿಂಗವಿದೆ ಎಂದು ಹಿಂದೂಗಳು ನಂಬುತ್ತಾರೆ, ಇದೇ ಕಾರಣಕ್ಕೆ ಆ ಸಂಕೀರ್ಣವನ್ನು ಉತ್ಖನನ ಮಾಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ. ಆದರೆ ಮುಸ್ಲಿಮರು ಆ ಸ್ಥಳದಲ್ಲಿ ಯಾವುದೇ ದೇವಾಲಯವಿಲ್ಲ ಎಂದು ವಾದಿಸುತ್ತಿದ್ದಾರೆ. ಹಿಂದೂಗಳು 1991 ರಲ್ಲಿ 3 ಪ್ರಮುಖ ಬೇಡಿಕೆಗಳನ್ನು ಉಲ್ಲೇಖಿಸಿ ಮೊಕದ್ದಮೆ ಹೂಡಿದ್ದಾರೆ. ಅದೆಂದರೆ
1. ಇಡೀ ಜ್ಞಾನವಪಿ ಭೂಮಿಯನ್ನು ದೇವಾಲಯದ ಒಂದು ಭಾಗವೆಂದು ಘೋಷಿಸಬೇಕು.
2. ಮುಸ್ಲಿಮರನ್ನು ಇಲ್ಲಿಂದ ಸ್ಥಳಾಂತರಿಸಬೇಕು ಮತ್ತು ಪ್ರಸ್ತುತ ರಚನೆಯನ್ನು ನೆಲಸಮಗೊಳಿಸಿ ಹಿಂದೂಗಳಿಗೆ ಸ್ವಾಧೀನಪಡಿಸಿಕೊಳ್ಳಲು ಬಿಡಬೇಕು.
3.ಮೂಲ ಶಿವಲಿಂಗದ ಸ್ಥಳದಲ್ಲಿ ಹಿಂದೂಗಳಿಗೆ ದೇವಾಲಯವನ್ನು ಪುನರ್ನಿರ್ಮಿಸಲು ಅವಕಾಶ ನೀಡಬೇಕು ಮತ್ತು ಮುಸ್ಲಿಮರು ಅದಕ್ಕೆ ಅಡ್ಡಿಯುಂಟು ಮಾಡಬಾರದು.
ಸೆಪ್ಟೆಂಬರ್ 23, 1998 ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ಇಡೀ ಜ್ಞಾನ ವಾಪಿ ಕ್ಯಾಂಪಸ್ನ ಧಾರ್ಮಿಕ ಸ್ವರೂಪವನ್ನು ಮೊದಲು ನಿರ್ಧರಿಸಬೇಕೆಂದು ನಿರ್ದೇಶಿಸಿತು. ಇದರರ್ಥ 1947 ರ ಆಗಸ್ಟ್ 15 ರಂದು ಈ ಸ್ಥಳವು ದೇವಾಲಯ ಅಥವಾ ಮಸೀದಿಯಾಗಿದೆಯೇ ಎಂದು ನಿರ್ಧರಿಸಲು ಪ್ರಯತ್ನಿಸಬೇಕು ಎಂಬುದು. ಆದರೆ ಈ ನಿರ್ದೇಶನಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತು.
2018ರಲ್ಲಿ 20 ವರ್ಷಗಳ ಬಳಿಕ ಪ್ರಕರಣದ ವಿಚಾರಣೆ ಆರಂಭಗೊಂಡಿತು. ಆದರೆ ಇದಕ್ಕೂ ಮುಸ್ಲಿಂ ಕಡೆಯವರು ತಡೆಯಾಜ್ಞೆಯನ್ನು ತಂದಿದ್ದಾರೆ.
ಹಿಂದೂಗಳ ಪ್ರಕಾರ, ಜ್ಞಾನ ವಾಪಿ ಮಸೀದಿಯ ರಚನೆ ಬೇರೆ ಮಸೀದಿಗಳ ರೀತಿಯಲ್ಲಿಇಲ್ಲ. ಆ ಮಸೀದಿಯ ಹಲವಾರು ಫೋಟೋಗಳನ್ನು ಕೂಡ ನ್ಯಾಯಾಲಯಕ್ಕೆ ಸಾಕ್ಷ್ಯವಾಗಿ ನೀಡಲಾಗಿತ್ತು.
ಅಯೋಧ್ಯೆಯ ವಿವಾದ ಬರೆಹರಿದ ಬಳಿಕ ಜ್ಞಾನವಪಿ ಮಸೀದಿಯ ವಿವಾದವನ್ನೂ ಬರೆಹರಿಸುವ ನಿಟ್ಟಿನಲ್ಲಿ ಹಿಂದೂಗಳು ಪ್ರಯತ್ನವನ್ನು ಆರಂಭಿಸಿದ್ದಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾಲವೇ ಹೇಳಬೇಕು. ಕಾಶಿ ದೇಗುಲ ಮತ್ತು ಜ್ಞಾನ ವಾಪಿ ಮಸೀದಿ ಬಗೆಗಿನ ಮರುಪರಿಶೀಲನಾ ಅರ್ಜಿಯನ್ನು ಹಿಂದೂಗಳು ಸಲ್ಲಿಕೆ ಮಾಡಿದ್ದು, ಅಕ್ಟೋಬರ್ 3ರಂದು ಇದರ ವಿಚಾರಣೆ ನಡೆಯಲಿದೆ. ಅರ್ಜಿಯನ್ನು ನ್ಯಾಯಾಲಯ ಮಾನ್ಯ ಮಾಡಿದರೆ ವಿವಾದ ತಾರ್ಕಿಕ ಅಂತ್ಯವನ್ನು ಕಾಣಬಹುದು ಎಂಬ ನಿರೀಕ್ಷೆ ಹಿಂದೂಗಳದ್ದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.