ನವದೆಹಲಿ: ಉಕ್ಕಿನ ವ್ಯವಹಾರದಲ್ಲಿ ತೊಡಗಿರುವ ಜೆಎಸ್ಡಬ್ಲ್ಯೂ ಗ್ರೂಪ್ ತನ್ನ ಚೀನಾದೊಂದಿಗಿನ ವಾರ್ಷಿಕ ನಿವ್ವಳ ಆಮದನ್ನು ಶೂನ್ಯಕ್ಕೆ ಇಳಿಸುವ ಶಪಥವನ್ನು ಮಾಡಿದೆ. ಮುಂದಿನ ಎರಡು ವರ್ಷಗಳಲ್ಲಿ ಪ್ರಸ್ತುತ ಇರುವ ಚೀನಾದ ಆಮದು $ 400 ದಶಲಕ್ಷದಿಂದ ಶೂನ್ಯಕ್ಕೆ ತರುವ ದೃಢ ಸಂಕಲ್ಪವನ್ನು ಅದು ತೊಟ್ಟಿದೆ. ಭಾರತದಲ್ಲಿ ಹೆಚ್ಚುತ್ತಿರುವ ಚೀನಾ ವಿರೋಧಿ ಭಾವನೆಯ ಹಿನ್ನೆಲೆಯಲ್ಲಿ ಅದು ಈ ನಿರ್ಧಾರವನ್ನು ತೆಗೆದುಕೊಂಡಿದೆ.
ಚೀನಾದ ದಾಳಿಯಲ್ಲಿ ಹುತಾತ್ಮರಾದ 20 ಭಾರತೀಯ ಸೇನಾ ಯೋಧರಿಗೆ ಗೌರವಾರ್ಪಣೆಯಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಜೆಎಸ್ಡಬ್ಲ್ಯೂ ಸಿಮೆಂಟ್ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಜಿಂದಾಲ್ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್ನಲ್ಲಿ ಹೇಳಿದ್ದಾರೆ.
ಜಿಂದಾಲ್ ಅವರ ತಂದೆ ಸಜ್ಜನ್ ಜಿಂದಾಲ್ ಅವರು ಗ್ರೂಪ್ನ ಅಧ್ಯಕ್ಷರಾಗಿದ್ದಾರೆ. ಈ ಗ್ರೂಪ್ ಉಕ್ಕನ್ನು ತಯಾರಿಸುತ್ತದೆ, ಸಿಮೆಂಟ್ ತಯಾರಿಸುತ್ತದೆ, ವಿದ್ಯುತ್ ಸ್ಥಾವರಗಳನ್ನು ನಡೆಸುತ್ತದೆ, ಬಂದರುಗಳನ್ನು ನಿರ್ವಹಿಸುತ್ತದೆ ಮತ್ತು ಬಣ್ಣಗಳನ್ನು ಮಾರಾಟ ಮಾಡುತ್ತದೆ.
59 ಚೀನೀ ಆ್ಯಪ್ಗಳನ್ನು ಸರ್ಕಾರ ನಿಷೇಧಿಸಿದ ಕೆಲ ದಿನಗಳ ನಂತರ ಜಿಂದಾಲ್ ಅವರ ಅಭಿಪ್ರಾಯಗಳು ಹೊರಬಿದ್ದಿವೆ. ಚೀನಾದಿಂದ ಬರುತ್ತಿರುವ ಸಾಗಣೆಗಳನ್ನು ಕೂಡ ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಚೀನಾದ ಭಾಗವಹಿಸುವಿಕೆಯನ್ನು ಕಡಿಮೆ ಮಾಡಲು ಮೂಲಸೌಕರ್ಯ ಯೋಜನೆಗಳು ಸೇರಿದಂತೆ ಅನೇಕ ಟೆಂಡರ್ಗಳನ್ನು ಮರು ಪರಿಶೀಲನೆ ಮಾಡಲಾಗುತ್ತಿದೆ.
The unprovoked attack by the Chinese on Indian soil on our brave jawaans has been a huge wake up call and a clarion call for action – we @TheJSWGroup have a net import of $400mn from China annually and we pledge to bring this down to zero in the next 24 months #BoycottChina
— Parth Jindal (@ParthJindal11) July 2, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.