ಬೆಳ್ತಂಗಡಿ : ಆಷಾಡ ಶುದ್ಧ ಏಕಾದಶಿಯಂದು ಪ್ರಥಮೈಕಾದಶಿಯೆಂದು ಕರೆಯಲ್ಪಡುತ್ತದೆ. ಅಂದು ಸಾಂಪ್ರದಾಯಿಕವಾಗಿ ಮುದ್ರಾಧಾರಣೆ ಹಾಕಿಸಿಕೊಳ್ಳುವುದು ಅನಾದಿಯಿಂದಲೂ ನಡೆದುಕೊಂಡು ಬಂದಿದೆ. ಮನುಷ್ಯನ ಐಹಿಕ ಮತ್ತು ಕ್ಷೇಮ ಆ ಮೂಲಕ ನಮ್ಮ ಸಕಲ ಪಾಪಕರ್ಮ, ರೋಗ ರುಜಿನಗಳು ಪರಿಹಾರವಾಗುವುದೆಂಬ ನಂಬಿಕೆಯಿದೆ.
ಪಾರಾತ್ರಿಕವಾಗಿ ಮೋಕ್ಷ ಸಾಧನೆಯೇ ಇದರ ಮೂಲ ಉದ್ದೇಶ. ಸುದರ್ಶನ ಹವನದ ಮೂಲಕ ಭಗವಂತನ ಶಂಕ ಚಕ್ರ ಆಯುಧವನ್ನು ದೇಹದಲ್ಲಿ ತಪ್ತ ಮುದ್ರಾಧಾರಣೆ ಮಾಡಿಸಿಕೊಳ್ಳುವುದರಿಂದ ದೈಹಿಕ, ಮಾನಸಿಕ ಅರಿಷ್ಟಗಳು ದೂರವಾಗಿ ಮನಸ್ಸಿಗೆ ಶಾಂತಿ, ನೆಮ್ಮದಿ, ಸಹನೆ, ಸಂಯಮ, ಆರೋಗ್ಯ ಪ್ರಾಪ್ತಿಯಾಗುವುದೆಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ನುಡಿದರು.
ಅವರು ಜು.೨೭ರಂದು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನಡೆದ ತಪ್ತಮುದ್ರಾಧಾರಣೆಯಲ್ಲಿ ತಾಲೂಕಿನಾದ್ಯಂತದಿಂದ ಬಂದ 500ಕ್ಕೂ ಹೆಚ್ಚು ಭಕ್ತಾದಿಗಳಿಗೆ ಮುದ್ರಾಧಾರಣೆ ನಡೆಸಿ ಅದರ ಮಹತ್ವದ ಕುರಿತು ಸಂದೇಶ ನೀಡಿದರು. ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯರು ಶ್ರೀಗಳನ್ನು ಬರಮಾಡಿಕೊಂಡು ಮುದ್ರಾಧಾರಣೆಗೆ ಭಕ್ತಾದಿಗಳಿಗೆ ಸರತಿಯ ಸಾಲು ಸುವ್ಯವಸ್ಥೆ ಕಲ್ಪಿಸಿದ್ದರು. ವೇದಮೂರ್ತಿ ಶ್ರೀಮಪತಿ ಎಳಚಿತ್ತಾಯ ಸುದರ್ಶನ ಹವನ ಧಾರ್ಮಿಕ ವಿಧಿ ನೆರವೇರಿಸಿದರು.
ಚಾತುರ್ಮಾಸ್ಯ : ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳವರು ಮನ್ವಥ ಸಂವತ್ಸರದ ತನ್ನ ೧೯ನೇ ವರ್ಷದ ಚಾತುರ್ಮಾಸ್ಯ ವೃತವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಮೂಲ ಮಠದಲ್ಲಿ ಅ. 5 ರಿಂದ ಸೆ.28ರವರೆಗೆ ನಡೆಸಲಿದ್ದು ಆ ಸಂದರ್ಭದಲ್ಲಿ ಮಠದಲ್ಲಿ ಪಾಠ, ಪ್ರವಚನ,ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಭಕ್ತಾದಿಗಳು ಪಾಲ್ಗೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.