ಪುಣೆ: ಪುಣೆ ಮೂಲದ ಮೊಲೆಕ್ಯುಲರ್ ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಮೊದಲ ಭಾರತ ನಿರ್ಮಿತ ಕೋವಿಡ್-19 ಟೆಸ್ಟ್ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ವಾಣಿಜ್ಜಿಕ ಅನುಮೋದನೆಯೂ ದೊರೆತಿದೆ.
ಮಹತ್ವದ 6 ವಾರಗಳೊಳಗೆ ಈ ಟೆಸ್ಟ್ ಕಿಟ್ ಅನ್ನು ಸಂಸ್ಥೆಯು ಅಭಿವೃದ್ಧಿಪಡಿಸಿದ್ದು ನಿಜಕ್ಕೂ ಶ್ಲಾಘನೀಯ ಕಾರ್ಯವಾಗಿದೆ.
ಎಫ್ಡಿಎ/ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಜೇಷನ್ (ಸಿಡಿಎಸ್ಸಿಒ)ನಿಂದ ವಾಣಿಜ್ಜಿಕ ಅನುಮೋದನೆಯನ್ನು ಪಡೆದುಕೊಂಡು ಮೊದಲ ಟೆಸ್ಟಿಂಗ್ ಕಿಟ್ ಆಗಿದೆ. ಇದಕ್ಕೆ ಮೈಲ್ಯಾಬ್ ಪ್ಯಾತೊಡಿಟೆಕ್ಟ್ ಕೋವಿಡ್-19 ಕ್ವಾಲಿಟೇಟಿವ್ ಪಿಸಿಆರ್ ಕಿಟ್ ಎಂದು ಹೆಸರಿಡಲಾಗಿದೆ.
ಮೈಲ್ಯಾಬ್ ಕಂಪನಿಯು ಐಸಿಎಂಆರ್ ಇವಲ್ಯೂಷನ್ನಲ್ಲಿ ಶೇಕಡಾ ನೂರರಷ್ಟು ಸೆನ್ಸಿಟಿವಿಟಿ ಮತ್ತು ಶೇಕಡಾ ನೂರರಷ್ಟು ಸ್ಪೆಸಿಫಿಸಿಟಿ ಪಡೆದ ಮೊದಲ ಸಂಸ್ಥೆಯಾಗಿದೆ.
“ಮೇಕ್ ಇನ್ ಇಂಡಿಯಾ ಉತ್ತೇಜನ ದೊಂದಿಗೆ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರದ ಪ್ರೋತ್ಸಾಹದೊಂದಿಗೆ ಕೋವಿಡ್-19 ಕಿಟ್ ಅನ್ನು WHO/CDC ಮಾನದಂಡಗಳ ಅನ್ವಯ ಅಭಿವೃದ್ಧಿಪಡಿಸಲಾಗಿದೆ. ದಾಖಲೆ ಸಮಯದಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಪರೀಕ್ಷೆಗೊಳಪಡಿಸಲಾಗಿದೆ” ಎಂದು ಮೈಲ್ಯಾಬ್ ಡಿಸ್ಕವರಿ ಸೊಲ್ಯೂಷನ್ಸ್ ಕಾರ್ಯನಿರ್ವಾಹಕ ನಿರ್ದೇಶಕ ಹಸ್ಮುಖ್ ರಾವಲ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.