ವಲಸಿಗ ಕಾರ್ಮಿಕರ ಬಗ್ಗೆ ನಾಟಕ ಮಾಡುತ್ತಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಿರುದ್ಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಿಡಿಕಾರಿದ್ದಾರೆ. ವಲಸಿಗ ಕಾರ್ಮಿಕರ ವಿಚಾರದಲ್ಲಿ ರಾಹುಲ್ ನಾಟಕ ಮಾಡುತ್ತಿದ್ದಾರೆ ಎಂದು ಆತ್ಮನಿರ್ಭರ್ ಭಾರತ ಪ್ಯಾಕೇಜ್ ವಿವರಣೆಯ ಸಂದರ್ಭದಲ್ಲಿ ಸೀತಾರಾಮನ್ ಹೇಳಿದ್ದರು. ರಾಹುಲ್ ಮತ್ತು ಅವರ ಕಾಂಗ್ರೆಸ್ ಪಕ್ಷದ ಇತರ ನೇತಾರರು ವಲಸಿಗ ಕಾರ್ಮಿಕರ ವಿಷಯದಲ್ಲಿ ಕೇಂದ್ರ ಸರಕಾರ ತೆಗೆದುಕೊಂಡ ಪ್ರತಿಯೊಂದು ನಿರ್ಧಾರವನ್ನು ಕೂಡ ಅವಹೇಳನ ಮಾಡುತ್ತಿದ್ದಾರೆ ಮತ್ತು ಕಡೆಗಣಿಸುತ್ತಿದ್ದಾರೆ.
“ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳು ಅಥವಾ ಅವರ ಮೈತ್ರಿ ಸರಕಾರಗಳು ವಲಸಿಗ ಕಾರ್ಮಿಕರಗಾಗಿ ಯಾಕೆ ಏನನ್ನೂ ಮಾಡುತ್ತಿಲ್ಲ ಎಂದು ನಾನು ಕೇಳಲು ಬಯಸುತ್ತೇನೆ. ಎಲ್ಲಿ ಆಗುತ್ತದೆ ಅಲ್ಲಿ ಹೆಚ್ಚು ರೈಲುಗಳನ್ನು ಬಿಡಿ, ವಲಸಿಗರಿಗೆ ಸಹಾಯ ಮಾಡಿ. ಅವರೊಂದಿಗೆ ನಡೆಯಿರಿ, ಅವರ ಲಗೇಜುಗಳನ್ನು ಎತ್ತಿಕೊಳ್ಳಿ, ಅವರ ಪಕ್ಕದಲ್ಲಿ ಕೂತುಕೊಂಡು ಅವರ ಜೊತೆ ಮಾತನಾಡಿ” ಎಂದು ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ಪಕ್ಷಕ್ಕೆ ಹೇಳಿದ್ದರು. ಅಲ್ಲದೆ, ಕೇಂದ್ರ ಸರಕಾರವು ವಿವಿಧ ರಾಜ್ಯ ಸರಕಾರಗಳೊಂದಿಗೆ ಕೈಜೋಡಿಸಿ ಅವರ ಸ್ಥಳಾಂತರಕ್ಕೆ ಬೇಕಾದ ವಿಶೇಷ ರೈಲಿನಲ್ಲಿ ವ್ಯವಸ್ಥೆಯನ್ನು ಮಾಡಿದೆ ಎಂದಿದ್ದಾರೆ.
“ನಾವು ಲಕ್ಷಾಂತರ ವಲಸಿಗ ಕಾರ್ಮಿಕರು ಅವರ ತವರು ಸೇರುವಂತೆ ಮಾಡಿದ್ದೇವೆ, ಆಹಾರ ಮತ್ತು ಅಗತ್ಯ ವಸ್ತುಗಳು ಅವರಿಗೆ ದೊರಕುವಂತೆ ಮಾಡಿದ್ದೇವೆ. ಆದರೂ ಹಲವಾರು ಮಂದಿ ರಸ್ತೆಯಲ್ಲಿ ಇದ್ದಾರೆ, ಮನೆಗಳಿಗೆ ನಡೆದುಕೊಂಡು ಹೋಗುತ್ತಿದ್ದಾರೆ. ಇದನ್ನು ನೋಡಲು ನೋವಾಗುತ್ತದೆ” ಎಂದು ಸೀತಾರಾಮನ್ ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿ ವಲಸಿಗ ಕಾರ್ಮಿಕರೊಂದಿಗೆ ಮಾತುಕತೆಯನ್ನೂ ನಡೆಸಿದ್ದರು. ಈ ಸಂದರ್ಭದಲ್ಲಿ ವಲಸಿಗರು ತಮ್ಮ ತವರಿಗೆ ನಡೆದುಕೊಂಡು ಹೋಗುತ್ತಿದ್ದರು, ಮಥುರಾ ರಸ್ತೆಯ ಸುಖ್ದೇವ್ ವಿಹಾರ್ ಫ್ಲೈಓವರ್ನಲ್ಲಿ ವಿಶ್ರಾಂತಿ ಪಡೆದುಕೊಂಡಿದ್ದರು.
14 ರಿಂದ 15 ವಲಸಿಗರೊಂದಿಗೆ ರಾಹುಲ್ ಅವರು ಕುಳಿತುಕೊಂಡು ಮಾತನಾಡುತ್ತಿರುವ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದನ್ನು ನೋಡಿಯೇ ಸೀತಾರಾಮನ್ ಅವರು ವಲಸಿಗರ ನೆರವಿಗೆ ಧಾವಿಸಬೇಕು ಎಂದು ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ರಾಹುಲ್ ಗಾಂಧಿ ವಿರುದ್ಧ ನೇರವಾಗಿ ದಾಳಿಗಳನ್ನು ನಡೆಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ರಾಹುಲ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
LIVE: Press conference by Smt. @nsitharaman. https://t.co/OJaVz9QHVe
— BJP (@BJP4India) May 17, 2020
1. ಆರ್ಬಿಐನ ಉದ್ದೇಶಪೂರ್ವಕ ವಂಚಕರ ಪಟ್ಟಿ
ಆರ್ಬಿಐ ಉದ್ದೇಶಪೂರ್ವಕ ಹಣಕಾಸು ವಂಚಕರ ಪಟ್ಟಿಯನ್ನು ಏಪ್ರಿಲ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು. ಆದರೆ ರಾಹುಲ್ ಗಾಂಧಿಯವರು ಈ ಪಟ್ಟಿಯ ವಿರುದ್ಧ ಕಿಡಿಕಾರಿದ್ದರು, ಬಿಜೆಪಿಯ ಸ್ನೇಹಿತರು ಈ ಪಟ್ಟಿಯಲ್ಲಿ ಇಲ್ಲ ಎಂದು ಆರೋಪಿಸಿದ್ದರು. ಇದೇ ಕಾರಣಕ್ಕೆ ಏಪ್ರಿಲ್ 29 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದ ಉದ್ದೇಶಪೂರ್ವಕ ಡಿಫಾಲ್ಟರ್ಗಳ ಪಟ್ಟಿಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿಲ್ಲ ಎಂದಿದ್ದರು. ರಾಹುಲ್ ಗಾಂಧಿಯವರ ಈ ಆರೋಪಕ್ಕೆ ನಿರ್ಮಲಾ ಸೀತಾರಾಮನ್ ತೀಕ್ಷ್ಣ ಪ್ರತ್ಯುತ್ತರವನ್ನೇ ನೀಡಿದ್ದರು.
Shri @RahulGandhi MP (LS) and Shri @rssurjewala spokesperson of @INCIndia have attempted to mislead people in a brazen manner. Typical to @INCIndia, they resort to sensationalising facts by taking them out of context. In the following tweets wish to respond to the issues raised.
— Nirmala Sitharaman (@nsitharaman) April 28, 2020
“ರಾಹುಲ್ ಗಾಂಧಿ, ಕಾಂಗ್ರೆಸ್ ವಕ್ತಾರ ಎಸ್ಆರ್ ಸುರ್ಜೇವಾಲ ಅವರು ಲಜ್ಜೆಗೆಟ್ಟ ರೀತಿಯಲ್ಲಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವಿಷಯಗಳನ್ನು ದಾರಿ ತಪ್ಪಿಸುವ ಮೂಲಕ ಸತ್ಯವನ್ನು ಮರೆಮಾಚಲು ಕಾಂಗ್ರೆಸ್ ಪಕ್ಷದ ಪ್ರವೃತ್ತಿ” ಎಂದು ಸೀತಾರಾಮನ್ ಹೇಳಿದ್ದರು. 13 ಟ್ವೀಟ್ಗಳ ಸರಣಿಯಲ್ಲಿ ಇದು ಮೊದಲ ಟ್ವೀಟ್ ಆಗಿತ್ತು. ಬಳಿಕ ಟ್ವೀಟ್ಗಳಲ್ಲಿ ಅವರು ಉದ್ದೇಶಪೂರ್ವಕ ವಂಚಕರ ಬಗ್ಗೆ ಹಲವಾರು ಮಾಹಿತಿಗಳನ್ನು ಹೊರಹಾಕಿದ್ದರು.” ಉದ್ದೇಶಪೂರ್ವಕ ಪಟ್ಟಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಹಿಂದಿನ ಪ್ರಯತ್ನ ಜನರನ್ನು ದಾರಿತಪ್ಪಿಸುವುದಾಗಿದೆ. 2009 -10 ಮತ್ತು 2013- 14ನೇ ಸಾಲಿನಲ್ಲಿ ವಾಣಿಜ್ಯ ಬ್ಯಾಂಕುಗಳು ರೂ. 145226.00 ಕೋಟಿಗಳನ್ನು ರಿಟನ್ ಆಫ್ ಮಾಡಿವೆ. ರಾಹುಲ್ ಗಾಂಧಿಯವರು ರೈಟಿಂಗ್ ಆಫ್ ಎಂದರೇನು ಎಂಬ ಬಗ್ಗೆ ಡಾ. ಮನಮೋಹನ್ ಸಿಂಗ್ ಅವರ ಬಳಿ ಒಂದು ಬಾರಿ ಸಮಾಲೋಚನೆ ನಡೆಸಬೇಕಿತ್ತು ಎಂದು ನಾನು ಬಯಸುತ್ತೇನೆ” ಎಂದು ಮತ್ತೊಂದು ಟ್ವೀಟ್ನಲ್ಲಿ ಅವರು ಹೇಳಿದ್ದರು.
2. NYAY ಭರವಸೆ
2019ರ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ತನ್ನ ಫ್ಲೆಕ್ಸಿಬಲ್ ಎಕನಾಮಿಕ್ ಐಡಿಯಾಲಜಿ ಅನ್ನು ಪ್ರತಿಬಿಂಬಿಸುವಂತಹ NYAY ಅನ್ನು ಪ್ರಸ್ತಾಪ ಮಾಡಿದ್ದು. ಇದರನ್ವಯ ರೈತರಿಗೆ ಮಾಸಿಕ ರೂ. 6000 ಹಣಕಾಸು ನೆರವನ್ನು ಘೋಷಣೆ ಮಾಡಿತ್ತು. ಇದನ್ನು ಪ್ರಶ್ನೆ ಮಾಡಿದ್ದ ಸೀತಾರಾಮನ್ ಅವರು, “ಕಾಂಗ್ರೆಸ್ ಪಕ್ಷವು ಈ ಹಿಂದೆ ಗರೀಬಿ ಹಟಾವೋ ಎಂಬುದನ್ನು ಪ್ರಚಾರ ಮಾಡಿತ್ತು, ಆದರೆ ಇಂದಿಗೂ ಬಡತನ ನಿರ್ಮೂಲನೆಯಾಗಿಲ್ಲ. ಒಂದು ವೇಳೆ ಕಾಂಗ್ರೆಸ್ ನಿರ್ಮೂಲನೆ ಮಾಡಿದ್ದರೆ, NYAYಯ ಅಗತ್ಯವಾದರೂ ಏನಿತ್ತು?” ಎಂದು ಪ್ರಶ್ನಿಸಿದ್ದರು.
“ಕಾಂಗ್ರೆಸ್ ಪಕ್ಷದ ಮಾಸಿಕ ರೂ. 6000 ಭರವಸೆ ಮತ್ತು ಬಿಜೆಪಿಯ ವಾರ್ಷಿಕ 6 ಸಾವಿರ ರೂಪಾಯಿಗಳ ಭರವಸೆ ರಫೆಲ್ ದರವನ್ನು ಉಲ್ಲೇಖಿಸುವುದು ಮತ್ತು ನಮ್ಮ ದರವನ್ನು ಅವರೊಂದಿಗೆ ಹೋಲಿಕೆ ಮಾಡಿದಂತೆ” ಎಂದಿದ್ದರು.
ಕೇರಳದಲ್ಲಿ ರಾಹುಲ್ ಗಾಂಧಿಯವರು ಎರಡನೇ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿದ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ್ದ ಸೀತಾರಾಮನ್ ಅವರು, “ಅವರು ಸ್ಪಷ್ಟವಾಗಿ ಎಂಪಿ ಆಗಿದ್ದರು ಮತ್ತು ಒಂದು ವೇಳೆ ಅವರು ತಮ್ಮ ಕ್ಷೇತ್ರಕ್ಕೆ ಚೆನ್ನಾಗಿ ಸೇವೆ ಸಲ್ಲಿಸಿದ್ದರೆ, ಮತ್ತೊಂದು ಕ್ಷೇತ್ರದತ್ತ ನೋಡುವ ಅವಶ್ಯಕತೆಯಾದರೂ ಏನಿತ್ತು?” ಎಂದಿದ್ದರು.
ರಾಹುಲ್ ಗಾಂಧಿಯ ಸ್ಪರ್ಧೆಯನ್ನು ನರೇಂದ್ರ ಮೋದಿಯವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಕ್ಕೆ ಹೋಲಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಅವರು, “ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿಯನ್ನು ಹೋಲಿಕೆ ಮಾಡುವ ಮೂಲಕ ಸುಳ್ಳು ವಾದವನ್ನು ಮಂಡಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಾರಣಾಸಿಯಲ್ಲಿ ಸ್ಪರ್ಧೆ ಮಾಡಿದ ಸಂದರ್ಭದಲ್ಲಿ, ಮೋದಿ ಅವರನ್ನು ದೇಶದ ಬೇರೆ ಭಾಗದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂಬ ವಾದಗಳು ಇದ್ದವು. ಆದರೆ ಮೋದಿ ಅವರು ತಮ್ಮ ಸ್ಪರ್ಧೆಯ ಮೂಲಕ ಅದನ್ನು ಸುಳ್ಳು ಎಂದು ಸಾಬೀತುಪಡಿಸಿದರು” ಎಂದಿದ್ದಾರೆ.
3. ರಫೆಲ್ ಒಪ್ಪಂದ
ರಫೆಲ್ ಒಪ್ಪಂದ ದೇಶದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ರಾಹುಲ್ ಗಾಂಧಿಯವರ ನಿಜ ಮುಖವನ್ನು ಅನಾವರಣಗೊಳಿಸಿದ ನಿರ್ಮಲಾ ಸೀತಾರಾಮನ್ ಅವರ ಪರಿಯನ್ನು ಭಾರತೀಯ ರಾಜಕೀಯ ಇತಿಹಾಸ ಎಂದಿಗೂ ಮರೆಯಲು ಸಾಧ್ಯವಿಲ್ಲ. ಅಂದಿನ ರಕ್ಷಣಾ ಸಚಿವರಾಗಿದ್ದ ಸೀತಾರಾಮನ್ ಅವರು ರಫೆಲ್ ಬಗ್ಗೆ ಸುಳ್ಳು ಆರೋಪ ಮಾಡಿದ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು, ಅದರ ಜನ್ಮ ಜಾಲಾಡಿದರು. ರಾಹುಲ್ ಗಾಂಧಿಯವರು ರಫೆಲ್ ವಿಷಯದಲ್ಲಿ ಮೋದಿ ವಿರುದ್ಧ ಆರೋಪವನ್ನು ಮಾಡಿ, ರಫೆಲ್ ವಿಮಾನದ ಸಂಖ್ಯೆಯನ್ನು ಉದ್ದೇಶಪೂರ್ವಕವಾಗಿ 126 ರಿಂದ 36ಕ್ಕೆ ಇಳಿಸಲಾಗಿದೆ, ಕಾಂಗ್ರೆಸ್ ಒಪ್ಪಂದವೇ ಉತ್ತಮವಾಗಿತ್ತು ಎಂದಿದ್ದರು.
“2005-2013ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷವು 18 ವಿಮಾನಗಳನ್ನು ಹಾರಿಸಲು ಸಿದ್ಧವಾಗಿತ್ತು ಮತ್ತು 108 ಎಚ್ಎಎಲ್ನಿಂದ ಉತ್ಪಾದಿಸಬೇಕಾಗಿತ್ತು (ಇನ್ನೂ 100 ವರ್ಷಗಳು ತೆಗೆದುಕೊಳ್ಳುತ್ತದೆ). ಬದಲಾಗಿ ನಾವು ಭಾರತೀಯ ವಾಯುಪಡೆಯ ಬೇಡಿಕೆಯನ್ನು ಉಲ್ಲೇಖಿಸಿ 36 ವಿಮಾನಗಳನ್ನು ಹಾರಲು ಸಿದ್ಧವಾಗಿ ಖರೀದಿಸಿದ್ದೇವೆ. ನಾವು ಅವರ ಆರ್ಡರ್ ಅನ್ನು 18 ರಿಂದ 36 ಕ್ಕೆ ದ್ವಿಗುಣಗೊಳಿಸಿದ್ದೇವೆ. ಪ್ರಧಾನಮಂತ್ರಿಗಳು ಸಂಖ್ಯೆಯನ್ನು 126 ರಿಂದ 36 ಕ್ಕೆ ಇಳಿಸಿಲ್ಲ, ಅವರು 2019ರ ವರ್ಷದಲ್ಲಿ ಸಂಖ್ಯೆಯನ್ನು 18 ರಿಂದ 36 ರವರೆಗೆ ಏರಿಸಿದರು ಎಂಬುದನ್ನು ಪ್ರತಿಪಕ್ಷಗಳು ಅರ್ಥಮಾಡಿಕೊಳ್ಳಬೇಕು ”ಎಂದು ಅವರು ಸೀತಾರಾಮನ್ ಹೇಳಿದ್ದರು.
Nirmala Sitharaman attacks Congress citing the factsheets and the SC order over the Rafale deal
“The Congress party is misleading the country with the falsehood and should learn the facts before seeking the house. The opposition need to understand that the Prime Minister din’t reduce the number from 126 to 36, he took 18 to 36 coming in this year, 2019.
“2013 ರಲ್ಲಿ ಸರ್ಕಾರ ಸಾರ್ವಜನಿಕ ಕಂಪನಿಗಳಿಗೆ (ಎಚ್ಎಎಲ್) ಮನ್ನಾ ನೀಡಿತು. 3 ದಶಕಗಳಾದರೂ ಎಡಿಎಗೆ ವಿಮಾನವನ್ನು ಅಭಿವೃದ್ಧಿಪಡಿಸಲು ಮತ್ತು ವಾಯುಪಡೆಯ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ ಎಂದು ಸ್ಥಾಯಿ ಸಮಿತಿ ನಿರಾಶೆಗೊಂಡಿತ್ತು ಮತ್ತು ಈಗ ಎನ್ಡಿಎ ಆಳ್ವಿಕೆಯಲ್ಲಿ ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುತ್ತಿದೆ. ಯುಪಿಎ ಹೂಡಿಕೆ ಮಾಡುವ ಬದಲು ಎಚ್ಎಎಲ್ ವಿಸ್ತರಣೆಗಳು ಮತ್ತು ಮನ್ನಾವನ್ನು ನೀಡಿದೆ. 2005-2013ರ ಅವಧಿಯಲ್ಲಿ ಕಾಂಗ್ರೆಸ್ ಸರ್ಕಾರ ಎಚ್ಎಎಲ್ಗಾಗಿ ಏನನ್ನೂ ಮಾಡಲಿಲ್ಲ. ಅವರು ಕಾಳಜಿ ವಹಿಸಿದಿದ್ದರೆ, ಅವರು ಎಚ್ಎಎಲ್ ಸಮಸ್ಯೆಗಳು ಮತ್ತು ಹೂಡಿಕೆಯ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿತ್ತು” ಎಂದು ಸೀತಾರಾಮನ್ ಹೇಳಿದ್ದರು.
ಆಗಸ್ತಾ ವೆಸ್ಟ್ಲ್ಯಾಂಡ್ ಬದಲಿಗೆ ಹೆಚ್ಎಎಲ್ಗೆ ಹೆಲಿಕಾಪ್ಟರ್ಗಳ ಆದೇಶವನ್ನು ನೀಡಲು ಕಾಂಗ್ರೆಸ್ ಏಕೆ ವಿಫಲವಾಗಿದೆ ಎಂದು ಯೋಚಿಸುವಂತೆ ಸೀತಾರಾಮನ್ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಿದ್ದರು. ಇಡೀ ರಫೆಲ್ ವಿರೋಧಿ ಅಭಿಯಾನವು ಬೇಜವಾಬ್ದಾರಿಯಿಂದ ಕೂಡಿದೆ ಮತ್ತು ಸುಳ್ಳನ್ನು ಆಧರಿಸಿದೆ. ಸಂಸತ್ತಿನಲ್ಲಿ ಪ್ರಧಾನಮಂತ್ರಿಯವರ ವಿರುದ್ಧ ಕೆಟ್ಟಪದಗಳನ್ನು ಬಳಸಲಾಗುತ್ತಿದೆ. ವಾಯುಪಡೆಯ ಮುಖ್ಯಸ್ಥರನ್ನು ಸಹ ಸುಳ್ಳುಗಾರ ಎಂದು ಕರೆಯಲಾಗುತ್ತಿದೆ, ಅದು ಸ್ವೀಕಾರಾರ್ಹವಲ್ಲ. ಒಪ್ಪಂದವನ್ನು ಬಹಿರಂಗಪಡಿಸುವ ಬಗ್ಗೆ ಫ್ರೆಂಚ್ ಅಧ್ಯಕ್ಷರನ್ನು ಸಂಪರ್ಕಿಸಿದ್ದೇನೆ ಎಂದು ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದರು. ವಿಮಾನಗಳ ಮೂಲ ಬೆಲೆಗಳನ್ನು ಸದನದಲ್ಲಿ ಹಿಂದೆಯೇ ಬಹಿರಂಗಪಡಿಸಲಾಗಿದೆ. ಆದರೂ, ಶಸ್ತ್ರಾಸ್ತ್ರಗಳ ವೆಚ್ಚವನ್ನು ಬಹಿರಂಗಪಡಿಸಲಾಗಲಿಲ್ಲ, ಇದು ಐಜಿಎ ಅಡಿಯಲ್ಲಿ ರಹಸ್ಯ ಒಪ್ಪಂದವಾಗಿದೆ. ಸದನ ಮತ್ತು ದೇಶವನ್ನು ದಾರಿತಪ್ಪಿಸುವ ಮೊದಲು, ಸತ್ಯದ ದೃಢೀಕೃತ ನಕಲು ಪ್ರತಿಯನ್ನು ಸದನದ ಮುಂದೆ ಇಡಬೇಕು” ಎಂದು ಸೀತಾರಾಮನ್ ಅವರು ಅವರವರಿಗೆ ಮನಮುಟ್ಟುವಂತೆ ಕಿವಿಮಾತು ಹೇಳಿದ್ದರು.
Source : Newsbharathi
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.