ಸುಬ್ರಹ್ಮಣ್ಯ : ಆಟಿ ಅಂದರೆ ತುಳುನಾಡಿನಲ್ಲಿ ವಿಶೇಷವಾದ ತಿಂಗಳು.ಈ ಸಮಯದಲ್ಲಿ ಶುಭ ಕಾರ್ಯಗಳು ಇಲ್ಲ. ಆದರೆ ಈ ಸಂದರ್ಭದ ಆಹಾರ ಪದ್ದತಿಗಳು ಅತ್ಯಂತ ಮಹತ್ವ ಪಡೆದಿದೆ, ಈ ಸಮಯದ ಎಲ್ಲಾ ಆಹಾರದಲ್ಲಿ ಔಷಧೀಯ ಗುಣಗಳು ಇರುತ್ತದೆ ಎಂದು ಕಲ್ಮಕಾರು ಆಶಾ ಕಾರ್ಯಕರ್ತೆ ಯಶೋಧಾ ಹೇಳಿದರು.
ಅವರು ಹಾಲೆಮಜಲು ಶ್ರೀವೆಂಕಟೇಶ್ವರ ಸಭಾಭವನದಲ್ಲಿ ಭಾನುವಾರ ಗುತ್ತಿಗಾರು ನಾಲ್ಕೂರು ವಲಯದ ಶ್ರೀದುರ್ಗಾಪರಮೇಶ್ವರಿ ಜ್ಞಾನವಿಕಾಸ ಕೇಂದ್ರ ಮೆಟ್ಟಿನಡ್ಕ ಆಶ್ರಯದಲ್ಲಿ ನಡೆದ ಆಟಿಯ ಕೂಟ ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಉಪನ್ಯಾಸ ನೀಡಿದರು.ಆಟಿಯ ಸಂದರ್ಭದಲ್ಲಿ ತುಳುನಾಡಿನಲ್ಲಿ ಪತ್ರೊಡೆ , ಹಾಲೆ ಮರದ ಕಷಾಯ ಸೇರಿದಂತೆ ಇತರ ಆಹಾರ ಪದ್ದತಿ ಇರುತ್ತದೆ.ಇದು ಆಟಿಯ ತಿಂಗಳ ಕಷ್ಟದ ಕಾಲದ ಆಹಾರ ಎಂದರೂ ಈ ಆಹಾರದಲ್ಲಿ ಔಷಧೀಯ ಗುಣಗಳು ಇರುತ್ತದೆ, ಇದೇ ವೇಳೆ ಪೌಷ್ಟಿಕ ಆಹಾರದ ಕಡೆಗೂ ಆದ್ಯತೆ ಇರುತ್ತದೆ ಎಂದರು.
ಇದೇ ವೇಳೆ ಆಟಿಯ ವಿಶೇಷ ಔಷಧಿ, ನಾಟಿ ಔಷದಿಗಳ ಬಗ್ಗೆ ದೇವದ ನಾಟಿವೈದ್ಯೆ ಸೀತಮ್ಮ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಪತ್ರೊಡೆ, ಆಟಿ ಪಾಯಸ, ತಿಮರೆ ಚಟ್ನಿ ಮೊದಲಾದ ಅಡುಗೆ ತಯಾರಿ ಹಾಗೂ ಚನ್ನೆಮಣೆ ಮೊದಲಾದ ಆಟಗಳು ನಡೆದವು.
ಗುತ್ತಿಗಾರು ಗ್ರಾಪಂ ಉಪಾಧ್ಯಕ್ಷೆ ಸವಿತಾ ಕಳ್ಳಂಪಾಡಿ, ಗುತ್ತಿಗಾರು ಗ್ರಾಪಂ ಮಾಜಿ ಅಧ್ಯಕ್ಷೆ ಪ್ರಮಿಳಾ ಶಶಿಧರ್ ಅತಿಥಿಯಾಗಿದ್ದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಅನಿತಾ, ಜ್ಞಾನವಿಕಾಸ ಸಂಯೋಜಕಿ ಚಂದ್ರಾವತಿ ಪೂಜಾರಿಕೋಡಿ,ಗ್ರಾಮ ಸಮಿತಿ ಅಧ್ಯಕ್ಷ ಮೋಹನ ಎರ್ದಡ್ಕ, ಸೇವಾಪ್ರತಿನಿಧಿ ತಿಮ್ಮಪ್ಪ ಕಡ್ಯ,ಹರಿಶ್ಚಂದ್ರ ಕುಳ್ಳಂಪಾಡಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.