ಬಂಟ್ವಾಳ : ಇತಿಹಾಸ ಕೇವಲ ಪರೀಕ್ಷೆಗಾಗಿ ಓದುವ ವಿಷಯ ಅಲ್ಲ. ಮಾನವನ ವರ್ತಮಾನ ಸರಿಯಾಗಿರಬೇಕಾದರೆ ಇತಿಹಾಸ ಅಧ್ಯಯನದ ಅಗತ್ಯವಿದೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿಯ ಸಹಪ್ರಾಧ್ಯಾಪಕರಾದ ಸುರೇಶ್ ರೈ.ಕೆ. ತಿಳಿಸಿದರು. ಅವರು ಶ್ರೀರಾಮ ಪದವಿಪೂರ್ವ ವಿದ್ಯಾಲಯ ಕಲ್ಲಡ್ಕ ಇದರ ಭಗೀರಥ ಪಾರಂಪರಿಕ ಕೂಟದ ಉದ್ಘಾಟನೆಯನ್ನು ನೆರವೇರಿಸಿ ಉಪನ್ಯಾಸ ನೀಡಿದರು.
ಅವರು ಭಾರತದ ಇತಿಹಾಸವನ್ನು ಪ್ರಸ್ತಾಪಿಸುತ್ತಾ ಭಾರತದ ಬಗ್ಗೆ ಇರುವ ಐತಿಹಾಸಿಕ ಬೆಳವಣಿಗೆಗಳ ಕುರಿತಾಗಿ ಉಪನ್ಯಾಸ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಶ್ರೀಕೃಷ್ಣಪ್ರಸಾದ್ ಕಾಯರ್ಕಟ್ಟೆ ಮಾತನಾಡಿ ಭಾರತ ಒಂದು ಮೃತ್ಯುಂಜಯ ರಾಷ್ಟ್ರ. ಅದಕ್ಕೆ ಕಾರಣ ಭಾರತದ ಹಿರಿಯರು ನಡೆದುಕೊಂಡು ಬಂದ ಪರಂಪರೆ.ಇತಿಹಾಸದಲ್ಲಿ ವಿಕೃತಿ ಇದ್ದರೂ ನಾವು ಅದನ್ನು ಮನಗಂಡು ಮುಂದೆ ಸುಗಮವಾದ ನಡೆ ಇರುವಂತೆ ನೋಡಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಹಾಗೂ ಶ್ರೀರಾಮ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ವಸಂತ ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಭಗೀರಥ ಪಾರಂಪರಿಕ ಕೂಟದ ನಿರ್ದೇಶಕರಾಗಿರುವ ಕಾಲೇಜಿನ ಇತಿಹಾಸ ಉಪನ್ಯಾಸಕ ತಿರುಮಲೇಶ್ವರ ಪ್ರಶಾಂತ್ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಶೋಭಿತ್ ವಂದಿಸಿ, ಸುಪ್ರೀತಾ ಕಾರ್ಯಕ್ರಮ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.