ಹನುಮಾನ್ ಚಾಲಿಸಾ ಎಂಬುದು 40 ಕಾವ್ಯಾತ್ಮಕ ಪದ್ಯಗಳ ಒಂದು ಗುಂಪಾಗಿದ್ದು, ಭಗವಾನ್ ರಾಮನ ಭಕ್ತನಾದ ಹನುಮಂತನಿಗೆ ಸಮರ್ಪಿಸಲಾಗಿದೆ. ಇದನ್ನು ತುಳಸಿದಾಸರು ಅವರು ಮೊಘಲ್ ಚಕ್ರವರ್ತಿ ಔರಂಗಜೇಬನ ಜೈಲಿನಲ್ಲಿದ್ದಾಗ ಸಂಯೋಜಿಸಿದ್ದಾರೆ. ಪ್ರಭುವನ್ನು ತನಗೆ ತೋರಿಸಬೇಕೆಂದು ಔರಂಗಜೇಬ್ ತುಳಸಿದಾಸನಿಗೆ ಸವಾಲು ಹಾಕಿದಾಗ, ರಾಮನನ್ನು ನಿಜವಾದ ಭಕ್ತಿಯಿಂದ ಮಾತ್ರ ನೋಡಬಹುದಾಗಿದೆ ಎಂದು ತುಳಸಿದಾಸ ಉತ್ತರಿಸುತ್ತಾನೆ. ಇದು ಚಕ್ರವರ್ತಿಗೆ ಕೋಪವನ್ನುಂಟುಮಾಡಿತು ಮತ್ತು ಅವನು ಕವಿಯನ್ನು ಕಂಬಿಗಳ ಹಿಂದೆ ಇಟ್ಟ.
ತುಳಸಿದಾಸರು ತನ್ನ ಪದ್ಯವನ್ನು ಪೂರ್ಣಗೊಳಿಸಿದಾಗ ಮತ್ತು ಚಾಲಿಸಾವನ್ನು ಪಠಿಸಿದಾಗ ಕೋತಿಗಳ ಸೈನ್ಯವು ದೆಹಲಿಯನ್ನು ಬಂದು ಸಂಪೂರ್ಣವಾಗಿ ಆವರಿಸಿತ್ತು ಎಂದು ಹೇಳಲಾಗುತ್ತದೆ. ಹನುಮಾನ್ ಚಾಲೀಸಾ ಓದುವುದರಿಂದ ಹಲವಾರು ಲಾಭಗಳು ಸಿಗುತ್ತವೆ ಎಂಬುದು ನಂಬಿಕೆಯಾಗಿದೆ.
ಹನುಮಾನ್ ಚಾಲಿಸಾವನ್ನು ಯಾರು ಬೇಕಾದರೂ ಓದಬಹುದು. ಹನುಮಾನ್ ಚಾಲಿಸಾ ಸ್ನಾನ ಮಾಡಿದ ನಂತರ ಬೆಳಿಗ್ಗೆ ಓದುವುದು ಒಳಿತು. ಸೂರ್ಯಾಸ್ತದ ನಂತರ ಓದುವವರು ಕೈ, ಕಾಲು ಮತ್ತು ಮುಖವನ್ನು ತೊಳೆಯಬೇಕು.
ಹನುಮಾನ್ ಚಾಲಿಸಾ ಪಠಣದ ಕೆಲವು ಆಧ್ಯಾತ್ಮಿಕ ಪ್ರಯೋಜನಗಳು ಇಲ್ಲಿವೆ:
1. ಹನುಮಾನ್ ಚಾಲಿಸಾವನ್ನು ಪಠಿಸುವುದರಿಂದ ಹನುಮಂತ ನಿರ್ಣಾಯಕ ಕಠಿಣ ಸಮಸ್ಯೆಗಳನ್ನು ಎದುರಿಸಲು ನಮ್ಮ ಜೊತೆ ಭಾಗಿಯಾಗುತ್ತಾನೆ ಮತ್ತು ದುಷ್ಟಶಕ್ತಿ ಮತ್ತು ನಕಾರಾತ್ಮಕ ಶಕ್ತಿಯನ್ನು ನಿವಾರಿಸಲು ಸಹಾಯ ಮಾಡುತ್ತಾನೆ ಎಂದು ನಂಬಿಕೆ ಇದೆ.
2. ಹನುಮಾನ್ ಚಾಲಿಸಾ ಪಠಣವು ಸಾಡೆ ಸಾತಿ ಅಂದರೆ ಶನಿ ಸಮಸ್ಯೆಯ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಶನಿಯಿಂದ ಬಳಲುತ್ತಿರುವವರು ಶಾಂತಿ ಮತ್ತು ಸಮೃದ್ಧಿಗಾಗಿ ಶನಿವಾರ ಹನುಮಾನ್ ಚಾಲಿಸಾವನ್ನು ಓದಿದರೆ ಸಹಾಯ ಆಗುತ್ತದೆ.
3. ಹನುಮಾನ್ ಚಾಲಿಸಾ ಅನ್ನು ಮಲಗುವ ಸಂದರ್ಭದಲ್ಲಿ ದಿಂಬಿನ ಕೆಳಗೆ ಇಟ್ಟರೆ ದುಃಸ್ವಪ್ನದಿಂದ ತೊಂದರೆಗೀಡಾದವರಿಗೆ ನೆರವಾಗುತ್ತದೆ.
4. ಎಲ್ಲಕ್ಕಿಂತ ಹೆಚ್ಚಾಗಿ, ಹನುಮಾನ್ ಚಾಲಿಸಾ ಸಮರ್ಪಿತ ಗೀತೆಗಳು ಕೆಟ್ಟ ಅನುಭವಗಳ ಆಘಾತವನ್ನು ನಿವಾರಿಸಬಲ್ಲದು.
5. ಹಿಂದೆ ಮಾಡಿದ ಕೆಟ್ಟ ಕಾರ್ಯಗಳ ಕರ್ಮ ಪರಿಣಾಮಗಳನ್ನು ತೊಡೆದುಹಾಕಲು ಬಯಸಿದವರು ಹನುಮಾನ್ ಚಾಲಿಸಾ ಓದುವುದು ಪ್ರಯೋಜನಕಾರಿ.
6. ಹನುಮಾನ್ ಚಾಲಿಸಾವನ್ನು ಅತ್ಯಂತ ಸಮರ್ಪಣೆಯೊಂದಿಗೆ ಓದುವವರು ತಮ್ಮ ಪ್ರಯತ್ನಗಳಲ್ಲಿನ ಅಡೆತಡೆಗಳನ್ನು ತೆಗೆದುಹಾಕಲು ಭಗವಾನ್ ಹನುಮಂತನ ದೈವಿಕ ರಕ್ಷಣೆಯನ್ನು ಪಡೆಯುತ್ತಾರೆ.
7. ಒತ್ತಡದಿಂದ ಬಳಲುತ್ತಿರುವವರು ಹನುಮಾನ್ ಚಾಲೀಸಾವನ್ನು ಆರಾಮದಾಯಕತೆ ಪಡೆಯಲು ಮತ್ತು ಜೀವನವನ್ನು ನಿಯಂತ್ರಣದಲ್ಲಿಡಲು ಓದಬೇಕು.
8. ಭಗವಾನ್ ಹನುಮಾನ್ ಅಪಘಾತಗಳನ್ನು ತಡೆಗಟ್ಟಬಲ್ಲ ಮತ್ತು ಯಶಸ್ವಿ ಪ್ರವಾಸವನ್ನು ಖಚಿತಪಡಿಸಿಬಲ್ಲ ಎಂದು ನಂಬಲಾಗಿದೆ, ಅದಕ್ಕಾಗಿಯೇ ಅನೇಕ ಜನರು ತಮ್ಮ ಕಾರುಗಳಲ್ಲಿ ಹನುಮಂತನ ವಿಗ್ರಹಗಳನ್ನು ಅಳವಡಿಸುತ್ತಾರೆ.
9. ಜ್ಞಾನೋದಯವನ್ನು ಬಯಸುವವರಿಗೆ, ಹನುಮಾನ್ ಚಾಲಿಸಾ ಓದುವುದು ಬುದ್ಧಿವಂತಿಕೆ ಮತ್ತು ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ.
10. ಹನುಮಾನ್ ಚಾಲಿಸಾವನ್ನು ಪಠಿಸುವುದು ಕೆಟ್ಟ ಸಂಗದಿಂದ ವಿಚಲಿತರಾದ ಜನರಿಗೆ ಸಹಾಯ ಮಾಡುತ್ತದೆ. ಕೆಟ್ಟ ಅಭ್ಯಾಸಗಳಿಗೆ ಬಿದ್ದವರ ಸುಧಾರಣೆಗೆ ಇದು ಸಹಾಯ ಮಾಡುತ್ತದೆ.
11. ಇದು ಭಿನ್ನಾಭಿಪ್ರಾಯಗಳನ್ನು ನಿವಾರಿಸುತ್ತದೆ ಮತ್ತು ಒಮ್ಮತ ಮತ್ತು ಸಂತೃಪ್ತಿಯನ್ನು ಉತ್ತೇಜಿಸುತ್ತದೆ. ಹನುಮಾನ್ ಚಾಲಿಸಾವನ್ನು ಪಠಿಸುವುದರಿಂದ ಸಾಮರಸ್ಯವನ್ನು ಉತ್ತೇಜನಗೊಳ್ಳುತ್ತದೆ ಮತ್ತು ಒಬ್ಬರಿಗೆ ಅರಿವು ಮೂಡಿಸುವ ಮೂಲಕ ಅನಗತ್ಯ ವಾದಗಳನ್ನು ನಿವಾರಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.