ನವದೆಹಲಿ: ಹಿಂಸಾಚಾರವನ್ನು ಪ್ರಚೋದಿಸುವಂತಹ ಯಾವುದೇ ಕೆಲಸವನ್ನೂ ಫೇಸ್ಬುಕ್ ಮಾಡುವುದಿಲ್ಲ. ಯಾವ ಪಕ್ಷ, ಯಾವ ವ್ಯಕ್ತಿ ದ್ವೇಷಪೂರಿತ ಪೋಸ್ಟ್ಗಳನ್ನು ಹಾಕಿದರೂ ಫೇಸ್ಬುಕ್ ಅದನ್ನು ಉತ್ತೇಜಿಸುವುದಿಲ್ಲ ಎಂದು ಸಂಸ್ಥೆ ಸ್ಪಷ್ಟವಾಗಿ ತಿಳಿಸಿದೆ. ಈ ನಿಯಮ ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ ಎಂದು ಅದು ಮಾಹಿತಿ ನೀಡಿದೆ.
ಇತ್ತೀಚೆಗೆ ಭಾರತದ ಹಿರಿಯ ಅಧಿಕಾರಿಯೊಬ್ಬರು ಫೇಸ್ಬುಕ್ನ ದ್ವೇಷ ಭಾಷಣ ನಿಯಮಗಳು ಬಿಜೆಪಿ ಪಕ್ಷ, ಹಿಂದೂ ಸಂಘಟನೆಗಳ ವ್ಯಕ್ತಿಗಳಿಗೆ ಅನ್ವಯವಾಗುವುದಿಲ್ಲ ಎಂಬಂತೆ ಫೇಸ್ಬುಕ್ ವರ್ತಿಸುತ್ತಿದೆ ಎಂದು ವಿರೋಧ ವ್ಯಕ್ತಪಡಿಸಿದ್ದರು. ಈ ಆಪಾದನೆಗೆ ಸಂಸ್ಥೆ ಸಮರ್ಥನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಫೇಸ್ಬುಕ್, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾಷಣ ಅಥವಾ ಇನ್ಯಾವುದೇ ವಿಚಾರವಾಗಿದ್ದರೂ ಸಂಸ್ಥೆ ಅದನ್ನು ವಿರೋಧಿಸುತ್ತದೆ. ಎಲ್ಲರಿಗೂ ಸಮಾನ ನ್ಯಾಯವನ್ನು ಒದಗಿಸುವ ನೀತಿಯನ್ನೇ ಫೇಸ್ಬುಕ್ ನೀಡಿದೆ. ಇದು ಇಡೀ ಜಗತ್ತಿಗೆ ಸಂಬಂಧಿಸಿದಂತೆ ರೂಪಿಸಲಾದ ನಿಯಮವಾಗಿದ್ದು, ಅಂತಹ ಘಟನೆಗಳಾದಲ್ಲಿ ಫೇಸ್ಬುಕ್ ಅದನ್ನು ವಿರೋಧಿಸುತ್ತದೆ ಎಂದು ತಿಳಿಸಿದ್ದಾರೆ. ಯಾವುದೇ ಪಕ್ಷಪಾತದ ಧೋರಣೆಯನ್ನು ಸಂಸ್ಥೆ ಮಾಡುತ್ತಿಲ್ಲ ಎಂದು ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.