ಅಂಫಾನ್ ಚಂಡಮಾರುತದ ಕುರಿತು ಮೋದಿ ಸರ್ಕಾರ ಎಚ್ಚರಿಸಿದ ಮೇಲೂ ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿ ಉಂಟಾಗಲೂ ಕಾರಣವಿಲ್ಲದ್ದೇನಿಲ್ಲ, ಮೋದಿ ಎಂದರೆ ಉರಿದು ಬೀಳುವ ಮಮತಾ ಬ್ಯಾನರ್ಜಿ ಎಲ್ಲದರಲ್ಲೂ ರಾಜಕೀಯ ಮಾಡುವ ಕುತ್ಸಿತ ಮನೋಭಾವನೆಯ ರಾಜಕಾರಣಿ. ಕೇಂದ್ರ ಸರ್ಕಾರದ ಏಜೆನ್ಸಿಗಳು ಸ್ಪಷ್ಟವಾಗಿ ಮುನ್ಸೂಚನೆ ನೀಡಿದ ನಂತರವೂ ಬಂಗಾಳದಲ್ಲಿ ಅಪಾರ ಸಾವು ನೋವು ಸಂಭವಿಸಿದೆ. ಇದೇ ಅಂಫಾನ್ ಒಡಿಶಾದಲ್ಲೂ ಬೀಸಿದೆ, ಆದರೆ ನವೀನ್ ಪಟ್ನಾಯಕ್ ಸಮರ್ಥವಾಗಿ ಎದುರಿಸಿ ಸವಾಲು ಗೆದ್ದಿದ್ದಾರೆ. ದೀದಿಯ ಮನಸ್ಥಿತಿ ಬಂಗಾಲದ ಜನರನ್ನು ಕಣ್ಣೀರಲ್ಲಿ ತೋಯಿಸುತ್ತಿದೆ.
ಅಂಫಾನ್ ಮಾರುತ ದೈತ್ಯ ರೂಪ ತಾಳಿ ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಅಪ್ಪಳಿಸಿ ಭೀಕರ ಅನಾಹುತ ಸೃಷ್ಟಿಸಿದೆ. ಅದರಲ್ಲೂ ಬಂಗಾಳದಲ್ಲಿ ಭಾರೀ ಪರಿಣಾಮ ಬೀರಿದೆ. ಗಂಟೆಗೆ 190 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆ ಅಪಾರ ಸಾವು ನೋವು ನಷ್ಟಗಳಿಗೆ ಕಾರಣವಾಗಿದೆ. ಕಳೆದ 100 ವರ್ಷಗಳ ಇತಿಹಾಸದಲ್ಲಿ ಬಂಗಾಳ ಕಂಡ ಅತ್ಯಂತ ತೀಕ್ಷ್ಣ ಸ್ವರೂಪದ ಚಂಡಮಾರುತ ಇದಾಗಿತ್ತು. ಚಂಡಮಾರುತದ ಅಬ್ಬರಕ್ಕೆ ಬಂಗಾಳದಲ್ಲಿ 76 ಮಂದಿ ಅಸುನೀಗಿದ್ದಾರೆ. ಒಡಿಶಾದಲ್ಲಿ 6 ಮಂದಿ ಬಲಿಯಾಗಿದ್ದಾರೆ.
ದೀದಿ ನಾಡಲ್ಲಿ ಎಲ್ಲವೂ ರಾಜಕೀಯವೇ..!
ಕೇಂದ್ರ ಸರ್ಕಾರದ ಯೋಜನೆಗಳನ್ನು, ಕಾನೂನುಗಳನ್ನು ರಾಜಕೀಯ ಕಾರಣಗಳಿಗಾಗಿ ಸದಾ ವಿರೋಧಿಸುತ್ತಾ ಬಂದಿರುವ ಮಮತಾ ಬ್ಯಾನರ್ಜಿ ಅಂಫಾನ್ ಚಂಡಮಾರುತ ವಿಚಾರದಲ್ಲೂ ಮೋದಿ ಸರ್ಕಾರದ ಸೂಚನೆಗಳನ್ನು, ಸಲಹೆಗಳನ್ನು ನಿರ್ಲಕ್ಷಿಸಿತು. ಪರಿಣಾಮವಾಗಿ ಹೆಚ್ಚಿನ ಪರಿಣಾಮ ಎದುರಿಸುತ್ತಿದೆ. ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರ ದೂದೃಷ್ಟಿಯ ಯೋಜನೆಯಗಳು ಮತ್ತು ತ್ವರಿತ ಚಿಂತನೆಗಳು ಒಡಿಶಾವನ್ನು ಅಪಾರ ಹಾನಿಯಿಂದ ಕಾಪಾಡಿದೆ. ಒಡಿಶಾ ಹಿಂದಿನ ಘಟನೆಗಳಿಂದ ಪಾಠ ಕಲಿತಿದೆ, ಆದರೆ ದೀದಿ ಮೋದಿಗೆ ಪಾಠ ಕಲಿಸುತ್ತೇನೆ ಎಂಬ ಜಿದ್ದಿನಲ್ಲಿ ಜನರಿಗೆ ಅನ್ಯಾಯ ಮಾಡುತ್ತಿದೆ. ಮಮತಾ ಬ್ಯಾನರ್ಜಿ ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಹಿಡಿದು ಇತ್ತೀಚೆಗಿನ ಕೋವಿಡ್ ಸೋಂಕಿನ ವಿಚಾರದಲ್ಲೂ ಕೇಂದ್ರ ಸರ್ಕಾರದೊಂದಿಗೆ ಗುದ್ದಾಟವನ್ನು ಮುಂದುವರೆಸಿಕೊಂಡು ಬಂದವರೇ ಈಗ ಚಂಡಮಾರುತದಂತಹ ಪ್ರಾಕೃತಿಕ ವಿಕೋಪದಲ್ಲೂ ಮುಂದುವರೆಸಿದ್ದಾರೆ.
ಕೇಂದ್ರ ಹವಾಮಾನ ಇಲಾಖೆಯ ಸ್ಪಷ್ಟ, ನಿರ್ದಿಷ್ಟ ಸೂಚನೆ, ಕೇಂದ್ರ ಸರ್ಕಾರದ ಸಹಕಾರಗಳ ಹೊರತಾಗಿಯೂ ಮಮತಾ ಬ್ಯಾನರ್ಜಿ ಅಂಫಾನ್ ಚಂಡಮಾರುತವನ್ನು ಎದುರಿಸುವಲ್ಲಿ ವಿಫಲರಾಗಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಕೇಂದ್ರ ಮೋದಿ ಸರ್ಕಾರದೊಂದಿಗೆ ಜಿದ್ದು ಸಾಧಿಸಲು ಹೋಗಿ ಮುಗ್ಧ ಜನರಿಗೆ ಅನ್ಯಾಯ ಮಾಡಿ, ಕಾರ್ಮಿಕರು, ಶ್ರಮಿಕರು ಬೀದಿಗೆ ಬೀಳುವಂತಾಗಲು ಕಾರಣರಾಗಿದ್ದಾರೆ. ಇನ್ನಾದರೂ ದೀದಿಗೆ ಬುದ್ದಿ ಬರಲಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.