ನವದೆಹಲಿ: ಸಾಮಾನ್ಯವಾಗಿ ಗ್ರಾಹಕರು ತಾವು ಖರೀದಿಸುವ ಮೊಬೈಲ್ ಆ್ಯಪ್ಗಳು ದುರುದ್ದೇಶವಲ್ಲದ ಹಾಗೂ ನ್ಯಾಯಸಮ್ಮತವಾದುದು ಎಂದು ಭಾವಿಸುತ್ತಾರೆ.
ಆದರೆ ಆ್ಯಪ್ ಸ್ಟೋರ್ಗಳಲ್ಲಿ ಲಭ್ಯವಾಗುತ್ತಿರುವ ಸಾವಿರಾರು ಆ್ಯಪ್ಗಳು ಮತ್ತು ಅವುಗಳ ಜಾಹೀರಾತುಗಳು ಹಾನಿಕಾರಕ ಹಾಗೂ ವಂಚನೆಗೆ ಮುಂದಾಗಿರುವದ್ದು ಎಂದು ಭದ್ರತಾ ಸಂಶೋಧನಾ ಸಂಸ್ಥೆಯೋಂದು ಬಹಿರಂಗಪಡಿಸಿದೆ. ಫೋರೆನ್ಸಿಕ್ (Forensiq) ಎಂಬ ಅಪರಾಧ ತಡೆ ಸೇವೆಗಳ ಕಂಪೆನಿಯೊಂದು ’ಮೋಬೈಲ್ ಸಾಧನ ಅಪಹರಣ’ (mobile device hijacking) ಜಾಹೀರಾತು ವಂಚನೆ ಬಗ್ಗೆ ವರದಿ ಮಾಡಿದೆ. ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಆಪ್ ಸ್ಟೋರ್, ಮೈಕ್ರೋಸಾಫ್ಟ್ ವಿಂಡೋಸ್ ಫೋನ್ ಸ್ಟೋರ್ಗಳು ಈ ವಂಚನೆಗೆ ಗುರಿಯಾಗಿವೆ. ಈ ಆಪ್ಗಳು ಪ್ರತಿ 20ರಿಂದ 30 ಸೆಕೆಂಡ್ಗಳಿಗೆ ಬದಲಾಗುತ್ತಿರುತ್ತದೆ ಎಂದು ತಿಳಿಸಿದೆ.
ಜನರು ತಮ್ಮ ಮೊಬೈಲ್ ಇಂಟರ್ನೆಟ್ ತೆರೆದ ತಕ್ಷಣವೇ ಈ ಜಾಹೀರಾತುಗಳು ಬರಲಾರಂಭಿಸುತ್ತಿದ್ದು, ಸುಮಾರು 12 ಮಿಲಿಯನ್ ಮೊಬೈಲ್ ಸಾಧನಗಳು ಈ ಜಾಹೀರಾತುಗಳಿಗೆ ಗುರಿಯಾಗುತ್ತಿದ್ದು, ಏಷ್ಯಾ ಹಾಗೂ ಯೂರೋಪ್ ಭಾಗಗಳಲ್ಲಿ 2ರಿಂದ 3 ಪ್ರತಿಶತ ಮೊಬೈಲ್ಗಳು ಈ ಸಮಸ್ಯೆ ಎದುರಿಸುತ್ತಿವೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.