ನವದೆಹಲಿ: ಕೊರೊನಾವೈರಸ್ ಅಥವಾ COVID-19 ಬಗ್ಗೆ ನಾವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಭಾರತ ಸರ್ಕಾರ ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸಾಪ್ನಲ್ಲಿ ಅಧಿಕೃತ ಚಾಟ್ಬಾಟ್ ಅನ್ನು ಪ್ರಾರಂಭಿಸಿದೆ. ವಾಟ್ಸಾಪ್ ಚಾಟ್ಬಾಟ್ ಅನ್ನು MyGov ಕೊರೋನಾ ಹೆಲ್ಪ್ಡೆಸ್ಕ್ ಎಂದು ಕರೆಯಲಾಗುತ್ತದೆ ಮತ್ತು ಇದು ಎಲ್ಲಾ ವಾಟ್ಸಾಪ್ ಬಳಕೆದಾರರಿಗೂ ಲಭ್ಯವಿದೆ.
ಇದಕ್ಕಾಗಿ ನಾವು ನಮ್ಮ ಫೋನ್ನಲ್ಲಿ 9013151515 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು ಮತ್ತು ನಮ್ಮ ಪ್ರಶ್ನೆಗೆ ಪ್ರತಿಕ್ರಿಯೆ ಪಡೆಯಲು ವಾಟ್ಸಾಪ್ನಲ್ಲಿನ ಈ ಬಾಟ್ಗೆ ಸಂದೇಶವನ್ನು ಕಳುಹಿಸಬೇಕು. ಈ ಬಾಟ್ ನೀಡುವ ಪ್ರತಿಕ್ರಿಯೆಗಳು ಸ್ವಯಂಚಾಲಿತವಾಗಿರುತ್ತವೆ, ಇದು ವೇಗವಾಗಿ ಹರಡುವ ಅನಾರೋಗ್ಯದ ಬಗ್ಗೆ ಜನರು ಹೊಂದಿರುವ ಹಲವು ಪ್ರಶ್ನೆಗಳಿಗೆ ಸ್ಪಷ್ಟೀಕರಣ ಮತ್ತು ಸರಿಯಾದ ಮಾಹಿತಿಯನ್ನು ಒದಗಿಸುತ್ತದೆ.
ಈ ವಾಟ್ಸಾಪ್ ಚಾಟ್ಬಾಟ್ನ ಹೊರತಾಗಿ, ಸರ್ಕಾರವು ಕೊರೊನಾವೈರಸ್ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ (+ 91-11-23978046 ಮತ್ತು ಟೋಲ್ ಫ್ರೀ 1075) ಮತ್ತು ನಾಗರಿಕರು ಸಂಪರ್ಕದಲ್ಲಿರಲು ಅಧಿಕೃತ ಇಮೇಲ್ ಐಡಿ (ncov2019@gov.in) ಅನ್ನು ಸಹ ಸ್ಥಾಪಿಸಿದೆ. ಕೊರೊನಾವೈರಸ್ ಬಗ್ಗೆ ಯಾವುದೇ ಪ್ರಶ್ನೆ ಇದ್ದಲ್ಲಿ ಅದಕ್ಕೆ ಉತ್ತರವನ್ನು ಇಲ್ಲಿ ಪಡೆದುಕೊಳ್ಳಬಹುದು.
ವಾಟ್ಸ್ಆ್ಯಪ್ನಲ್ಲಿ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳು ವಿಪರೀತವಾಗಿರುವ ಸಮಯದಲ್ಲಿ ಇದು ಒಂದು ಉತ್ತಮ ಕ್ರಮವಾಗಿದೆ, ಇದರಲ್ಲಿ ಕೊರೊನಾವೈರಸ್ಗೆ ಸಂಭವನೀಯ ಚಿಕಿತ್ಸೆಗಳು ಮತ್ತು ಕೊರೊನಾವೈರಸ್ ಸೋಂಕಿನಿಂದ ನಮ್ಮನ್ನು ಉಳಿಸಬಹುದಾದ ತಡೆಗಟ್ಟುವಿಕೆ ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.
ನ್ಯಾಷನಲ್ ಫಾರ್ಮಾಸ್ಯುಟಿಕಲ್ಸ್ ಪ್ರೈಸಿಂಗ್ ಅಥಾರಿಟಿ (ಎನ್ಪಿಪಿಎ) ಟ್ವೀಟ್ನಲ್ಲಿ, “ಸರ್ಕಾರವು ಕೊರೋನಾದಲ್ಲಿ ವಾಟ್ಸಾಪ್ ಚಾಟ್ಬಾಟ್ ಅನ್ನು ರಚಿಸಿದೆ. ಇದನ್ನು Mygov ಕೊರೊನಾ ಹೆಲ್ಪ್ಡೆಸ್ಕ್ ಎಂದು ಕರೆಯಲಾಗುತ್ತದೆ. ವಾಟ್ಸಾಪ್ನಲ್ಲಿ 9013151515 ಸಂಖ್ಯೆಯನ್ನು ಸೇವ್ ಮಾಡಿಕೊಳ್ಳಬೇಕು, ಕೊರೋನಾಗೆ ಸಂಬಂಧಿಸಿದ ಪ್ರಶ್ನೆಗಳಿಗೆ ನಾವು ಇಲ್ಲಿ ಸ್ವಯಂಚಾಲಿತ ಪ್ರತಿಕ್ರಿಯೆಯನ್ನು ಪಡೆಯಬಬಹುದು” ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.