ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಸೃಷ್ಟಿಯಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಳೀಯ ಸಮುದಾಯಗಳ ಸಹಾಯಕ್ಕೆ ಧಾವಿಸಿದೆ ಮತ್ತು ಸ್ಥಳೀಯಾಡಳಿತಕ್ಕೆ ತನ್ನಿಂದಾದ ನೆರವನ್ನು ನೀಡುತ್ತಿದೆ. ಸಾಗರಿಕ ಘೋಷ್ ಅಂತಹ ಎಡಪಂಥೀಯ ಬುದ್ಧಿಜೀವಿಗಳು ಸಂಘದ ಸೇವಾಕಾರ್ಯವನ್ನು ಅರಗಿಸಿಕೊಳ್ಳಲು ಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
ಇತ್ತೀಚಿಗೆ ಟ್ವೀಟ್ ಮಾಡಿರುವ ಸಾಗರಿಕ ಘೋಷ್, ಸಂಘದ ಸ್ವಯಂಸೇವಕರು ನಡೆಸುತ್ತಿರುವ ಸೇವಾಕಾರ್ಯಗಳನ್ನು ಪ್ರಶಂಶಿಸಿದ್ದಾರೆ. ನಿಸ್ವಾರ್ಥವಾಗಿ ಆಹಾರ ಮತ್ತು ಅಗತ್ಯವಸ್ತುಗಳನ್ನು ಅಗತ್ಯವಿರುವ ಜನರಿಗೆ ಪೂರೈಸುತ್ತಿರುವ ಸಂಘದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಆದರೆ ಟ್ವೀಟ್ನಲ್ಲಿ ಅವರು, ಸಾಮಾಜಿಕವಾಗಿ ಒಗ್ಗೂಡಿಸುವ ಕಾರ್ಯವನ್ನು ಸಂಘ ರಚನಾತ್ಮಕವಾಗಿ ಮಾಡಬೇಕು, ಅದು ಈ ಸಮಯದ ಅನಿವಾರ್ಯತೆ ಎಂಬ ಸಲಹೆಯನ್ನು ಸಂಘಕ್ಕೆ ನೀಡಿದ್ದಾರೆ. ಆದರೆ, ಕೆಲವು ವರ್ಷಗಳಿಂದ ಸಂಘದ ಕಾರ್ಯವನ್ನು ಹತ್ತಿರದಲ್ಲಿ ನೋಡುವವನಾಗಿ, ಅವರ ಅಹಂನ ಸಲಹೆಗೆ ಪ್ರತಿಕ್ರಿಯೆ ನೀಡದೇ ಇರಲು ನನಗೆ ಸಾಧ್ಯವಾಗಿಲ್ಲ. ಹೀಗಾಗಿ ಬಹಿರಂಗ ಪತ್ರವನ್ನು ಬರೆಯುವ ಮೂಲಕ ನಾನು ಅವರಿಗೆ ಪ್ರತ್ಯುತ್ತರ ನೀಡಿದ್ದೇನೆ.
ಸಂಘದ ಒಟ್ಟು ಚೌಕಟ್ಟು ಸೇವಾ ಕಾರ್ಯ ಅಥವಾ ಸಾಮಾಜಿಕ ಸೇವೆ. ಆದರೆ, ಕ್ರಿಶ್ಚಿಯನ್ ಮಿಷನರಿ ಅಥವಾ ಇಸ್ಲಾಮಿಕ್ ಪ್ರಚಾರಕರಂತೆ ಸ್ವಯಂ ವಿಸ್ತರಣೆಗೆ ಸಂಘ ಮುಂದಾಗುವುದಿಲ್ಲ, ಬದಲಿಗೆ ಅದು ಸಂಪೂರ್ಣ ವಿಭಿನ್ನ ಪಥವನ್ನು ಅನುಸರಿಸುತ್ತದೆ. ಒಬ್ಬರ ಧರ್ಮ ಅಥವಾ ಜಾತಿಯ ಬಗ್ಗೆ ಕೇಳದೆಯೇ, ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಅದು ಬಡವರು ಮತ್ತು ನಿರ್ಗತಿಕರ ಸೇವೆಯಲ್ಲಿ ತೊಡಗಿದೆ. ಯಾವುದೇ ಪ್ರಚಾರ ಅಥವಾ ಲೈಮ್ಲೈಟ್ಗೆ ಬರಬೇಕು ಎಂಬ ಹಪಹಪಿ ಇಲ್ಲದೆಯೇ ಕಾರ್ಯವನ್ನು ಸ್ವಯಂಸೇವಕರು ಮಾಡುತ್ತಿದ್ದಾರೆ ಮತ್ತು ಫೋಟೋಗಾಗಿ ಸ್ವಯಂಸೇವಕರು ಯಾವತ್ತು ಯಾವ ಸೇವೆಯನ್ನೂ ಮಾಡುವುದಿಲ್ಲ.
ಹಲವು ಸಂದರ್ಭಗಳಲ್ಲಿ ಸ್ವಯಂಸೇವಕರು ಬಿಕ್ಕಟ್ಟಿಗೆ ಸ್ಪಂದಿಸುವುದರಲ್ಲಿ ಮೊದಲಿಗರಾಗಿರುತ್ತಾರೆ. 2016 ರಲ್ಲಿ ನಡೆದ ಕೋಲ್ಕತ್ತಾ ಫ್ಲೈಓವರ್ ದುರಂತ ಅಥವಾ 2013ರಲ್ಲಿ ತಮಿಳುನಾಡಿನಲ್ಲಿ ನಡೆದ ಮುಜಾಫರ್ಪುರ-ಯಶವಂತಪುರ ಎಕ್ಸ್ಪ್ರೆಸ್ ರೈಲ್ವೆ ಅಪಘಾತದಲ್ಲಿ ಮೊದಲು ಸ್ಪಂದಿಸಿದ್ದು ಸಂಘದ ಸ್ವಯಂಸೇವಕರು. ಸ್ವಯಂಸೇವಕರು ಪ್ರೇರಣಾದಾಯಿಗಳು ಮತ್ತು ಶಿಸ್ತುಬದ್ಧತೆ ಹೊಂದಿದವರು. ಶಾಖೆಯ ಮೂಲಕ ಅವರು ಇದನ್ನೆಲ್ಲ ಮೈಗೂಡಿಸಿಕೊಂಡಿದ್ದಾರೆ. ಯಾವುದೇ ಜಾತಿ ತಾರತಮ್ಯವಿಲ್ಲದೆ ಅವರು ಬಡವರಿಗೆ, ನಿರ್ಗತಿಕರಿಗೆ ಸಹಾಯಹಸ್ತವನ್ನು ನೀಡುತ್ತಾರೆ.
ಇನ್ನೊಂದೆಡೆ, ಪ್ರತಿಷ್ಠಿತ ಎಡಪಂಥೀಯ ಚಿಂತಕರು ಯಾವಾಗಲೂ ಸಲಹೆಗಳನ್ನು ನೀಡುವುದರಲ್ಲಿ ಮತ್ತು ವಕಾಲತ್ತು ವಹಿಸುವುದರಲ್ಲಿಯೇ ಕಾಲಕಳೆಯುತ್ತಾರೆ. ಆದರೆ ಸಂಘ ಸದಾ ತಳ ಮಟ್ಟಕ್ಕಿಳಿದು ಬಡವರನ್ನು ಮೇಲೆತ್ತುವ ಕಾರ್ಯವನ್ನು ಮಾಡುತ್ತದೆ. ಅದೂ ಯಾವುದೇ ಸದ್ದು-ಗದ್ದಲವಿಲ್ಲದೆ. ಕ್ರೈಸ್ತ ಸಂಸ್ಥೆಗಳು ವಿದೇಶದಿಂದ ಭಾರತಕ್ಕೆ ದೇಣಿಗೆ ತರುವಲ್ಲಿ ಹೆಚ್ಚು ನಿಸ್ಸೀಮರು. ಉದಾಹರಣೆಗೆ, ಐಯಾನ್ ಚಾರಿಟೇಬಲ್ ಟ್ರಸ್ಟ್ 2015- 16 ರ ಸಾಲಿನಲ್ಲಿ ವಿದೇಶದಿಂದ 200 ಕೋಟಿ ರೂಪಾಯಿಗಳ ದೇಣಿಗೆ ತಂದಿದೆ. ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ಸಂದರ್ಭದಲ್ಲಿ ಇವರು ಸಾಮಾಜಿಕ ಸೇವೆಯನ್ನು ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ, ಗ್ರಾಮೀಣ ಮಹಾರಾಷ್ಟ್ರದಲ್ಲಿ ಬೈಬಲ್ಗಳನ್ನು ವಿತರಣೆ ಮಾಡಿದ್ದಾರೆ.
ಅದೇ ರೀತಿ ಇಸ್ಲಾಮಿಕ್ ಸಂಸ್ಥೆಗಳು ಕೂಡ ತಮ್ಮ ಧಾರ್ಮಿಕ ಸ್ವಾರ್ಥಕ್ಕಾಗಿ ಸಮಾಜ ಸೇವೆಗಳನ್ನು ಮಾಡುತ್ತಿವೆ. 2013ರಲ್ಲಿ ಯುರೋಪಿನ ಪಾರ್ಲಿಮೆಂಟ್ ಪ್ರಕಟಿಸಿದ, ‘The Involvement of salafism/ wahhabism in the support and supply of arms to Rebel groups around the world” ಎಂಬ ವರದಿಯೂ ಕಣ್ಣು ತೆರೆಸುವಂತಿದೆ. 2006ರಲ್ಲಿ ಕೇವಲ ಒಂದೇ ವರ್ಷದಲ್ಲಿ, ಸೌದಿ ಅರೇಬಿಯಾ ಆಗ್ನೇಯ ಏಷ್ಯಾದಲ್ಲಿ ವಾಹಬಿಸಂ ಅನ್ನು ವಿಸ್ತರಣೆ ಮಾಡಲು 10 ಬಿಲಿಯನ್ ಡಾಲರ್ ಅನ್ನು ಬಳಸಿದೆ. ಪ್ರಜಾಪ್ರಭುತ್ವವನ್ನು ಹೆಚ್ಚು ನೆಚ್ಚಿಕೊಂಡಿರುವ ಆಗ್ನೇಯ ಏಷ್ಯಾಗೆ ಇದು ಅಪಾಯಕಾರಿಯಾದ ಸಂಗತಿಯೂ ಹೌದು. ಇದೇ ರೀತಿ ಗಲ್ಫ್ ರಾಷ್ಟ್ರಗಳು ಇಸ್ಲಾಮನ್ನು ಹರಡಲು ವಿವಿಧ ದೇಶಗಳಿಗೆ ಸಾಕಷ್ಟು ದೇಣಿಗೆಯನ್ನು ಹರಿಸುತ್ತಿವೆ.
ಹೀಗಾಗಿ, ಸಾಗರಿಕಾ ಘೋಷ್ ಅವರಿಗೆ ನಾನು ಹೇಳಬಯಸುವುದೇನೆಂದರೆ, ಭವಿಷ್ಯದಲ್ಲಿ ಯಾವುದೇ ಬಿಕ್ಕಟ್ಟು ಉದ್ಭವಿಸಿದರೂ ಕೂಡ ನೀವು ಅಲ್ಲಿ ಸಂಘದ ಸ್ವಯಂಸೇವಕರು ನಿಸ್ವಾರ್ಥವಾಗಿ ಪ್ರಚಾರದ ಹಂಗಿಲ್ಲದೆ ಹಸಿದವರ ಮತ್ತು ನಿರ್ಗತಿಕರ ಸೇವೆಯಲ್ಲಿ ತೊಡಗಿರುವುದನ್ನು ನೀವು ನೋಡುತ್ತೀರಿ. ನಿಮ್ಮಂತಹ, ಬರ್ಕಾ ದತ್ ಅವರಂತಹ ಎಡಪಂಥೀಯ ಚಿಂತಕರು ಕೇವಲ ಅನಗತ್ಯ ವಿಚಾರಗಳನ್ನು ಕೆದಕುತ್ತಾ ಕಾಲಕಳೆಯುವುದರಲ್ಲಿ ನಿರತರಾಗಿರುತ್ತೀರಿ.
ಮೂಲ ಲೇಖನ : ಶ್ರುತಿಕರ್ ಅಭಿಜಿತ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.