ನವದೆಹಲಿ: ಗೂಗಲ್ ಪ್ಲೇ ಸ್ಟೋರ್ನಿಂದ Remove China Apps ಮತ್ತು Mitron app ಅನ್ನು ತೆಗೆದು ಹಾಕಲಾಗಿದೆ. ಈ ಎರಡು ಅಪ್ಲಿಕೇಶನ್ಗಳನ್ನು ಯಾಕೆ ತೆಗೆದು ಹಾಕಲಾಗಿದೆ ಎಂದು ಗೂಗಲ್ ಸ್ಪಷ್ಟನೆ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.
Remove China Apps ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಿರುವ ಜೈಪುರ ಮೂಲದ ಒನ್ ಟಚ್ ಲ್ಯಾಬ್ಸ್, ಟ್ವಿಟರ್ ಮೂಲಕ ಗೂಗಲ್ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಘೋಷಿಸಿದೆ. ಅಪ್ಲಿಕೇಶನ್ ಅನ್ನು ಏಕೆ ತೆಗೆದುಹಾಕಲಾಗಿದೆ ಎಂಬುದನ್ನು ಸಂಸ್ಥೆ ಕೂಡ ಖಚಿತಪಡಿಸಿಲ್ಲ.
ಗೂಗಲ್ ಸಾಮಾನ್ಯವಾಗಿ ಪ್ಲೇ ಸ್ಟೋರ್ನ ನೀತಿಗಳನ್ನು ಉಲ್ಲಂಘಿಸುವ ಅಪ್ಲಿಕೇಶನ್ಗಳನ್ನು ತೆಗೆದುಹಾಕುತ್ತದೆ. Mitron appಗೂ ಇದೇ ಆಗಿದೆ ಎನ್ನಲಾಗಿದೆ. CNBCTV18 ವರದಿಯು, “ಗೂಗಲ್ ಅಪ್ಲಿಕೇಶನ್ ಅನ್ನು ರೆಡ್-ಫ್ಲ್ಯಾಗ್ ಮಾಡಿದೆ ಮತ್ತು ತನ್ನ ಸ್ಪ್ಯಾಮ್ ಮತ್ತು ಕನಿಷ್ಠ ಕ್ರಿಯಾತ್ಮಕತೆ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅದನ್ನು ಅಮಾನತುಪಡಿಸಲು ನಿರ್ಧರಿಸಿದೆ” ಎಂದಿದೆ.
‘ಪುನರಾವರ್ತಿತ ವಿಷಯ’ ಅಂದರೆ ಯಾವುದೇ ಮೂಲ ವಿಷಯ ಅಥವಾ ಮೌಲ್ಯವನ್ನು ಸೇರಿಸದೆಯೇ ಇತರ ಅಪ್ಲಿಕೇಶನ್ಗಳಿಂದ ವಿಷಯವನ್ನು ನಕಲಿಸುವುದು ಕೂಡ ಗೂಗಲ್ ನಿಯಮದ ಉಲ್ಲಂಘನೆಯಾಗಿದೆ.
ನಾವು ನಮ್ಮ ಮೊಬೈಲ್ಗಳಲ್ಲಿ ಅಳವಡಿಸಿಕೊಂಡಿರುವ ಚೀನಿ ಆ್ಯಪ್ಗಳನ್ನು ಪತ್ತೆ ಹಚ್ಚಿ ಅವುಗಳನ್ನು ಡಿಲೀಟ್ ಮಾಡುತ್ತಿದ್ದ ರಿಮೂವ್ ಚೀನಾ ಆ್ಯಪ್ಸ್ ಅನ್ನು 10 ಲಕ್ಷ ಭಾರತೀಯರು ಡೌನ್ಲೋಡ್ ಮಾಡಿಕೊಂಡಿದ್ದರು. Mitron app ಕೂಡ ಚೀನಾದ ಟಿಕ್ ಟಾಕ್ಗೆ ಅತೀದೊಡ್ಡ ಪ್ರತಿಸ್ಪರ್ಧಿ ಎಂದು ಬಿಂಬಿಸಲ್ಪಟ್ಟಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.