
ನವದೆಹಲಿ: ಭಾರತದ ಅಪ್ಲಿಕೇಶನ್ ಆರ್ಥಿಕತೆಯು “ಅಸಾಧಾರಣವಾಗಿ ಬೆಳೆಯುತ್ತಿದೆ” ಎಂದು ಕೇಂದ್ರ ಐಟಿ ಸಚಿವ ರವಿಶಂಕರ್ ಪ್ರಸಾದ್ ಅವರು ಅಭಿಪ್ರಾಯಿಸಿದ್ದಾರೆ. ಚೀನಾವನ್ನು ಹಿಂದಿಕ್ಕಿ ವಿಶ್ವದ ನಂಬರ್ ಒನ್ ಮೊಬೈಲ್ ಫೋನ್ ಉತ್ಪಾದನಾ ಕೇಂದ್ರವಾಗಲೂ ಭಾರತವು ಉದ್ದೇಶಿಸಿದೆ ಎಂದು ಅವರು ಹೇಳಿದ್ದಾರೆ.
ವರದಿಗಳ ಪ್ರಕಾರ, ಡೇಟಾ ಗೌಪ್ಯತೆ ಮೂಲಭೂತ ಹಕ್ಕು ಎಂದು ಹೇಳಿದ ಅವರು, ಒಬ್ಬರು ಪ್ರಾಯೋಗಿಕ ಮತ್ತು ದೃಢವಾದ ಸಮತೋಲಿತ ಕಾರ್ಯವನ್ನು ಈ ನಿಟ್ಟಿನಲ್ಲಿ ಮಾಡಬೇಕಾಗಿದೆ ಎಂದಿದ್ದಾರೆ.
ಆತ್ಮಬೋಧ್ ಎಂಬ ಎನ್ಜಿಒ ಆಯೋಜಿಸಿದ್ದ ವೆಬಿನಾರ್ ದಿವಂಗತ ಠಾಕೂರ್ ಪ್ರಸಾದ್ ಸೆಂಟೆನರಿ ಸ್ಮಾರಕ ಉಪನ್ಯಾಸವನ್ನುದ್ದೇಶಿಸಿ ಮಾತನಾಡಿದ ಪ್ರಸಾದ್, “ರಾಷ್ಟ್ರೀಯ ಭದ್ರತೆ ಮತ್ತು ದತ್ತಾಂಶ ಗೌಪ್ಯತೆ ಕಾರಣಗಳಿಗಾಗಿ ಸರ್ಕಾರವು ಇತ್ತೀಚೆಗೆ 59 ಆ್ಯಪ್ಗಳನ್ನು ನಿಷೇಧಿಸಿದೆ. ಪ್ರಧಾನ ಮಂತ್ರಿ ಅವರು ಹೊಸ ಭಾರತೀಯ ಅಪ್ಲಿಕೇಶನ್ಗಳಳಿಗೆ ಕರೆ ನೀಡಿದ್ದರು ಮತ್ತು 200 ಹೊಸ ಅಪ್ಲಿಕೇಶನ್ಗಳು ಹೊರಹೊಮ್ಮಿವೆ” ಎಂದಿದ್ದಾರೆ.
ಎಲೆಕ್ಟ್ರಾನಿಕ್ ಉತ್ಪಾದನಾ ವಲಯದತ್ತ ಗಮನಸೆಳೆದ ಅವರು, “2014 ರಲ್ಲಿ ಭಾರತವು ಎರಡು ಘಟಕಗಳನ್ನು ಹೊಂದಿತ್ತು ಮತ್ತು ಈಗ 260 ಅನ್ನು ಹೊಂದಿದೆ. ಭಾರತವು 5 ನೇ ಸ್ಥಾನದಿಂದ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದಕನಾಗಿದೆ. ಚೀನಾವನ್ನು ಮೀರಿಸುವ ಮೂಲಕ ಅತಿದೊಡ್ಡ ಮೊಬೈಲ್ ಉತ್ಪಾದಕ(ಹಬ್) ಆಗಿ 1 ನೇ ಸ್ಥಾನಕ್ಕೆ ಏರುವುದು ನನ್ನ ಮಹತ್ವಾಕಾಂಕ್ಷೆಯಾಗಿದೆ” ಎಂದಿದ್ದಾರೆ.
ಕರೋನವೈರಸ್ ಪ್ರೇರಿತ ಲಾಕ್ಡೌನ್ ಸಂದರ್ಭದಲ್ಲಿ, ದೇಶಾದ್ಯಂತದ ಹೈಕೋರ್ಟ್ಗಳು 1.75 ಲಕ್ಷ ಪ್ರಕರಣಗಳನ್ನು ವರ್ಚುವಲ್ ವಿಚಾರಣೆಗಳ ಮೂಲಕ ನಿರ್ವಹಿಸಿವೆ, ಜಿಲ್ಲಾ ನ್ಯಾಯಾಲಯಗಳು 7 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ ವಿಚಾರಣೆಗಳನ್ನು ನಡೆಸಿದವು ಮತ್ತು ಸುಮಾರು 7,000 ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


