ಸೂರತ್: ಪ್ರಧಾನಿ ನರೇಂದ್ರ ಮೋದಿಯವರ 70ನೇ ಜನ್ಮದಿನಾಚರಣೆಯನ್ನು ದೇಶದಾದ್ಯಂತ ವಿಭಿನ್ನವಾದ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ. ಗುಜರಾತಿನ ಸೂರತ್ ನಲ್ಲಿ ಬೇಕರಿಯೊಂದು 70 ಅಡಿ ಉದ್ದದ 771 ಕೆಜಿ ತೂಕದ ‘ ಕೊರೋನಾ ವಾರಿಯರ್’ ಥೀಮ್ನ ಕೇಕನ್ನು ತಯಾರಿಸಿ ಮಕ್ಕಳಿಗೆ ಹಂಚಿದೆ.
ಕೇಕ್ ತಯಾರಿಕೆ ಮಾತ್ರವಲ್ಲದೆ, ಬೇಕರಿಯು ಡಿಜಿಟಲ್ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಂಡಿದೆ. ಕೇಕ್ ಕಟ್ಟಿಂಗ್ ಕಾರ್ಯಕ್ರಮವನ್ನು ಡಿಜಿಟಲ್ ಆಗಿ ಪ್ರಸಾರ ಮಾಡಲಾಗಿದೆ.
ಕಳೆದ ಮೂರು ವರ್ಷದಿಂದ ಬ್ರೆಡ್ ಲೈನರ್ ಬೇಕರಿ ಮೋದಿಯವರ ಜನ್ಮದಿನವನ್ನು ವಿವಿಧ ಸಾಮಾಜಿಕ ಜಾಗೃತಿ ಕಾರ್ಯಕ್ರಮದ ಮೂಲಕ ಆಚರಿಸುತ್ತಾ ಬರುತ್ತಿದೆ. ಈ ಬಾರಿ ಅದು ಕೊರೋನಾ ವಾರಿಯರ್ಸ್ಗೆ ಧನ್ಯವಾದ ಅರ್ಪಿಸುವ ಕೇಕ್ ಅನ್ನು ತಯಾರಿಸಿ ಆ ಮೂಲಕ ಜಾಗೃತಿಯನ್ನು ಮೂಡಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೇಕರಿ ಮಾಲೀಕ, “ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಮೋದಿಯವರ ಜನ್ಮದಿನದ ಕೇಕ್ ಕಟ್ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಹಲವಾರು ಕೊರೋನಾ ಯೋಧರು ಉಪಸ್ಥಿತರಿದ್ದರು. ಕೇಕ್ನಲ್ಲಿ ಕೊರೋನಾ ಯೋಧರ ಚಿತ್ರವನ್ನು ಬಿಡಿಸಲಾಗಿದೆ” ಎಂದಿದ್ದಾರೆ.
ಮೊದಲು ಕೇಕನ್ನು ಮಕ್ಕಳಿಗೆ ವಿತರಣೆ ಮಾಡಲಾಯಿತು. ಬಳಿಕ ಕೇಕನ್ನು 500 ಗ್ರಾಂಗಳಂತೆ ವಿಂಗಡಿಸಿ ಇತರ ಬೇಕರಿಗಳಲ್ಲಿ ಜನರಿಗಾಗಿ ಇಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.