ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2020-21ರ ಆರ್ಥಿಕ ವರ್ಷದಲ್ಲಿ 10 ಭೂ ವೀಕ್ಷಣೆ ಮತ್ತು ಮೂರು ಸಂವಹನ ಉಪಗ್ರಹಗಳ ಉಡಾವಣೆ ಸೇರಿದಂತೆ 36 ಮಿಷನ್ ಅನ್ನು ಆಯೋಜಿಸಲಿದೆ.
ರಾಜ್ಯಸಭೆಯಲ್ಲಿನ ಪ್ರಶ್ನೆಗೆ ಲಿಖಿತ ಉತ್ತರದ ಮೂಲಕ ಈ ಮಾಹಿತಿಯನ್ನು ಕೇಂದ್ರ ಬಾಹ್ಯಾಕಾಶ ಸಚಿವ ಡಾ.ಜಿತೇಂದ್ರ ಸಿಂಗ್ ಬಹಿರಂಗಪಡಿಸಿದ್ದಾರೆ.
2020-21ರ ಆರ್ಥಿಕ ವರ್ಷದಲ್ಲಿ ಉಪಗ್ರಹಗಳು ಮತ್ತು ವಾಹಕಗಳನ್ನು ಉಡಾಯಿಸುವುದು ಸೇರಿದಂತೆ 36 ಮಿಷನ್ಗಳನ್ನು ಇಸ್ರೋ ಯೋಜಿಸಿದೆ ಎಂದು ಬಾಹ್ಯಾಕಾಶ ಇಲಾಖೆಯ ಹೇಳಿಕೆ ತಿಳಿಸಿದೆ.
ಇಸ್ರೋ ಯೋಜನೆಗಳಲ್ಲಿ 10 ಭೂ ವೀಕ್ಷಣಾ ಉಪಗ್ರಹಗಳ, 10 ಪಿಎಸ್ಎಲ್ವಿ ಉಡಾವಣೆಗಳು, ಮೂರು ಸಂವಹನ ಉಪಗ್ರಹಗಳು, ಮೂರು ಜಿಎಸ್ಎಲ್ವಿ ಕಾರ್ಯಾಚರಣೆಗಳು, ಮೂರು ಬಾಹ್ಯಾಕಾಶ ವಿಜ್ಞಾನ ಉಪಗ್ರಹಗಳು, ಎರಡು ಸಂಚರಣೆ ಉಪಗ್ರಹಗಳು, ಒಂದು ತಂತ್ರಜ್ಞಾನ ಪ್ರದರ್ಶಕ ಮತ್ತು ಒಂದು ಎಸ್ಎಸ್ಎಲ್ವಿ ಮಿಷನ್ ಸೇರಿವೆ.
ಅಲ್ಲದೆ, ಭಾರತೀಯ ಬಾಹ್ಯಾಕಾಶ ಸಂಸ್ಥೆ ತನ್ನ ಮಹತ್ವಾಕಾಂಕ್ಷೆಯ ಗಗನಯಾನ ಕಾರ್ಯಾಚರಣೆಯ ಮಾನವರಹಿತ ಯೋಜನೆಯನ್ನು ಸಹ ಆರಂಭಿಸಲಿದೆ. 2022ರಲ್ಲಿ ಪ್ರಾರಂಭವಾಗಲಿರುವ ಗಗನಯಾನ ಭಾರತದ ಬಾಹ್ಯಾಕಾಶಕ್ಕೆ ಮೊದಲ ಮಾನವ ಹಾರಾಟದ ಕಾರ್ಯಾಚರಣೆಯಾಗಿದೆ.
ಪ್ರಸ್ತುತ ನಡೆಯುತ್ತಿರುವ 2019-20ರ ಆರ್ಥಿಕ ವರ್ಷದಲ್ಲಿ ಒಟ್ಟು ಉದ್ದೇಶಿತ ಕಾರ್ಯಾಚರಣೆಗಳಲ್ಲಿ 11 ಕಾರ್ಯಗಳು ಪೂರ್ಣಗೊಂಡಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.