ಕಾರ್ಗಿಲ್ ಈ ಶಬ್ಧ ಭಾರತೀಯರ ಕಿವಿಗೆ ಹೊಕ್ಕ ಕ್ಷಣ ರೋಮಾಂಚನ ಗೊಳ್ಳತ್ತದೆ. ಕಾರ್ಗಿಲ್ ಭಾರತೀಯರ ಗೌರವದ ಪ್ರತೀಕ ಎಂದೇ ಹೇಳಬಹುದು. ರಾಷ್ಟ್ರಭಕ್ತರು ಕಾರ್ಗಿಲ್ ಅನ್ನು ಮೆರೆಯುವುದು ಕಷ್ಟ. ಕಾಶ್ಮೀರದ ಪವಿತ್ರ ನೆಲದಲ್ಲಿ ಕಾರ್ಗಿಲ್ಲಿದೆ. ಕಶ್ಯಪ ಮಹರ್ಷಿಯ ಭೂಮಿ ಕಾಶ್ಮೀರ ಅದು ತಾಯಿ ಭಾರತೀಯ ಸಿಂಧೂರದಂತೆ. ಕಾಶ್ಮೀರಕ್ಕಾಗಿಯೇ ಪಾಕ್ ಭಾರತದೊಂದಿಗೆ ಪದೇ ಪದೇ ಖ್ಯಾತೆ ತೆಗೆಯುತ್ತಿರುವುದು.
ಪಾಕಿಸ್ಥಾನಕ್ಕೆ ಭಾರತದ ಮೇಲೆ ಯುದ್ಧಮಾಡಬೇಕೇಂಬ ಕಾತರತೆ ಮತ್ತು ಹಂಬಲ ಹಿಂದಿನಿಂದಲೂ ಇತ್ತು. ಪ್ರತಿ ಬಾರಿ ಯುದ್ದದಲ್ಲಿ ಭಾರತದದೊಂದಿಗೆ ಸೋತ ಇತಿಹಾಸವನ್ನು ಹೊಂದಿದೆ. ಅದರೊಂದಿಗೆ 1971 ರ ಬಾಂಗ್ಲಾ ಪಾಕ್ ಯುದ್ಧದ ಸಂದರ್ಭ ಭಾರತ ಬಾಂಗ್ಲಾವನ್ನು ಬೆಂಬಲಿಸಿದಕ್ಕೆ ಪಾಕ್ ಸೋಲನ್ನು ಅನುಭವಿಸಿತು. 1998 ರಲ್ಲಿ ಪೊಕ್ರಾನ್ ಪರೀಕ್ಷೆ ನಡೆಸಿ ಭಾರತ ಅಣುವಸ್ತ್ರ ಹೊಂದಿದ ದೇಶವೆಂದಾಯಿತು. ಈ ಎಲ್ಲದರ ಸೇಡನ್ನು ತೀರಿಸಲು ಅಂದಿನ ಪಾಕ್ ಸರಕಾರ ಸಮಯದ ಹೊಂದಾಣಿಕೆ ಮಾಡಿ ಹೊಂಚುಹಾಕಿ ಕಾಯುತ್ತಿತ್ತು. ಅದೇ ಸಂದರ್ಭ ಅಂದಿನ ಭಾರತದ ಪ್ರಧಾನಿ ವಾಜಪೇಯಿಯವರು ಪಾಕಿಸ್ಥಾನದ ಕಡೆ ಸ್ನೇಹ ಭಾಂದವ್ಯ ವೃದ್ಧಿಸಲು ಸ್ನೇಹ ಹಸ್ತಚಾಚಿದರು. ಪಾಕಿಸ್ಥಾನವು ಅದಕ್ಕೆ ಪೂರಕವೆಂಬಂತೆ ಸ್ಪಂದಿಸಿತು. ಆದರೆ ಕಪಟಿ ಪಾಕಿಸ್ಥಾನ ಭಾರತದ ಶಾಂತಿ ಮತ್ತು ಸ್ನೇಹವನ್ನು ಭಾರತದ ದೌರ್ಬಲ್ಯವೆಂದು ತಿಳಿಯಿತು.
ಪಾಕ್ ಭಾರತದ ಶಾಂತಿಯುತ ಸ್ನೇಹಕ್ಕೆ ದ್ರೋಹ ಬಗೆಯಲು ಮಾಸ್ಟರ್ ಪ್ಲಾನ್ ಅನ್ನು ಮೊದಲೇ ಸಿದ್ದ ಪಡಿಸಿತ್ತ್ತು. ಅದಾದ ಮೇಲೆ ವಾಜಪೇಯಿಯವರು ಸ್ನೇಹದ ಮಾತುಕತೆಯನ್ನು ನಡೆಸಿದ 15 ದಿನದ ನಂತರ ಈ ಕಾರ್ಗಿಲ್ ಕದನ ಆರಂಭವಾಯಿತು. ಪ್ರಾರಂಭದಲ್ಲಿ ಈ ಹೋರಾಟ ನಡೆಸುತ್ತಿರುವವರು ಭಯೋತ್ಪಾದಕರು, ಜಿಹಾದಿಗಳು ಎಂದು ಪಾಕಿಸ್ಥಾನ ಹೇಳಿತಾದರು ಅದು ಸತ್ಯವಾಗಿರಲಿಲ್ಲ. ಅಲ್ಲಿನ ಪ್ಯಾರಾಮಿಲಿಟರಿ ಪಡೆಯು ಈ ದಾಳಿಯನ್ನು ಮಾಡಿದ್ದು ಕಟು ಸತ್ಯ .
ಕಾರ್ಗಿಲ್ಯುದ್ಧ ನಡೆದದ್ದು ಮುಖ್ಯವಾಗಿ ಕಾಶ್ಮೀರಕ್ಕಾಗಿ. ಪಾಕ್ ಕಾಶ್ಮೀರ ಮತ್ತು ಸಿಯಾಚಿನ್ ಅನ್ನು ವಶಪಡಿಸಲು ಸಿದ್ಧತೆ ನಡೆಸಿತ್ತು. ಸಿಯಾಚಿನ್ ವಶಪಡಿಸಿ ಭಾರತ ಮತ್ತು ನೆರೆಯ ರಾಷ್ಟ್ರಗಳ ಮೇಲೆ ಕಣ್ಣಿಡುವ ತಂತ್ರ ಪಾಕ್ನಿಂದ ನಡೆದಿತ್ತು. ಅಲ್ಲದೇ ಕಾಶ್ಮೀರವನ್ನು ಸಂಪರ್ಕಿಸುವ NH 1D ರಸ್ತೆಯನ್ನು ವಶಪಡಿಸುವುದು ಮಾತ್ರವಲ್ಲ ಆ ಮೂಲಕ ಭಾರತಕ್ಕೆ ಬುದ್ಧಿಕಲಿಸಬೇಕೆಂದು ಪಾಕ್ ಯೋಚಿಸಿತು. ಅಲ್ಲದೇ 18000 ಅಡಿ ಎತ್ತರದ ಪರ್ವತ ಶ್ರೇಣಿಯಿಂದ ತನ್ನ ದಾಳಿಯನ್ನು ಆರಂಭಿಸಿತ್ತು. ಇದಕ್ಕಾಗಿ ಪಾಕ್ ಆಪರೇಷನ್ ಭದ್ರ್ ಎಂದು ಹೆಸರಿಟ್ಟಿತ್ತು . ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್ ವಿಜಯ್ ಎಂಬ ಹೆಸರನಲ್ಲಿ ಯುದ್ಧs ಪ್ರಾರಂಭಿಸಿತು. ಅಲ್ಲದೇ ನಮ್ಮ 2,00,000 ಯೋಧರನ್ನು ಇದಕ್ಕಾಗಿ ನಿಯೋಜಿಸಲಾಯಿತು. ಆ ಪ್ರದೇಶ ಹಿಮಾಲಯದ ಸಮೀಪವಾದುದರಿಂದ ಅಲ್ಲಿ ಕೆಲವುಮ್ಮ-11 ರಿಂದ -15 ಡಿಗ್ರಿ ವರೆಗೂ ಚಳಿಯಿರುತ್ತಿತ್ತು. ಇಂಥ ಸಂಧರ್ಭದಲ್ಲೂ ನಮ್ಮ ಯೋಧರು ಪಾಕ್ ಹೊಂಚುಹಾಕಿ ಕಸಿಯಲು ಯತ್ನಿಸಿದ ರಾಷ್ಟ್ರೀಯ ಹೆದ್ದಾರಿ ಮತ್ತು ಟೈಗರ್ ಹಿಲ್ಸ್ ಪರ್ವತ ಶ್ರೇಣಿಗಳನ್ನು ತನ್ನ ವಶಕ್ಕೆ ಪಡೆಯಿತು.
ಪರ್ವತ ಶ್ರೇಣಿಗಳು ಹೇಗಿತ್ತೆಂದರೆ ಪಾಕ್ ಸೈನಿಕರಿಗೆ ಭಾರತದ ಚಲನವಲನಗಳು ಗೋಚರಿಸುತ್ತಿದ್ದವು. ಆದರೆ ಆ ಟೈಗರ್ ಹಿಲ್ಸ್ ಪರ್ವತ ಶ್ರೇಣಿಗಳನ್ನು ಹತ್ತದೇ ಯುದ್ಧ ಮಾಡಲು ಸಾಧ್ಯವಿಲ್ಲ. ಮೈನಸ್ ಡಿಗ್ರಿ ಮೈನಡಗುವ ವಾತಾವರಣ ಅಲ್ಲದೇ ಪ್ರರ್ವತ ಹತ್ತುತ್ತಾ ಮೇಲೆ ಹೋದಂತೆ ಅಲ್ಲಿ ಉಸಿರಾಟದ ತೊಂದರೆ ಇಷ್ಟೇಲ್ಲಾ ಕಷ್ಟವನ್ನು ಲೆಕ್ಕಿಸದೇ ನಮ್ಮ ಯೋಧರು ಆ ಟೈಗರ್ ಹಿಲ್ಸ್ ಪರ್ವತ ಶ್ರೇಣಿಯನ್ನು ವಶಪಡಿಸಿದರು. ಅಂತಿಮವಾಗಿ ಭಾರತ ಜು.4 ರಂದು ತನ್ನ ಪ್ರದೇಶವನ್ನು ವರುವಶಪಡಿಸಿದ್ದಲ್ಲದೇ ಯುದ್ಧದಲ್ಲಿ ಬಳಲಿದ ಪಾಕ್ ಕದನ ವಿರಾಮಕ್ಕೆ ಮುಂದಾಯಿತು. ತದನಂತರ ೨ ರಾಷ್ಟ್ರಗಳ ನಡುನೆ ಮಾತುಕತೆ ನಡೆಯಿತು. ಜು.೨೬ ಪಾಕ್ ತನ್ನ ಸೋಲನ್ನು ಔಪಚಾರಿಕವಾಗಿ ಒಪ್ಪಿಕೊಂಡಿತು. ಇದನ್ನೇ ಕಾರ್ಗಿಲ್ ವಿಜಯ್ ದಿವಸ್ ಆಗಿ ಆಚರಿಸಲಾಗುತ್ತದೆ.
ಈ ವಿಜಯಕ್ಕಾಗಿ ನಾವು ನೂರಾರು ಯೋಧರನ್ನು ಕಳೆದು ಕೊಳ್ಳಬೇಕಾಯಿತು. ಅಲ್ಲಿ ಯುದ್ಧದ ಸಂದರ್ಭ ನಡೆದ ಪ್ರತಿಯೊಬ್ಬ ಯೋಧನ ಕಥೆಯೂ ರೋಚಕ. ಅದನ್ನು ಎಳೆಎಳೆಯಾಗಿ ಬಿಚ್ಚಿಟ್ಟರೆ ಮೈ ಜುಮ್ ಎನ್ನಿಸುತ್ತದೆ. ಅಲ್ಲದೇ ನಮ್ಮ ಯೋಧರ ತ್ಯಾಗ ಬಲಿದಾನ ನಮಗೆ ಆವಾಗಲೇ ಅರ್ಥವಾಗುವುದು ಕೂಡಾ. ನಾವು ಇಲ್ಲಿ ಸುಖದಲ್ಲಿದ್ದೇವೆ ಎಂದಾದರೆ ಅದು ಯೋಧರು ಗಡಿಗಳಲ್ಲಿ ಕಷ್ಟಪಟ್ಟು ಕಾಯುವುದರಿಂದಷ್ಟೇ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.