ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಿಂಕ್ಡ್ಇನ್ನಲ್ಲಿ ಒಂದು ಪೋಸ್ಟ್ ಬರೆದಿದ್ದಾರೆ, ಅದರಲ್ಲಿ ಅವರು ಕೆಲಸ ಮತ್ತು ಜೀವನಶೈಲಿ COVID19- ಲಾಕ್ಡೌನ್ ನಂತರದಲ್ಲಿ ಹೇಗಿರಬೇಕು ಎಂಬ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.
ಕರೋನವೈರಸ್ ಸಾಂಕ್ರಾಮಿಕವು ಕೆಲಸದ ಅಭ್ಯಾಸಗಳು ಮತ್ತು ಉದ್ಯೋಗಗಳ ಸ್ವರೂಪವನ್ನು ಹೇಗೆ ಬದಲಾಯಿಸಬಹುದು ಎಂಬ ಬಗ್ಗೆ ತಮ್ಮ ಆಲೋಚನೆಗಳನ್ನು ಪ್ರಧಾನಿ ತಮ್ಮ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ.
ತಾನು ಸಹ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ಹೇಳಿದ್ದಾರೆ. ಭಾನುವಾರ ಪ್ರಕಟವಾದ ತಮ್ಮ ಪೋಸ್ಟ್ನಲ್ಲಿ ತಮ್ಮ ಅನುಯಾಯಿಗಳಿಗೆ ಹೊಸ ವ್ಯವಹಾರ ಮತ್ತು ಕೆಲಸದ ಸಂಸ್ಕೃತಿಯನ್ನು ಕಲಿಸಲು ಪ್ರಧಾನಿ ಇಂಗ್ಲಿಷ್ ವೊವೆಲ್ಸ್ – AEIOU ಬಳಸಿದ್ದಾರೆ.
ಭಾರತವು ಯುವ ರಾಷ್ಟ್ರವಾಗಿದ್ದು, ಅದು ನವೀನ ಉತ್ಸಾಹದಿಂದ ಹೊಸ ಕೆಲಸದ ಸಂಸ್ಕೃತಿಯನ್ನು ಒದಗಿಸುವಲ್ಲಿ ಮುಂದಾಗಬಹುದು ಎಂದು ಹೇಳಿದ ಪ್ರಧಾನಿ ಮೋದಿ, ಹೊಸ ವ್ಯವಹಾರ ಮತ್ತು ಕೆಲಸದ ಸಂಸ್ಕೃತಿಯನ್ನು ಈ ಕೆಳಗಿನ ವೊವೆಲ್ಸ್ ಮೇಲೆ ಮರು ವ್ಯಾಖ್ಯಾನಿಸಲಾಗುವುದು ಎಂದು ಹೇಳಿದ್ದಾರೆ. ಅವುಗಳೆಂದರೆ Adaptability (A), Efficiency (E), Inclusivity (I), Opportunity (O), Universalism (U) ಹೊಂದಿಕೊಳ್ಳುವಿಕೆ, ದಕ್ಷತೆ, ಒಳಗೊಳ್ಳುವಿಕೆ, ಅವಕಾಶ, ಸಾರ್ವತ್ರಿಕತೆ ಎಂದು ಈ 5 ಅಂಶಗಳ ಕುರಿತು ಹೇಳಿದ್ದಾರೆ.
“ವಿಶ್ವವು COVID-19 ವಿರುದ್ಧ ಹೋರಾಡುತ್ತಿರುವಾಗ, ಭಾರತದ ಶಕ್ತಿಯುತ ಮತ್ತು ನವೀನ ಯುವಕರು ಆರೋಗ್ಯಕರ ಮತ್ತು ಸಮೃದ್ಧ ಭವಿಷ್ಯವನ್ನು ಖಾತ್ರಿಪಡಿಸುವ ಮಾರ್ಗವನ್ನು ತೋರಿಸಬಹುದು. ಯುವಕರು ಮತ್ತು ವೃತ್ತಿಪರರಿಗೆ ಆಸಕ್ತಿಯುಂಟುಮಾಡುವ ಕುರಿತು ಲಿಂಕ್ಡ್ಇನ್ನಲ್ಲಿ ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ” ಎಂದು ಪಿಎಂ ಮೋದಿ ಟ್ವೀಟ್ ಮಾಡಿದ್ದಾರೆ.
ಈ ಹೊಸ ವ್ಯವಹಾರ ಮತ್ತು ಕೆಲಸದ ಸಂಸ್ಕೃತಿಯನ್ನು ಈ ಕೆಳಗಿನ ವೊವೆಲ್ಸ್ ಮೇಲೆ ಮರು ವ್ಯಾಖ್ಯಾನಿಸಲಾಗಿದೆ ಎಂದು ನಾನು ಊಹಿಸುತ್ತೇನೆ ಎಂದು ಪ್ರಧಾನಿ ಮೋದಿ ಅವರು “COVID-19 ರ ಯುಗದಲ್ಲಿ ಜೀವನ” ಎಂಬ ಶೀರ್ಷಿಕೆಯ ಪೋಸ್ಟ್ನಲ್ಲಿ ಹೇಳಿದ್ದಾರೆ.
“ನಾನು ಅವುಗಳನ್ನು ಹೊಸ ಸಾಮಾನ್ಯ ವೊವೆಲ್ಸ್ ಎಂದು ಕರೆಯುತ್ತೇನೆ- ಏಕೆಂದರೆ ಇಂಗ್ಲಿಷ್ ಭಾಷೆಯಲ್ಲಿನ ವೊವೆಲ್ಸ್ಗಳಂತೆ, ಇವು COVID ನಂತರದ ಪ್ರಪಂಚದ ಯಾವುದೇ ವ್ಯವಹಾರ ಮಾದರಿಯ ಅಗತ್ಯ ಅಂಶಗಳಾಗಿವೆ” ಎಂದು ಅವರು ಲಿಂಕ್ಡ್ನಲ್ಲಿ ಹೇಳಿದ್ದಾರೆ.
As the world battles COVID-19, India’s energetic and innovative youth can show the way in ensuring healthier and prosperous future.
Shared a few thoughts on @LinkedIn, which would interest youngsters and professionals. https://t.co/ZjjVSbMJ6b
— Narendra Modi (@narendramodi) April 19, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.