ನವದೆಹಲಿ: ವಕ್ತಾರರನ್ನು ಹೊರತುಪಡಿಸಿ ಇತರ ಹಿರಿಯ ನಾಯಕರನ್ನು ಭೇಟಿಯಾಗುವುದಕ್ಕೆ ಪತ್ರಕರ್ತರಿಗೆ ಕೇಂದ್ರ ಗೃಹಸಚಿವಾಲಯ ನಿರ್ಬಂಧ ಹೇರಿದೆ. ಅಲ್ಲದೇ ಮಾಧ್ಯಮಕ್ಕೆ ಮಾಹಿತಿಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ಗೈಡ್ಲೈನ್ಗಳನ್ನು ವಿಧಿಸಿದೆ.
ಅಡಿಶನಲ್ ಡೈರೆಕ್ಟರ್ ಜನರಲ್(ಮೀಡಿಯಾ) ಮಾತ್ರ ಪತ್ರಕರ್ತರು ಕೇಳುವ ಸ್ಪಷ್ಟನೆಗೆ ಮತ್ತು ಮಾಹಿತಿಗಳನ್ನು ಬಹಿರಂಗಪಡಿಸಬೇಕು. ಅಲ್ಲದೇ ಬಹಿರಂಗಪಡಿಸುವ ಮುನ್ನ ಸಚಿವಾಲಯ ಅನುಮೋದನೆಯನ್ನು ಪಡೆದಿರಬೇಕು ಎಂಬ ನಿಯಮವನ್ನು ವಿಧಿಸಲಾಗಿದೆ.
ಗೃಹಸಚಿವಾಲಯದ ಕಛೇರಿಗೆ ಬಂದು ಹಿರಿಯ ಅಧಿಕಾರಿಗಳನ್ನು ಭೇಟಿಯಾಗುವ ಪತ್ರಕರ್ತರ ಕ್ರಮಕ್ಕೆ ಈ ನಿಯಮಗಳಿಂದ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಪತ್ರಕರ್ತರಿಗೆ ನೀಡಬೇಕಾಗಿರುವ ಎಲ್ಲಾ ಮಾಹಿತಿಗಳನ್ನು ನಾರ್ಥ್ ಬ್ಲಾಕ್ನ ಕೊಠಡಿ ಸಂಖ್ಯೆ 9ರಲ್ಲಿ ಮಾತ್ರ ಅರೇಂಜ್ ಮಾಡಲಾಗುತ್ತದೆ. ವಕ್ತಾರ ಎಂ.ಎಗಣಪತಿಯವರು ಇಲ್ಲಿಂದ ಪತ್ರಕರ್ತರಿಗೆ ಬೇಕಾದ ಮಾಹಿತಿಗಳನ್ನು ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.