ನವದೆಹಲಿ: ದೇಶದ ಶ್ರಮಿಕ ವರ್ಗ, ವಲಸೆ ಕಾರ್ಮಿಕರು, ವಿದ್ಯಾರ್ಥಿಗಳನ್ನು ಸ್ವಸ್ಥಾನಕ್ಕೆ ತಲುಪಿಸಲು ಆರಂಭಿಸಲಾದ ‘ಶ್ರಮಿಕ’ ವಿಶೇಷ ರೈಲುಗಳಿಗೆ ಸಂಬಂಧಿಸಿದಂತೆ ರೈಲ್ವೆ ಇಲಾಖೆ ಇದೀಗ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಈ ಸುತ್ತೋಲೆಯ ಪ್ರಕಾರ ರೈಲುಗಳಲ್ಲಿ 90% ದಷ್ಟು ಆಸನಗಳು ಭರ್ತಿಯಾದ ಪಕ್ಷದಲ್ಲಿ ಮಾತ್ರವೇ ಶ್ರಮಿಕ ರೈಲುಗಳನ್ನು ಓಡಿಸಬಹುದು ಎಂದು ತಿಳಿಸಿದೆ. ಇಲಾಖೆ ಈ ಸುತ್ತೋಲೆಗಳನ್ನು ಈಗಾಗಲೇ ತನ್ನ ವಲಯಗಳಿಗೂ ಕಳುಹಿಸಿಕೊಟ್ಟಿದೆ. ಜೊತೆಗೆ ಅನುಮತಿ ಪಡೆದಿರುವ ಪ್ರಯಾಣಿಕರಿಗಷ್ಟೇ ಪ್ರಯಾಣಕ್ಕೆ ಅನುಮತಿ ನೀಡುವುದು ಮತ್ತು ಪ್ರತಿ ನಿಲ್ದಾಣಗಳಲ್ಲಿಯೂ ಭದ್ರತೆಗೆ ಆಧ್ಯತೆ ನೀಡುವಂತೆಯೂ ತಿಳಿಸಿದೆ.
ಜೊತೆಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು 1200 ಜನರಿಗೆ ರೈಲುಗಳಲ್ಲಿ ಪ್ರಯಾಣಿಸುವುದು ಸಾಧ್ಯ. ಆದ್ದರಿಂದ ಆಯಾಯ ರಾಜ್ಯ ಸರ್ಕಾರಗಳು ಸರಿಯಾದ ಯೋಜನೆ ರೂಪಿಸಿಕೊಂಡು, ನಿಯಂತ್ರಣ ನಿಯಮಗಳನ್ನು ಅನುಸರಿಸುವ ಮೂಲಕವೇ ಪ್ರಯಾಣಿಕರ ಸಂಚಾರಕ್ಕೆ ಅವಕಾಶ ಮಾಡಿ ಕೊಡುವಂತೆಯೂ ಇದರಲ್ಲಿ ತಿಳಿಸಿದೆ. ರಾಜ್ಯ ಸರ್ಕಾರ ಸೂಚಿಸಿದಷ್ಟೇ ಟಿಕೆಟ್ಗಳನ್ನು ರೈಲ್ವೆ ಇಲಾಖೆ ಮುದ್ರಿಸುವುದು. ಹಾಗೂ ಮುದ್ರಿತ ಟಿಕೆಟುಗಳನ್ನು ಸ್ಥಳೀಯ ಸರ್ಕಾರದ ಅಧಿಕಾರಿಗಳಿಗೆ ನೀಡುವಂತೆಯೂ ಸೂಚಿಸಿದೆ.
ಅಧಿಕಾರಿಗಳು ಅನುಮತಿ ಪಡೆದಿರುವ ಪ್ರಯಾಣಿಕರಿಗೆ ಟಿಕೆಟ್ ನೀಡಿ ಬಂದ ಮೊತ್ತವನ್ನು ರೈಲ್ವೆ ಇಲಾಖೆಗೆ ನೀಡುವುದು. ಎಲ್ಲಾ ಪ್ರಯಾಣಿಕರೂ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಂಡಿರಬೇಕು. ಜೊತೆಗೆ ಮಾಸ್ಕ್ ಕಡ್ಡಾಯವಾಗಿ ಧರಿಸಿರಬೇಕು. ಈ ವಿಚಾರಗಳಲ್ಲಿ ಏನೇ ಕುಂದುಕೊರತೆಗಳು ಕಂಡು ಬಂದರೂ, ರೈಲು ಸ್ಥಗಿತಗೊಳಿಸುವ ಅಧಿಕಾರ ರೈಲ್ವೆಗೆ ಇರುವುದಾಗಿ ಇಲಾಖೆ ಈ ಮಾರ್ಗಸೂಚಿಯಲ್ಲಿ ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.