ಬೆಳ್ತಂಗಡಿ : ಉತ್ತರ ಭಾರತದ ಯುವಕರ ತಂಡವೊಂದು ಚಿನ್ನವನ್ನು ಹೊಳಪು ಹೆಚ್ಚಿಸುವುದಾಗಿ ಅಮಾಯಕರನ್ನು ವಂಚಿಸಲು ಯತ್ನಿಸಿ ಸಾರ್ವಜನಿಕರ ಕೈಗೆಸಿಕ್ಕಿಬಿದ್ದು ಪೊಲೀಸರ ವಶವಾದ ಘಟನೆ ಶುಕ್ರವಾರ ಅಳದಂಗಡಿಯಲ್ಲಿ ನಡೆದಿದೆ.
ಅಳದಂಗಡಿಯ ಉಂಗಿಲಬೈಲು ಸೇಸಪ್ಪ ನಲಿಕೆ ಎಂಬವರ ಮನೆಯಲ್ಲಿ ಇವರ ಪತ್ನಿ ಹಾಗೂ ಪುತ್ರಿ ಇದ್ದರು. ಗಂಡಸರು ಮನೆಯಲ್ಲಿ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ತಂಡ ಚಿನ್ನವನ್ನು ಹೊಳಪು ಮಾಡಿಕೊಡುವ ಬಗ್ಗೆ ನಯ ಮಾತುಗಳಿಂದ ಮನೆಯವರನ್ನು ನಂಬಿಸಿದ್ದಾರೆ. ಇದನ್ನು ನಂಬಿದ ಮನೆಯವರು ತಮ್ಮಲಿದ್ದ ಚಿನ್ನವನ್ನು ನೀಡಿದ್ದಾರೆ. ಹೊಳಪು ಮಾಡುವ ತಂಡ ಅದಾವುದೋ ದ್ರಾವಣವಿದ್ದ ಪ್ರಾತ್ರೆಯೊಂದರಲ್ಲಿ ಚಿನ್ನವನ್ನು ಹಾಕಿ ಅದನ್ನುಅಲ್ಲೇಇಟ್ಟು ಅಕ್ಕಪಕ್ಕ ಮನೆಗೆ ತೆರಳಿದ್ದಾರೆ. ಸ್ವಲ್ಪ ಸಮಯದಲ್ಲೇ ಸೇಸಪ್ಪ ಅವರ ಪುತ್ರ ಮನೆಗೆ ಬಂದಾಗ ಚಿನ್ನವನ್ನು ಹೊಳಪು ಮಾಡಲು ಹಾಕಿರುವ ಪಾತ್ರೆಯನ್ನು ಮನೆಯವರು ತೋರಿಸಿದ್ದಾರೆ.
ನುಮಾನಗೊಂಡಅವರು ಪಾತ್ರೆಯಿಂದ ಚಿನ್ನದ ಸರವೊಂದನ್ನು ತೆಗೆದಾಗ ತುಂಡು ತುಂಡಾಗಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅವರು ನೆರೆಕರೆಯವರಿಗೆ ಮಾಹಿತಿ ನೀಡಿ ಯುವಕರ ತಂಡದ ಹುಡುಕಾಟ ನಡೆಸಿದರು. ಮೂವರು ಯುವಕರು ಸಾರ್ವಜನಿಕರ ಬಲೆಗೆ ಬಿದ್ದಿದ್ದಾರೆ.ಇವರನ್ನು ಬೆಳ್ತಂಗಡಿ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ. ಪ್ರತಿವರ್ಷ ಮಳೆಗಾಲದ ಸಂದರ್ಭ ಉತ್ತರ ಭಾರತದ ತಂಡವೊಂದು ಗ್ರಾಮೀಣ ಪ್ರದೇಶದಲ್ಲಿ ಅಮಾಯಕರನ್ನು ಈ ರೀತಿ ವಂಚಿಸುವಕಾಯಕಕ್ಕೆ ಕೈ ಹಾಕುತ್ತಾರೆ.
ಕಳೆದ ವರ್ಷ ನಾವೂರು ಸಮೀಪದ ಇದೇರೀತಿ ವಂಚಕರ ತಂಡ ಚಿನ್ನಕ್ಕೆ ಹೊಳಪು ನೀಡಲು ಹೋಗಿ ಸಾರ್ವಜನಿಕರಿಂದ ಧರ್ಮದೇಟು ತಿಂದು ಪೋಲಿಸರಿಗೆ ಒಪ್ಪಿಸಿದ್ದರು.ಈಗೀರುವ ಯುವಕ ತಂಡ ಎಷ್ಟು ಮಂದಿಗೆ ವಂಚಿಸಿದ್ದಾರೆ ಎಂದು ತನಿಖೆಯಿಂದ ತಿಳಿದುಬರಬೇಕಷ್ಟೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.