ನವದೆಹಲಿ: ಇದೇ ಮೊದಲ ಬಾರಿಗೆ ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯು ಲಡಾಖ್ ಗಡಿಯಲ್ಲಿನ ಆಪರೇಟಿಂಗ್ ಪ್ರದೇಶಗಳಿಗೆ ಮಹಿಳಾ ವೈದ್ಯರನ್ನು ನಿಯೋಜನೆ ಮಾಡಿದೆ.
ಈ ವೈದ್ಯರು ಲೇಹ್ ಪ್ರದೇಶದಿಂದ ಸೈನ್ಯವನ್ನು ಕಳುಹಿಸುವುದರಿಂದ ಮೊದಲ್ಗೊಂಡು ಆ ಯೋಧರ ಎಲ್ಲಾ ರೀತಿಯ ಕಾಳಜಿಯನ್ನು ವಹಿಸಿಕೊಳ್ಳಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಈ ಭಾಗಕ್ಕೆ ಈ ಮೊದಲು ಯಾವುದೇ ಮಹಿಳಾ ಅಧಿಕಾರಿಗಳನ್ನು ನಿಯೋಜನೆ ಮಾಡಿಲ್ಲ. ಆದರೆ ಇದೀಗ ಯಾವುದೇ ಲಿಂಗ ಅಸಮಾನತೆಯಾಗದಂತೆ ಮಹಿಳಾ ವೈದ್ಯರು ಮತ್ತು ಸಿಬ್ಬಂದಿಗಳನ್ನು ಐಟಿಬಿಪಿ ನಿಯೋಜನೆ ಮಾಡುವ ಮೂಲಕ ಕ್ರಮ ಕೈಗೊಂಡಿದೆ.
ಈ ಹಿಂದೆ ಇಂತಹ ಸಂದರ್ಭದಲ್ಲಿ ಕೇವಲ ಪುರುಷ ವೈದ್ಯರನ್ನಷ್ಟೇ ನೇಮಕ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಮಹಿಳಾ ಅಧಿಕಾರಿಗಳಿಗೂ ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಈ ಅಧಿಕಾರಿಗಳು ಇತರ ಪ್ಯಾರಾ ಮೆಡಿಕಲ್ಗಳ ಜೊತೆಗೆ ಯೋಧರನ್ನು ನೋಡಿಕೊಳ್ಳಲಿದ್ದಾರೆ. ಯೋಧರ ವೈದ್ಯಕೀಯ ತಪಾಸಣೆಗೆ ವೈದ್ಯಾಧಿಕಾರಿಗಳನ್ನು ನಿಯೋಜನೆ ಮಾಡಿರುವುದಾಗಿಯೂ ಸೇನೆ ತಿಳಿಸಿದೆ. ತುರ್ತು ಅಗತ್ಯಗಳಿಗೆ ಬೇಕಾದ ಪೂರಕ ವ್ಯವಸ್ಥೆ, ಸಿಬ್ಬಂದಿಗಳನ್ನೂ ನಿಯೋಜನೆ ಮಾಡಲಾಗಿದೆ. ಡಾ. ಕಾತ್ಯಾಯಿನಿ ಶರ್ಮಾ ಅವರು ಈ ತಂಡದ ಮುಖ್ಯಸ್ಥರಾಗಿದ್ದಾರೆ.
ಗಡಿಯ ಕೆಲವು ಪ್ರದೇಶಗಳಿಗೆ ತೆರಳುವ ಸಂದರ್ಭದಲ್ಲಿ ಯೋಧರಿಗೆ ಫಿಟ್ನೆಸ್, ಮೆಡಿಕಲ್ ಪ್ರಮಾಣಪತ್ರ ಅಗತ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಈ ವೈದ್ಯರು ಕಾರ್ಯ ನಿರ್ವಹಿಸಲಿದ್ದಾರೆ. ಡಾ. ಶರ್ಮಾ ಅವರಿಂದ ಅನುಮತಿ ಪಡೆಯುವ ಮೊದಲು ಯೋಧರನ್ನು ಮೂರು ಹಂತದಲ್ಲಿ ತಪಾಸಣೆ ಮಾಡಲಾಗುವುದಾಗಿಯೂ ಐಟಿಬಿಪಿಯ ಅಧಿಕಾರಿಗಳು ತಿಳಿಸಿದ್ದಾರೆ. ಕೊರೋನಾ ಸಂಬಂಧಿಸಿದಂತೆ ತಪಾಸಣೆಯನ್ನೂ ಈ ವೈದ್ಯರು ನಡೆಸಲಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.